BBK9 : ದೊಡ್ಮನೆಯಿಂದ ಉದ್ದ ಕೂದಲ ಚೆಲುವೆ ಔಟ್!

Share the Article

ಬಿಗ್ ಬಾಸ್ ಮುಗಿಯಲು ಇನ್ನೇನು 8 ದಿನಗಳು ಬಾಕಿ ಇದೆ ಅಷ್ಟೇ. ವಾರಾಂತ್ಯ ಬಂದೇ ಬಿಡ್ತು. ಕಿಚ್ಚನ ಆಗಮನವು ಕೂಡ ಆಯ್ತು. ಹಾಗಾದ್ರೆ ಈ ವಾರ ಯಾರು ಮನೆಯಿಂದ ಹೋಗಬಹುದು ಅಂತ ಎಲ್ಲರೂ ಕಾಯ್ತಾ ಇದ್ದಾರೆ. ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಎಸ್. ಬ್ಯೂಟಿ ಕ್ವೀನ್ ಆದ ಅಮೂಲ್ಯ ಗೌಡ ರವರು ಮನೆಯಿಂದ ಹೊರ ಹೋಗಿದ್ದಾರೆ. ಟಾಪ್ 5 ಬರಬೇಕೆಂಬ ಆಸೆಯನ್ನು ಹೊತ್ತಿದ್ದ ಅಮೂಲ್ಯ ಗೌಡ ದೊಡ್ಡಮನೆಗೆ ಟಾಟಾ ಬಾಯ್ ಬಾಯ್ ಹೇಳಿದ್ದಾರೆ.

ನವೀನರಲ್ಲಿ ಬಂದಂತಹ ಅಮೂಲ್ಯ ಫಿಸಿಕಲ್ ಟಾಸ್ಕ್ ಚೆನ್ನಾಗಿಯೇ ಆಡ್ತಾ ಇದ್ರು. ಜೊತೆಗೆ ರಾಕೇಶ್, ದಿವ್ಯ ಹಾಗೂ ಅನುಪಮಾ ಗೌಡರವರೊಂದಿಗು ಸ್ನೇಹ ತಂಡವನ್ನು ಕೂಡ ಕಟ್ಟಿಕೊಂಡಿದ್ದರು. ಸ್ಪರ್ಧಿಗಳ ಮನೆಯಿಂದ ಬಂದವರೆಲ್ಲರೂ ಕೂಡ ಅಮೂಲ್ಯ ರವರ ಅಂದ ಚಂದವನ್ನು ಹೊಗಳಿದ್ದರು.

ಟೋಟಲ್ ಆಗಿ ಹೇಳಬೇಕೆಂದರೆ ಸಖತ್ತಾಗಿ ಮತ್ತು ರಘಡಾಗಿ ಆಡ್ತಾ ಇದ್ದ ಉದ್ದ ಕೂದಲ ಚೆಲುವೆ ಟಾಪ್ 5 ಬರದೆ ಮನೆಯಿಂದ ಹೊರ ಹೋಗಿದ್ದಾರೆ.

Leave A Reply