ಟ್ವಿಟರ್ CEO ಪೋಸ್ಟ್ ಗೆ ನಾನು ಸೂಕ್ತನೇ ಎಂದ ಯೂಟ್ಯೂಬರ್ | ಮಸ್ಕ್ ನೀಡಿದ ಉತ್ತರ ಹೀಗಿತ್ತು
ಟ್ವಿಟರ್ ಮಾಲಿಕ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟರ್ ನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ನಾನು ಟ್ವಿಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೇ? ಎಂದು ಪ್ರಶ್ನಿಸಿದ್ದರು. ಇದರಲ್ಲಿ ಶೇಕಡಾ 57ರಷ್ಟು ಜನ ಹೌದು, ನೀವು ಟ್ವಿಟರ್ ಮಾಲಿಕತ್ವದಿಂದ ಕೆಳಗಿಳಿಯಿರಿ ಎಂದರೆ, ಶೇ.43ರಷ್ಟು ಟ್ವಿಟರ್ ಬಳಕೆದಾರರು ಬೇಡ ಎಂದಿದ್ದರು.
ಈ ಸಮೀಕ್ಷೆಯನ್ನು ಗಮನಿಸಿದ ವಿಶ್ವದ ಅತ್ಯಂತ ಪ್ರಸಿದ್ಧ ಯೂಟ್ಯೂಬರ್ ಆದ ಜಿಮ್ಮಿ ಡೊನಾಲ್ಡ್‌ಸನ್ (ಮಿಸ್ಟರ್ ಬೀಸ್ಟ್) ಎಂಬವರು ಎಲೋನ್ ಮಸ್ಕ್‌ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದೇನೆಂದರೆ, ತಾನು ಟ್ವಿಟರ್‌ನ ಹೊಸ ಸಿಇಒ ಆಗಬಹುದೇ? ಎಂದು ಕೇಳಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಎಲ್ಲರಲ್ಲೂ ಮಸ್ಕ್ ಮಾಲಿಕತ್ವದಿಂದ ಕೆಳಗಿಳಿಯುತ್ತಾರಾ ಎಂಬ ಪ್ರಶ್ನೆ ಕಾಡಿದೆ.
ಇದೀಗ ಯುಟ್ಯೂಬರ್ ನ ಪ್ರಶ್ನೆಗೆ ಮಸ್ಕ್ ಪ್ರತಿಕ್ರಿಯೆ ನೀಡಿದ್ದು, “ಇದು ಪ್ರಶ್ನೆಯಿಂದ ಹೊರಗಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ಮಿಸ್ಟರ್ ಬೀಸ್ಟ್ ಅವರು ತಮ್ಮ ಅಸಾಮಾನ್ಯ ವೀಡಿಯೊಗಳಿಂದ ಹೆಸರು ಗಳಿಸಿದ್ದಾರೆ. ಅವರು ಈ ಹಿಂದೆ ತಮ್ಮದೇ ಆದ ಮಿಸ್ಟರ್ ಬೀಸ್ಟ್ ಬರ್ಗರ್ ಎಂಬ ವರ್ಚುವಲ್-ರೆಸ್ಟೋರೆಂಟ್ ಅನ್ನು ಕೂಡ ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಡೊನಾಲ್ಡ್ಸನ್ ಟ್ವಿಟರ್ ನ ನೀತಿಯೊಂದನ್ನು ಖಂಡಿಸಿ, ಎಲೋನ್ ಮಸ್ಕ್ ಗೆ, ನೀವು ಇದೇ ರೀತಿಯ ಕೆಲಸಗಳನ್ನು ಮಾಡುತ್ತಿದ್ದರೆ ಮಾಲಿಕತ್ವದ ಹುದ್ದೆಯಿಂದ ಕೆಳಗಿಳಿಯುವುದೇ ಉತ್ತಮ ಎಂದು ಟ್ವೀಟ್ ಮಾಡಿದ್ದರು.
ಈ ಸಮೀಕ್ಷೆಯ ಫಲಿತಾಂಶಗಳ ನಂತರ ಮಸ್ಕ್ ಟ್ವೀಟ್ ಮಾಡಿದ್ದು, “ಪ್ರಶ್ನೆ ಏನೆಂದರೆ ಟ್ವಿಟರ್ ಸಿಇಒ ಅನ್ನು ಹುಡುಕುತ್ತಿಲ್ಲ, ಬದಲಾಗಿ ಟ್ವಿಟರ್ ಅನ್ನು ಜೀವಂತವಾಗಿಡಬಲ್ಲ ಸಿಇಒ ಅನ್ನು ಹುಡುಕುತ್ತಿದೆ” ಎಂದು ಹೇಳಿದರು. ಒಟ್ಟಾರೆ ಎಲಾನ್ ಮಸ್ಕ್ ಜಾರಿಗೆ ತರುತ್ತಿರುವ ಕಠಿಣ ನೀತಿಯಿಂದಾಗಿ ಟ್ವಿಟರ್ ಬಳಕೆದಾರರು ಈ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದೇ ಹೇಳಬಹುದು.