ಬೆಳಂದೂರು ಮಹಿಳೆಗೆ ಹಲ್ಲೆ ಪ್ರಕರಣ ,ವರದಕ್ಷಿಣೆ ಕಿರುಕುಳವಲ್ಲ ಕುಟುಂಬದೊಳಗಿನ ಭಿನ್ನಾಭಿಪ್ರಾಯ-ಸ್ಪಷ್ಟನೆ

Share the Article

ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಅತ್ತೆ ಮತ್ತು ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ವರದಕ್ಷಿಣೆ ಕಿರುಕುಳವಲ್ಲ ಕುಟುಂಬದೊಳಗಿನ ಭಿನ್ನಾಭಿಪ್ರಾಯ ಎಂದು ಯಶೋಧಾ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಳಂದೂರು ಗ್ರಾಮದ ಅಮೈ ನಿವಾಸಿ ಕುಲದೀಪ್ ಅವರ ಪತ್ನಿ ಸರಸ್ವತಿ ಎಂಬವರ ಮೇಲೆ ಕುಲದೀಪ್ ಅವರ ತಾಯಿ ಬಾಲಕಿ ಮತ್ತು ಅಕ್ಕ ಯಶೋಧಾ ಅವರು ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆಯೊಡ್ಡಿ ಹಲ್ಲೆ ಮಾಡಿದ್ದಾರೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸರಸ್ವತಿ ಅವರು ಆರೋಪಿಸಿದ್ದರು.

ಈ ಕುರಿತಂತೆ ಯಶೋಧಾ ಅವರು ಸ್ಪಷ್ಟನೆ ನೀಡಿದ್ದಾರೆ.

Leave A Reply