ಫೈಟರ್ ಯುದ್ಧ ವಿಮಾನ ಹತ್ತಿ ಕುಳಿತ ಮುಸ್ಲಿಂ ಹುಡುಗಿ, ದೇಶದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲೆಟ್ ಈ ಸಾನಿಯಾ !

ಹೆಣ್ಣು ನಾಲ್ಕು ಗೋಡೆಯ ಕಟ್ಟುಪಾಡಿಗೆ ಅಷ್ಟೆ ಸೀಮಿತ ಎಂಬಂತ ಕಾಲ ಒಂದಿತ್ತು. ಇದೀಗ ಕಾಲ ಬದಲಾಗಿದೆ. ಹೆಣ್ಣು ಗಂಡಿನ ಭೇದದ ನಡುವೆ ಎಲ್ಲ ಕ್ಷೇತ್ರದಲ್ಲಿ ಕೂಡ ಮಹಿಳೆ ತನ್ನ ತನ್ನ ಪ್ರತಿಭೆ ಅನಾವರಣಗೊಳಿಸಿ ಪಾರುಪತ್ಯ ಕಾಯ್ದುಕೊಂಡಿದ್ದಾರೆ. ಅದರಲ್ಲಿ ಕೂಡ ಮುಸ್ಲಿಂ ಮಹಿಳೆ ಎಂದರೆ ಆಕೆ ಮನೆಯೊಳಗಿನ ಬಂಧಿ ಎಂಬ ಮಾತನ್ನು ಸುಳ್ಳು ಎಂದು ನಿರೂಪಿಸಿ ಮಹಿಳಾ ಶಕ್ತಿಯ ರುಜುವಾತು ಮಾಡುವ ವಿಶೇಷ ನಿದರ್ಶನ ಎಂಬಂತೆ ಮುಸ್ಲಿಂ ಮಹಿಳಾ ಫೈಟರ್ ಆಗಿ ಟಿವಿ ಮೆಕ್ಯಾನಿಕ್‌ನ ಪುತ್ರಿಯ ಅಭೂತಪೂರ್ವ ಸಾಧನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದೇಶದ ಮೊತ್ತ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಆಗಿ ಮಿರ್ಜಾಪುರದ ಟಿವಿ ಮೆಕ್ಯಾನಿಕ್ ಅವರ ಪುತ್ರಿ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಗೆ ಆಯ್ಕೆಯಾಗಿದ್ದಾರೆ. ಸಾನಿಯಾ ಎನ್‌ಡಿಎ ಪರೀಕ್ಷೆಯಲ್ಲಿ 149ನೇ ರಾಂಕ್ ಗಳಿಸಿದ್ದಾರೆ.

ಉತ್ತರ ಪ್ರದೇಶದ ಸಾನಿಯಾ ಮಿರ್ಜಾ ಎನ್ನುವ ಯುವತಿ, ಭಾರತೀಯ ವಾಯುಸೇನೆಯ ಫೈಟರ್‌ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತೀಯ ವಾಯುಸೇನೆಯಲ್ಲಿ ಪೈಲಟ್‌ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.

ಮನಸ್ಸಿದ್ದರೆ ಮಾರ್ಗ ಎಂಬ ಮಾತಿಗೆ ಸಾಕ್ಷಿ ಎಂಬ ರೀತಿಯಲ್ಲಿ, ಸಾನಿಯಾ ದೇಹತ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಎಂಬ ಸಣ್ಣ ಹಳ್ಳಿಯ ನಿವಾಸಿಯಾಗಿದ್ದು ಈ ಸಾಧನೆ ಮಾಡಿರುವುದು ವಿಶೇಷ. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಂದರೆ 10 ನೇ ತರಗತಿಯವರೆಗೆ ಪಂಡಿತ್ ಚಿಂತಾಮಣಿ ದುಬೆ ಇಂಟರ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಫೈಟರ್ ಪೈಲಟ್ ಆಗಬೇಕೆಂಬ ಕನಸು ಹೊತ್ತ ಸಾನಿಯಾ ಮಿರ್ಜಾಗೆ ದೇಶದ ಮೊದಲ ಮಹಿಳಾ ಪೈಲಟ್ ಅವ್ನಿ ಚತುರ್ವೇದಿ ಯವರು ಸ್ಪೂರ್ತಿ ಎಂದಿದ್ದಾರೆ.

ಸಾನಿಯಾ ಮಿರ್ಜಾಪುರದ ಗುರುನಾನಕ್ ಗರ್ಲ್ಸ್ ಇಂಟರ್ ಕಾಲೇಜಿನಿಂದ 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 12 ನೇ ತರಗತಿಯ ಯುಪಿ ಬೋರ್ಡ್‌ನಲ್ಲಿ ಜಿಲ್ಲಾ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಏಪ್ರಿಲ್ 10 ರಂದು, ಅವರು 2022 ತರಗತಿಯಲ್ಲಿ ಎನ್‌ಡಿಎ ಪರೀಕ್ಷೆ ಬರೆದು ತೇರ್ಗಡೆಯಾದ ಬಳಿಕ, ತಮ್ಮ ಸಂದರ್ಶನಕ್ಕೆ ಹೆಚ್ಚಿನ ತಯಾರಿ ನಡೆಸಲು ಅಕಾಡೆಮಿಯನ್ನು ಸೇರಲಿದ್ದಾರೆ. ಸಾನಿಯಾ ಡಿಸೆಂಬರ್ 27, 2022 ರಂದು ಪುಣೆಯಲ್ಲಿ ಎನ್‌ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಫೈಟರ್ ಪೈಲಟ್ ಆಗಿ ಆಯ್ಕೆಯಾದ ದೇಶದ ಎರಡನೇ ಬಾಲಕಿ ಸಾನಿಯಾ ಮಿರ್ಜಾ ಆಗಿದ್ದು, ಸಾನಿಯಾಗೆ ಮೊದಲ ಪ್ರಯತ್ನದಲ್ಲಿ ತೇರ್ಗಡೆ ಹೊಂದಲಾಗದೆ ಎರಡನೇ ಪ್ರಯತ್ನದಲ್ಲಿ ಮತ್ತೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ಮಾತನ್ನು ಬಲವಾಗಿ ನಂಬಿದ್ದಾರೆ. .

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 2022 ರ ಪರೀಕ್ಷೆಯಲ್ಲಿ, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಒಟ್ಟು 400 ಸೀಟುಗಳಿದ್ದು, ಇದರಲ್ಲಿ ಮಹಿಳೆಯರಿಗೆ 19 ಸೀಟುಗಳಿದ್ದು, ಈ ಪೈಕಿ ಎರಡು ಸೀಟುಗಳನ್ನು ಯುದ್ಧ ವಿಮಾನ ಪೈಲಟ್‌ಗಳಿಗೆ ಮೀಸಲಿಡಲಾಗಿದೆ. ಈ ಎರಡು ಸೀಟುಗಳಲ್ಲಿ ಸಾನಿಯಾ ಮಿರ್ಜಾ ಒಂದು ಸೀಟು ತಮ್ಮದಾಗಿಸಿಕೊಂಡಿದ್ದಾರೆ.

ಸಾಧಿಸುವ ಛಲ ಒಂದಿದ್ದರೆ ಯಾವುದೆ ಅದೆ ತಡೆ ಸಾಧನೆಗೆ ಹಿನ್ನಡೆಯಾಗದು ಎಂದು ನಿರೂಪಿಸುವ ಮೂಲಕ ಸಾನಿಯಾ ಎಲ್ಲರಿಗೂ ಮಾದರಿಯಾಗಿದ್ದಾರೆ.

Leave A Reply

Your email address will not be published.