Paytm: ಪೇಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದ್ದು ನಾವು ಅಗತ್ಯವಾಗಿ ಪಾವತಿಸಬೇಕಾದ ಸೇವೆಗಳಾದ ಗ್ಯಾಸ್ ಬಿಲ್, ವಾಟರ್ ಬಿಲ್, ಮೊಬೈಲ್ ರೀಚಾರ್ಜ್ , ಡಿಟಿಎಚ್ ರೀಚಾರ್ಜ್, ವಿದ್ಯುತ್ ಬಿಲ್ ಹೀಗೆ ಅನೇಕ ಬಿಲ್ಗಳನ್ನು ಆನ್ ಲೈನ್ ಲ್ಲಿ ಪೇಟಿಎಂ ಮೂಲಕ ಕಟ್ಟಬಹುದಾಗಿದೆ. ಹೌದು ಪೇಟಿಎಂ ಯಾವುದೇ ಪರಿಚಯದ ಅಗತ್ಯವಿಲ್ಲದ ಆನ್‌ಲೈನ್ ಪಾವತಿ ವೇದಿಕೆ. ರೀಚಾರ್ಜ್‌ಗಳಿಂದ ಹಿಡಿದು ಮನೆ ಬಾಡಿಗೆಯವರೆಗೆ, ಯಾವುದೇ ಪಾವತಿಯನ್ನು ಪೇಟಿಎಂನಲ್ಲಿ ಸುಲಭವಾಗಿ ಮಾಡಬಹುದು. ಅದಲ್ಲದೆ ಪೇಟಿಎಂ ಯುಪಿಐ ಪಾವತಿಗಳನ್ನು ಸಹ ಹೊಂದಿದೆ. ಪೇಟಿಎಂ ಇತ್ತೀಚೆಗೆ UPI ಗ್ರಾಹಕರನ್ನು ಗುರಿಯಾಗಿಸಿಕೊಂಡು ಉತ್ಪನ್ನವನ್ನು ಬಿಡುಗಡೆ ಮಾಡಿದೆ ನಮಗೆ ತಿಳಿದಿರುವ ವಿಚಾರವಾಗಿದೆ. ಜೊತೆಗೆ ಪೇಟಿಎಂ ಯುಪಿಐ ವಹಿವಾಟುಗಳಿಗೆ ವಿಮಾ ಯೋಜನೆಯನ್ನು ತಂದಿದೆ. ನೀವು ರೂ.10,000 ವರೆಗಿನ UPI ವಹಿವಾಟುಗಳ ಮೇಲೆ ವಿಮೆಯನ್ನು ಪಡೆಯಬಹುದು ಎಂಬ ಸಿಹಿ ಸುದ್ದಿ ನೀಡಿದೆ.

 

ಹೌದು HDFC ERGO ಜನರಲ್ ಇನ್ಶೂರೆನ್ಸ್ ಸಹಯೋಗದಲ್ಲಿ ‘Paytm ಪೇಮೆಂಟ್ ಪ್ರೊಟೆಕ್ಟ್’ ಎಂಬ ವಿಮಾ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಯುಪಿಐ ಪಾವತಿ ಮಾಡುವವರಿಗೆ ರೂ.10,000 ವರೆಗೆ ವಿಮಾ ರಕ್ಷಣೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಇತ್ತೀಚೆಗೆ ಯುಪಿಐ ವಂಚನೆಗಳು ಹೆಚ್ಚಾಗುತ್ತಿರುವುದು ಗೊತ್ತೇ ಇದೆ. ಪರಿಣಾಮವಾಗಿ, UPI ಪ್ಲಾಟ್‌ಫಾರ್ಮ್ ಬಳಸುವ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಅವರ ಖಾತೆಗಳು ಸೆಕೆಂಡುಗಳಲ್ಲಿ ಖಾಲಿಯಾಗುತ್ತವೆ. ಅವರನ್ನು ರಕ್ಷಿಸಲು ಪೇಟಿಎಂ ಹೊಸ ‘ಪೇಟಿಎಂ ಪೇಮೆಂಟ್ ಪ್ರೊಟೆಕ್ಟ್’ ಸಮೂಹ ವಿಮಾ ಯೋಜನೆಯನ್ನು ತಂದಿದೆ.

UPI ಬಳಕೆದಾರರು ಮೊಬೈಲ್‌ನಲ್ಲಿ ಮೋಸದ ವಹಿವಾಟುಗಳ ವಿರುದ್ಧ ರೂ.10,000 ವರೆಗೆ ರಕ್ಷಣೆ ಪಡೆಯಬಹುದು. ಇದಕ್ಕಾಗಿ ನೀವು ವಾರ್ಷಿಕ ಪ್ರೀಮಿಯಂ ರೂ.30 ಮಾತ್ರ ಪಾವತಿಸಬೇಕಾಗುತ್ತದೆ. ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ವ್ಯಾಲೆಟ್‌ಗಳಾದ್ಯಂತ UPI ಪಾವತಿಗಳನ್ನು ಮಾಡುವವರಿಗೆ ಈ ಕವರೇಜ್ ಲಭ್ಯವಿದೆ. ವರ್ಷಕ್ಕೆ ರೂ.30 ಪ್ರೀಮಿಯಂ ಪಾವತಿಸಿದರೆ ರೂ.10,000 ವರೆಗೆ ವಿಮೆ ಸಿಗುತ್ತದೆ.

ಪೇಟಿಎಂ ಯುಪಿಐ ನಲ್ಲಿ ವಿಮಾ ಪಾಲಿಸಿ ಮಾಡುವ ವಿಧಾನ :

  • ಮೊದಲು, Paytm ಅಪ್ಲಿಕೇಶನ್ ತೆರೆಯಿರಿ
  • ಮತ್ತು ಪಾವತಿ ರಕ್ಷಣೆಗಾಗಿ ಹುಡುಕಿ.
  • ಕೇವಲ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಪಾವತಿ ಮಾಡಲು Proceed to Pay ಕ್ಲಿಕ್ ಮಾಡಿ.
  • ‘Paytm Payment Protect’ ನ ಒಂದು ವರ್ಷದ ಯೋಜನೆಯನ್ನು ಪಡೆಯಬಹುದು.
  • ನೀವು ಪಾವತಿ ರಕ್ಷಣೆ ಯೋಜನೆಯನ್ನು ತೆಗೆದುಕೊಳ್ಳುವ ದಿನಾಂಕದಿಂದ ಒಂದು ವರ್ಷದವರೆಗೆ ಕವರೇಜ್ ಇರುತ್ತದೆ.

ಅದಲ್ಲದೆ ಮೊಬೈಲ್ ವ್ಯಾಲೆಟ್‌ಗಳಲ್ಲಿನ ಮೋಸದ ವಹಿವಾಟುಗಳಿಗೂ ಇದು ಅನ್ವಯಿಸುತ್ತದೆ.ಇನ್ನು Paytm ವರ್ಷಕ್ಕೆ ರೂ.1 ಲಕ್ಷದವರೆಗೆ ಕವರೇಜ್ ಒದಗಿಸುವ ಉತ್ಪನ್ನವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಘೋಷಿಸಿದೆ.

Leave A Reply

Your email address will not be published.