ಸಂಶೋಧನಾ ವಿದ್ಯಾರ್ಥಿನಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ | ಕಾಮುಕ ಪ್ರೊಫೆಸರ್‌ ಅರೆಸ್ಟ್‌

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಕೆಲ ಮಹಿಳೆಯರು ತಮ್ಮ ಮೇಲೆ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ದ್ವನಿ ಎತ್ತಿದರೆ ಮತ್ತೆ ಕೆಲವರು ಮನೆಯ ಮರ್ಯಾದೆಗೆ ಅಂಜಿ ಮೌನ ತಾಳುತ್ತಾರೆ. ಇದೀಗ, ಸಂಶೋಧನಾ ವಿದ್ಯಾರ್ಥಿನಿ ಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಇಂಗ್ಲೀಷ್ ಪ್ರಾಧ್ಯಾಪಕನನ್ನು ಅಮಾನತು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬಳ್ಳಾರಿಯಲ್ಲಿ ಸಂಶೋಧನಾ ವಿದ್ಯಾರ್ಥಿನಿಗೆ  ಲೈಂಗಿಕ ಕಿರುಕುಳ  ನೀಡಿದ ಆರೋಪದ ಮೇಲೆ ಬಳ್ಳಾರಿಯ (Bellary) ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (Sri Krishnadevaraya University) ಪಿಜಿ ಸೆಂಟರ್‌ನ ಇಂಗ್ಲೀಷ್ ಪ್ರೊಫೆಸರ್ (English professor) ಡಾ. ಚಾಂದ್‌ ಭಾಷ ಎಂ. ಅವರನ್ನು ಸೇವೆಯಿಂದ ಅಮಾನತು (Suspend) ಮಾಡಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಇಂಗ್ಲೀಷ್ ಪ್ರೊಫೆಸರ್ ಚಾಂದ್‌ ಭಾಷ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ ನವೆಂಬರ್ 7, 2022 ರಂದು ಲೈಂಗಿಕ ಕಿರುಕುಳದ ಕುರಿತು ವಿಶ್ವವಿದ್ಯಾಲಯಕ್ಕೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಕರ್ನಾಟಕ ಸಿವಿಲ್ ಸೇವೆಗಳ ಕಾಯ್ದೆ ಹಾಗೂ  ಕಾನೂನಾತ್ಮಕ ವಾಗಿ ಪಿಎಚ್‌ಡಿ ವಿದ್ಯಾರ್ಥಿನಿ (PhD student) ಲೈಂಗಿಕ ಕಿರುಕುಳದ ಕುರಿತಾಗಿ ಲಿಖಿತ ದೂರನ್ನು ಸಲ್ಲಿಸಿದ  ಹಿನ್ನೆಲೆ ಈ ಕುರಿತಾಗಿ ಸುದೀರ್ಘ ವಿಚಾರಣೆಯನ್ನು ನಡೆಸಲಾಗಿದೆ.

ಸಮಿತಿ ಸಲ್ಲಿಸಿದ ವರದಿಯನ್ನು ಸಿಂಡಿಕೇಟ್ ಸಭೆಯ ನಿರ್ಣಯದ ಪ್ರಕಾರ ಡಾ. ಚಾಂದ್‌ಭಾಷ ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ವಿಶ್ವವಿದ್ಯಾಲಯದ  ರಿಜಿಸ್ಟರ್ ರವರು ಈ ಆದೇಶವನ್ನು ಜಾರಿ ಮಾಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.