ಲವ್ ಜಿಹಾದ್ಗೆ ಮತ್ತೋರ್ವ ಯುವತಿ ಬಲಿ | ಕರೆಂಟ್ ಶಾಕ್ ಕೊಟ್ಟು ಹೆಂಡತಿಯನ್ನು ಹೂತು ಹಾಕಿದ ಗಂಡ | ಹೆಣ ಪತ್ತೆಯಾಗಿದ್ದೇ ರೋಚಕ
ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯನ್ನು ದಾಟಿ, ಅದೆಷ್ಟೋ ಮಂದಿ ಅಂತರ್ಜಾತಿ ವಿವಾಹವಾದ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ನಿದರ್ಶನ ಕೂಡ ಇವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ ಬಿದ್ದು ಅಂತರ್ಜಾತಿ ವಿವಾಹವಾಗಿ ತೆರೆಮರೆಯಲ್ಲಿ ಲವ್ ಜಿಹಾದ್ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದ್ದು ಸಾವಿನ ಕದ ತಟ್ಟುತ್ತಿರುವ ಪ್ರಕರಣಗಳೂ ಕೂಡ ನಡೆಯುತ್ತಿವೆ. ಇದೇ ರೀತಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ.
ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದು, ಆ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಉಮಾ ಶರ್ಮಾ ಹಾಗೂ ವಾಸಿಮ್ ಅಹ್ಮದ್ ಮದುವೆಯಾಗಿ ಏಳು ವರ್ಷ ದಾಂಪತ್ಯ ಜೀವನ ನಡೆಸಿದ್ದಾರೆ. ಈ ದಂಪತಿಗಳಿಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದು, ಈ ನಡುವೆ ಇಬ್ಬರ ನಡುವೆ ಮನಸ್ಥಾಪ ಭುಗಿಲೆದ್ದಿದೆ.
ಮನೆಯಲ್ಲಿ ದಂಪತಿಗಳ ನಡುವೆ ಕೋಪತಾಪ ಸಾಮಾನ್ಯವಾಗಿ ನಡೆಯುತ್ತಿತ್ತು. ಇದೇ ಕೋಪದಲ್ಲಿ ಗಂಡ ವಾಸಿಮ್ ಅಹ್ಮದ್, ಪತ್ನಿ ಉಮಾ ಶರ್ಮಾಳನ್ನು ಕ್ರೂರವಾಗಿ ಥಳಿಸಿದ ನಂತರ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಳಿಕ ತನ್ನ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶವವನ್ನು ಹೂತು ಹಾಕಿರುವ ಘಟನೆ ವರದಿಯಾಗಿದೆ.
ಏಳು ವರ್ಷಗಳ ಹಿಂದೆ ಮುಸ್ಲಿಂ ಯುವಕನೊಂದಿಗೆ ವಿವಾಹವಾದ ಉಮಾ ಶರ್ಮಾ, ನಂತರ ತನ್ನ ಹೆಸರನ್ನು ಅಕ್ಷಾ ಫಾತ್ಮಾ ಎಂದು ಬದಲಾಯಿಸಿಕೊಂಡಿದ್ದಾಳೆ. ಮೊದ ಮೊದಲು ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ಮನಸ್ತಾಪ ಹೆಚ್ಚಾಗಿ ಸಂಬಂಧದ ನಡುವೆ ಬಿರುಕು ಮೂಡಲು ಕಾರಣವಾಗಿದೆ. ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಉಮಾ ಶರ್ಮಾಳನ್ನು ಆಕೆಯ ಪತಿ ವಾಸಿ ಅಹ್ಮದ್ ಕೊಲೆ ಮಾಡಿ, ಮೃತದೇಹವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಈ ಘಟನೆ ನಡೆದ ವೇಳೆ ವಾಸಿಮ್ ಅಹ್ಮದ್ ತಾಯಿ ಆಶಿಯಾ ಬೇಗಂ ಊರಿನಲ್ಲಿ ಇರಲಿಲ್ಲ ಹಾಗಾಗಿ, ಘಟನೆ ನಡೆದ ಎರಡು ದಿನಗಳ ಬಳಿಕ ಆಶಿಯಾ ತನ್ನ ಸೊಸೆಯ ಬಗ್ಗೆ ವಿಚಾರಿಸಿದಾಗ ಪತ್ನಿ ಹೊರಗೆ ಹೋಗಿದ್ದಾಳೆ ಎಂದು ಪತಿ ವಾಸಿಮ್ ಅಹ್ಮದ್ ಹೇಳಿಕೊಂಡಿದ್ದು, ಆದರೆ ಸೊಸೆ ಕಾಣದಿದ್ದಾಗ ಚಿಂತಿತಳಾದ ಅತ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.ದೂರಿನ ಅನ್ವಯ, ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಬಂದು ಮನೆ ಪರಿಶೀಲನೆ ನಡೆಸಿದಾಗ, ನೆಲದಲ್ಲಿ ಬಿರುಕು ಬಿಟ್ಟಿರುವ ಸಂಗತಿ ತಿಳಿದಿದ್ದು, ಹೀಗಾಗಿ ಅನುಮಾನಗೊಂಡ ಪೋಲೀಸರು ನೆಲವನ್ನು ಅಗೆದು ನೋಡಿದಾಗ ಉಮಾ ಶರ್ಮಾಳ ಮೃತದೇಹ ಹೂತಿರುವುದು ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿ ವಾಸಿಮ್ ಅಹ್ಮದ್ನನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.