ಟ್ವಿಟರ್ CEO ಪೋಸ್ಟ್‌ ಗೆ ನಾನು ಸೂಕ್ತನೇ ಎಂದ ಯೂಟ್ಯೂಬರ್‌ | ಮಸ್ಕ್‌ ನೀಡಿದ ಉತ್ತರ ಹೀಗಿತ್ತು

ಟ್ವಿಟರ್‌ ಮಾಲಿಕ ಎಲೋನ್ ಮಸ್ಕ್‌ ಇತ್ತೀಚೆಗೆ ಟ್ವಿಟರ್‌ ನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ನಾನು ಟ್ವಿಟರ್​ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೇ? ಎಂದು​ ಪ್ರಶ್ನಿಸಿದ್ದರು. ಇದರಲ್ಲಿ ಶೇಕಡಾ 57ರಷ್ಟು ಜನ ಹೌದು, ನೀವು ಟ್ವಿಟರ್​ ಮಾಲಿಕತ್ವದಿಂದ ಕೆಳಗಿಳಿಯಿರಿ ಎಂದರೆ, ಶೇ.43ರಷ್ಟು ಟ್ವಿಟರ್ ಬಳಕೆದಾರರು ಬೇಡ ಎಂದಿದ್ದರು.

ಈ ಸಮೀಕ್ಷೆಯನ್ನು ಗಮನಿಸಿದ ವಿಶ್ವದ ಅತ್ಯಂತ ಪ್ರಸಿದ್ಧ ಯೂಟ್ಯೂಬರ್ ಆದ ಜಿಮ್ಮಿ ಡೊನಾಲ್ಡ್‌ಸನ್ (ಮಿಸ್ಟರ್ ಬೀಸ್ಟ್) ಎಂಬವರು ಎಲೋನ್ ಮಸ್ಕ್‌ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದೇನೆಂದರೆ, ತಾನು ಟ್ವಿಟರ್‌ನ ಹೊಸ ಸಿಇಒ ಆಗಬಹುದೇ? ಎಂದು ಕೇಳಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಎಲ್ಲರಲ್ಲೂ ಮಸ್ಕ್ ಮಾಲಿಕತ್ವದಿಂದ ಕೆಳಗಿಳಿಯುತ್ತಾರಾ ಎಂಬ ಪ್ರಶ್ನೆ ಕಾಡಿದೆ.

ಇದೀಗ ಯುಟ್ಯೂಬರ್ ನ ಪ್ರಶ್ನೆಗೆ ಮಸ್ಕ್ ಪ್ರತಿಕ್ರಿಯೆ ನೀಡಿದ್ದು, “ಇದು ಪ್ರಶ್ನೆಯಿಂದ ಹೊರಗಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ಮಿಸ್ಟರ್ ಬೀಸ್ಟ್ ಅವರು ತಮ್ಮ ಅಸಾಮಾನ್ಯ ವೀಡಿಯೊಗಳಿಂದ ಹೆಸರು ಗಳಿಸಿದ್ದಾರೆ. ಅವರು ಈ ಹಿಂದೆ ತಮ್ಮದೇ ಆದ ಮಿಸ್ಟರ್ ಬೀಸ್ಟ್ ಬರ್ಗರ್ ಎಂಬ ವರ್ಚುವಲ್-ರೆಸ್ಟೋರೆಂಟ್ ಅನ್ನು ಕೂಡ ಪ್ರಾರಂಭಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಡೊನಾಲ್ಡ್ಸನ್ ಟ್ವಿಟರ್ ನ ನೀತಿಯೊಂದನ್ನು ಖಂಡಿಸಿ, ಎಲೋನ್ ಮಸ್ಕ್ ಗೆ, ನೀವು ಇದೇ ರೀತಿಯ ಕೆಲಸಗಳನ್ನು ಮಾಡುತ್ತಿದ್ದರೆ ಮಾಲಿಕತ್ವದ ಹುದ್ದೆಯಿಂದ ಕೆಳಗಿಳಿಯುವುದೇ ಉತ್ತಮ ಎಂದು ಟ್ವೀಟ್ ಮಾಡಿದ್ದರು.

ಈ ಸಮೀಕ್ಷೆಯ ಫಲಿತಾಂಶಗಳ ನಂತರ ಮಸ್ಕ್ ಟ್ವೀಟ್ ಮಾಡಿದ್ದು, “ಪ್ರಶ್ನೆ ಏನೆಂದರೆ ಟ್ವಿಟರ್ ಸಿಇಒ ಅನ್ನು ಹುಡುಕುತ್ತಿಲ್ಲ, ಬದಲಾಗಿ ಟ್ವಿಟರ್ ಅನ್ನು ಜೀವಂತವಾಗಿಡಬಲ್ಲ ಸಿಇಒ ಅನ್ನು ಹುಡುಕುತ್ತಿದೆ” ಎಂದು ಹೇಳಿದರು. ಒಟ್ಟಾರೆ ಎಲಾನ್ ಮಸ್ಕ್‌ ಜಾರಿಗೆ ತರುತ್ತಿರುವ ಕಠಿಣ ನೀತಿಯಿಂದಾಗಿ ಟ್ವಿಟರ್ ಬಳಕೆದಾರರು ಈ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದೇ ಹೇಳಬಹುದು.

Leave A Reply

Your email address will not be published.