Jio Recharge Plans: ಗ್ರಾಹಕರೇ ಬಂತು ನೋಡಿ ಜಿಯೋದಿಂದ ಹೊಸವರ್ಷದ ಪ್ರಯುಕ್ತ ಗಿಫ್ಟ್ | ಆಫರ್ಸ್​ಗಳ ಸುರಿಮಳೆ!!!

ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಇತರ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು .
ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿರುವ ನಮಗೆ ತಿಳಿದಿರುವ ವಿಚಾರ. ಹೌದು ಜನರಿಗಾಗಿ ರಿಲಯನ್ಸ್ ಜಿಯೋ ಹೊಸ ಹೊಸ ಆಫರ್ಗಳನ್ನು ನೀಡುತ್ತಲೇ ಇದೆ.

ದೇಶದಲ್ಲೇ ನಂಬರ್ 1 ಟೆಲಿಕಾಂ ಕಂಪನಿಯೆಂದು ಗುರುತಿಸಿಕೊಂಡಿರುವ ರಿಲಯನ್ಸ್​ ಜಿಯೋ ಹೊಸ ವರ್ಷಕ್ಕೆ ಬೆಸ್ಟ್ ರೀಚಾರ್ಜ್​ ಪ್ಲಾನ್​ ಅನ್ನು ಬಿಡುಗಡೆ ಮಾಡಿದೆ.

ಹೌದು, ಜಿಯೋದಿಂದ ಹೊಸ ಹ್ಯಾಪಿ ನ್ಯೂ ಇಯರ್ ರೀಚಾರ್ಜ್​ ಪ್ಲಾನ್​​ ಬಿಡುಗಡೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಬಹಳಷ್ಟು ಆಫರ್ಸ್​ ಅನ್ನು ಪಡೆಯಬಹುದಾಗಿದೆ. 2023 ರಿಂದ ಈ ಯೋಜನೆಗಳು ಜಾರಿಗೆ ಬರಲಿದೆ.

2023ರಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಗ್ರಾಹಕರಿಗಾಗಿ 2023 ರೂಪಾಯಿಯ ರೀಚಾರ್ಜ್​ ಪ್ಲಾನ್​ ಅನ್ನು ಬಿಡುಗಡೆ ಮಾಡಿದೆ.

2023 ರೂಪಾಯಿಯ ರೀಚಾರ್ಜ್​ ಪ್ಲಾನ್ ಯೋಜನೆ ಪ್ರಯೋಜನ :

  • ಈ ಯೋಜನೆ ಒಟ್ಟು 252 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
  • ಈ 252 ದಿನಗಳಲ್ಲಿ ಪ್ರತೀದಿನ ಬಳಕೆದಾರರು 2.3 ಜಿಬಿ ಡೇಟಾವನ್ನು ಬಳಸಬಹುದು.
  • ಜೊತೆಗೆ ಈ ರೀಚಾರ್ಜ್​ ಪ್ಲಾನ್​ನಲ್ಲಿ ಅನ್ಲಿಮಿಟೆಡ್​​ ಉಚಿತವಾಗಿ ಕಾಲ್​ ಮಾಡಬಹುದಾಗಿದೆ.
  • ಪ್ರತೀದಿನ 100 ಎಸ್​ಎಮ್​ಎಸ್​ ಅನ್ನು ಫ್ರೀಯಾಗಿ ಮಾಡುವ ಅವಕಾಶವಿದೆ.
  • ಈ ಯೋಜನೆಯು ಗ್ರಾಹಕರಿಗೆ ಒಟ್ಟಾರೆಯಾಗಿ 630 GB ಡೇಟಾವನ್ನು ನೀಡಲಿದೆ ಎಂದು ಜಿಯೋ ಕಂಪನಿ ತಿಳಿಸಿದೆ.
  • ಅದಲ್ಲದೆ ಜಿಯೋವಿನ ಇತರೆ ಪ್ರೀಪೇಯ್ಡ್​ ಯೋಜನೆಗಳಂತೆಯೇ ಈ ಯೋಜನೆಯು ಸಹ ಗ್ರಾಹಕರು ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಸೇರಿದಂತೆ ಜಿಯೋ ಸೂಟ್ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ. ಆದರೆ, ಈ ಯೋಜನೆಯು ಯಾವುದೇ ಓಟಿಟಿ ಚಂದಾದಾರಿಕೆಗಳನ್ನು ಹೊಂದಿರುವುದಿಲ್ಲ.

2999 ರೂಪಾಯಿಯ ಹೊಸ ರೀಚಾರ್ಜ್​ ಪ್ಲಾನ್​:

  • 2023ರ ಹೊಸ ವರ್ಷದ ಈ ಹೊಸ ರೀಚಾರ್ಜ್​ ಪ್ಲಾನ್​ನಲ್ಲಿ 365 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ.
  • ಜಿಯೋವಿನ ಈ ವಾರ್ಷಿಕ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2.5 ಜಿಬಿ ಡೇಟಾ,
  • ಅನ್ಲಿಮಿಟೆಡ್​ ಉಚಿತ ಕಾಲ್​​ ಮಾಡಬಹುದು.
  • ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನಗಳನ್ನು ಪಡೆಯಬಹುದು.
  • ಈ ಯೋಜನೆಯಲ್ಲಿ ಗ್ರಾಹಕರು ಒಟ್ಟಾರೆಯಾಗಿ ಒಂದು ವರ್ಷಕ್ಕೆ 912.5GB ಡೇಟಾವನ್ನು ಪಡೆಯಲಿದ್ದಾರೆ ಎಂದು ಜಿಯೋ ತಿಳಿಸಿದೆ.
  • ಈ ಯೋಜನೆಯಲ್ಲಿ ಸಹ ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಸೇರಿದಂತೆ ಜಿಯೋ ಸೂಟ್ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ. ಇದರಲ್ಲೂ ಸಹ ಗ್ರಾಹಕರಿಗೆ ಯಾವುದೇ ಓಟಿಟಿ ಚಂದಾದಾರಿಕೆಗಳು ಲಭ್ಯವಿಲ್ಲ.

749 ರೂಪಾಯಿಯ ನ್ಯೂ ಇಯರ್​ ರೀಚಾರ್ಜ್​ ಪ್ಲಾನ್​:

  • ಜಿಯೋ ಇತ್ತೀಚೆಗ ಪರಿಚಯಿಸಿರುವಂತಹ ಮ749 ರೂಪಾಯಿಯ ಯೋಜನೆ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
  • ಈ ಯೋಜನೆ ಮೂಲಕ 2ಜಿಬಿ ದೈನಂದಿನ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.
  • ಈ ಯೋಜನೆಯಲ್ಲಿ 180ಜಿಬಿ ಡೇಟಾವನ್ನು ಪಡೆಯಬಹುದಾಗಿದೆ.
  • ಜೊತೆಗೆ ಅನ್ಲಿಮಿಟೆಡ್​ ಕಾಲ್​, ಪ್ರತೀದಿನ 100 ಎಸ್​ಎಮ್​ಎಸ್​ ಪ್ರಯೋಜನಗಳು ದೊರೆಯಲಿದೆ.
  • ಈ ಯೋಜನೆಯಲ್ಲಿ ಜಿಯೋಟಿವಿ, ಜಿಯೋಸಿನೆಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೀ ಕ್ಲೌಡ್​ ಅಪ್ಲಿಕೇಶನ್​ಗಳಿಗೆ ಉಚಿತ ಪ್ರವೇಶ ದೊರೆಯಲಿದೆ.

ಇನ್ನು ಈ ಮೇಲಿನ ಯೋಜನೆಯ ಡೇಟಾ ಸೌಲಭ್ಯಗಳು ಮುಗಿದ ಬಳಿಕ 60 ಕೆಬಿಪಿಎಸ್​ ವೇಗದಲ್ಲಿ ಇಂಟರ್ನೆಟ್​ ಕಾರ್ಯನಿರ್ವಹಿಸಲಿದೆ.

ಸದ್ಯ ಈ ಮೇಲಿನಂತೆ ಕಡಿಮೆ ವೆಚ್ಚದಲ್ಲಿ ಹೆಚ್ಚು ದಿನಗಳ ಮಾನ್ಯತೆಯನ್ನು ನಿಮಗೆ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಮೂರು ತಿಂಗಳುಗಳ ವರಗೆ ಕಾರ್ಯ ನಿರ್ವಹಿಸಬಹುದು.

Leave A Reply

Your email address will not be published.