KEA ಯಿಂದ ಬಿಎಸ್ಸಿ ನರ್ಸಿಂಗ್, ಬಿಪಿಟಿ ಸೀಟು ಪಡೆದ ಅಭ್ಯರ್ಥಿಗಳಿಗೆ ಮುಖ್ಯವಾದ ಮಾಹಿತಿ!
ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ ಸೀಟು ಪಡೆದ ಅಭ್ಯರ್ಥಿಗಳಿಗೆ ಕೆಇಎ’ಯಿಂದ ಮಹತ್ವದ ಮಾಹಿತಿ
ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2022ನೇ ಸಾಲಿನ ಬಿಎಸ್‌ಸಿ ನರ್ಸಿಂಗ್, ಬಿಪಿಟಿ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಬಿಪಿಒ ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಮೊದಲನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಿ ಸೀಟು ಪಡೆದ ಅಭ್ಯರ್ಥಿಗಳಿಗೆ ಕೆಲವು ಮಾಹಿತಿ ನೀಡಲಾಗಿದೆ.
2022ನೇ ಸಾಲಿನ ಬಿಎಸ್‌ಸಿ ನರ್ಸಿಂಗ್, ಬಿಪಿಟಿ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಬಿಪಿಒ ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮೊದಲನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಿ ಸೀಟು ಪಡೆದ ಅಭ್ಯರ್ಥಿಗಳಿಗೆ ಕೆಇಎ ಸೂಚನೆಗಳನ್ನು ಬಿಡುಗಡೆ ಮಾಡಿದೆ.
ಸೀಟು ಹಂಚಿಕೆಯ ಮೊದಲನೇ ಸುತ್ತನ್ನು ರಾಜ್ಯವ್ಯಾಪ್ತಿಯಾಗಿ ನಡೆಸಲಾಗಿದೆ. ಸದರಿ ಸೀಟು ಹಂಚಿಕೆಯಲ್ಲಿ ಯಾವುದೇ ಆಯ್ಕೆ ಇರುವುದಿಲ್ಲ. ಹಂಚಿಕೆಯಾಗಿರುವ ಸೀಟು ಸಹಮತವಿದ್ದಲ್ಲಿ ಅಭ್ಯರ್ಥಿಗಳು ಶುಲ್ಕ ಪಾವತಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗಿರುತ್ತದೆ.
ಹಂಚಿಕೆಯಾದ ಸೀಟು ಅಭ್ಯರ್ಥಿಗೆ ಸಹಮತವಿದ್ದಲ್ಲಿ ಅಭ್ಯರ್ಥಿಯು ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಎರಡನೇ ಸುತ್ತಿನ ಸೀಟು ಹಂಚಿಕೆಯು ವಲಯವಾರು ಆಗಿರುತ್ತದೆ. ಇಡೀ ರಾಜ್ಯದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಎಂಟು ವಲಯಗಳಾಗಿ ವಿಂಗಡಿಸಲಾಗಿದೆ.
ಅಭ್ಯರ್ಥಿಯು ತಾನು ಬಯಸುವ ವಲಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿರುವ ಕಾಲೇಜುಗಳಲ್ಲಿನ ಸೀಟುಗಳನ್ನು ಮಾತ್ರ ಆಯ್ಕೆ ಮಾಡಬೇಕಾಗಿರುತ್ತದೆ.
ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಹಂಚಿಕೆಯಾದ ಸಿಟು ಸಹಮತವಿದ್ದಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬಹುದಾಗಿರುತ್ತದೆ.
ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಮೂರನೇ ಸೂತ್ತಿನ ಸೀಟು ಹಂಚಿಕೆಗೆ ಭಾಗವಹಿಸಲು ಅರ್ಹರಿರುವುದಿಲ್ಲ. ಮೊದಲ ಸುತ್ತಿನಲ್ಲಿ ಸೀಟು ಪಡೆದು ಈಗಾಗಲೇ ಕಾಲೇಜಿಗೆ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳು ಎರಡನೇ ಮತ್ತು ಮೂರನೇ ಸುತ್ತಿನ ಸೀಟು ಹಂಚಿಕೆಗೆ ಅರ್ಹರಿರುವುದಿಲ್ಲ ಎಂದು ಸೂಚಿಸಲಾಗಿದೆ .
ಮೂರನೇ ಸುತ್ತಿನ ಆಯ್ಕೆಯು ಜಿಲ್ಲಾವಾರು ಆಗಿರುತ್ತದೆ. ಆಯಾ ಜಿಲ್ಲೆಯ ಸರ್ಕಾರಿ ನರ್ಸಿಂಗ್ ಅಥವಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತದೆ.
ಎರಡನೇ ಸುತ್ತಿನ ಸೀಟು ಹಂಚಿಕೆಯ ವಲಯಗಳು:
- ಬೀದರ್,
- ಕಲಬುರಗಿ,
- ಬಿಜಾಪುರ,
- ಯಾದಗಿರಿ,
- ಕೊಪ್ಪಳ,
- ರಾಯಚೂರು,
- ಬಳ್ಳಾರಿ,
- ಗದಗ,
- ಬಾಗಲಕೋಟೆ,
- ಬೆಳಗಾವಿ,
- ಕಾರವಾರ.
- ಧಾರವಾಡ,
- ದಾವಣಗೆರೆ,
- ಹಾವೇರಿ,
- ಚಿತ್ರದುರ್ಗ.
- ಮಂಗಳೂರು,
- ಉಡುಪಿ,
- ಕೊಡಗು,
- ಚಿಕ್ಕಮಗಳೂರು,
- ಹಾಸನ,
- ಶಿವಮೊಗ್ಗ,
- ತುಮಕೂರು,
- ಮೈಸೂರು,
- ಮಂಡ್ಯ,
- ಚಾಮರಾಜನಗರ,
- ರಾಮನಗರ,
- ಬೆಂಗಳೂರು,
- ಕೋಲಾರ,
- ಚಿಕ್ಕಬಳ್ಳಾಪುರ ಇವಿಷ್ಟು ಎರಡನೇ ಸುತ್ತಿನ ಸೀಟು ಹಂಚಿಕೆಯ ವಲಯಗಳಾಗಿವೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.