ರಶ್ಮಿಕಾ ಮಂದಣ್ಣ ‘ವಾರಿಸು’ ಆಡಿಯೋ ಲಾಂಚ್ ಟಿಕೆಟ್ ದರ ನೋಡಿ ದಂಗಾದ ಫ್ಯಾನ್ಸ್

ದಳಪತಿ ವಿಜಯ್ ಮತ್ತು ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ನಟಿಸಿರುವ  ‘ವಾರಿಸು’ ಆಡಿಯೋ ಲಾಂಚ್ ಆಗಲಿದ್ದು,  ಟಿಕೆಟ್ ದರ ಕೇಳಿ ಫ್ಯಾನ್ಸ್ ದಂಗಾಗಿ ಬಿಟ್ಟಿದ್ದಾರೆ.

 

ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ( Thalapathy Vijay ) ನಟನೆಯ ‘ವಾರಿಸು’ ಸಿನಿಮಾ ( Varisu Movie )ಅಭಿಮಾನಿಗಳಲ್ಲಿ  ಬಗ್ಗೆ ಭಾರಿ ನಿರೀಕ್ಷೆ ಮೂಡಿಸಿದೆ. ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ದಳಪತಿ ವಿಜಯ್, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿರುವುದರಿಂದ  ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರತಂಡವು ಡಿಸೆಂಬರ್ 24ರಂದು ‘ವಾರಿಸು’ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿತ್ತು. ಇದೀಗ, ಇದರ ಟಿಕೆಟ್ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಇದೇ ಕಾರ್ಯಕ್ರಮದ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.ಚೆನ್ನೈನಲ್ಲಿ ಡಿಸೆಂಬರ್ 24ರಂದು ದಳಪತಿ ವಿಜಯ್, ರಶ್ಮಿಕಾ ಮಂದಣ್ಣ, ಈ ಸಿನಿಮಾದಲ್ಲಿ ಆರ್. ಶರತ್ಕುಮಾರ್, ಶ್ರೀಕಾಂತ್, ಶ್ಯಾಮ್, ಪ್ರಭು, ಪ್ರಕಾಶ್ ರಾಜ್, ಗಣೇಶ್ ವೆಂಕಟರಾಮನ್, ಖುಷ್ಬೂ, ಸಂಗೀತಾ, ಜಯಸುಧಾ, ಯೋಗಿ ಬಾಬು ಮುಂತಾದ ದೊಡ್ಡ ತಾರಾಗಣ ಇರುವ ‘ವಾರಿಸು’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ.



‘ವಾರಿಸು’ ಸಿನಿಮಾದ ಆಡಿಯೋ ಲಾಂಚ್ನಲ್ಲಿ ಭಾಗವಹಿಸಲು ಒಬ್ಬರಿಗೆ 7000 ರೂಪಾಯಿ ಎಂದು ವಿಜಯ್ ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಬಳಿಕ  ಇನ್ನೂ ಕೆಲವರು 5000-7000 ರೂಪಾಯಿವರೆಗೆ ಟಿಕೆಟ್ ದರವಿದೆ ಎಂದಿದ್ದಾರೆ. ಹೀಗಾಗಿ, ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಚೆನ್ನೈನಲ್ಲಿರುವ ದಳಪತಿ ವಿಜಯ್ ಅವರ ಆಫೀಸ್ನಲ್ಲಿ ಆಡಿಯೋ ಪಾಸ್ಗಳನ್ನು ಫ್ರೀ ಆಗಿ ನೀಡಲಾಗಿತ್ತು. ಆದರೆ ಇದನ್ನೇ ಕೆಲವರು ಪಡೆದುಕೊಂಡು ಬ್ಲಾಕ್ನಲ್ಲಿ ಮಾರಿಕೊಂಡು ಲಾಭ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಕೇವಲ ಅಭಿಮಾನಿಗಳು, ಸಿನಿ ಪ್ರಿಯರಿಗೆ ಮಾತ್ರ ಮೀಸಲಾಗಿ ಮಾಡಲು ಸಿನಿಮಾ ತಂಡ ಯೋಜನೆ ಹಾಕಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕರ್ನಾಟಕದ ಬಳ್ಳಾರಿಯಲ್ಲಿ ‘ವಾರಿಸು’ ಚಿತ್ರದ ಸುಮಧುರ ಹಾಡಿಗೆ  ಭರ್ಜರಿ ಚಿತ್ರೀಕರಣ ಮಾಡಲಾಗಿದೆ. ಈ ಬಗ್ಗೆ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಮಾಹಿತಿ ಹಂಚಿಕೊಂಡಿದ್ದು, ‘ಮತ್ತೊಂದು ಅದ್ಭುತ ಹಾಡು ನಿಮಗಾಗಿ ರೆಡಿ ಆಗಿದೆ. ಬಳ್ಳಾರಿಯ ಅದ್ಭುತ ಲೊಕೇಷನ್ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ…’ ಎಂಬ ಸುದ್ದಿ ಹಂಚಿಕೊಂಡಿದ್ದಾರೆ. ಸುಮಾರು 7 ಕೋಟಿ ರೂ. ಬಜೆಟ್ನಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ ಎನ್ನಲಾಗಿದ್ದು, ವಿಜಯ್ ಈ ಸಿನಿಮಾದಲ್ಲಿ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ.  ತಮ್ಮ ಉದ್ಯೋಗಿಗಳ ಜೊತೆಗೆ ಡ್ಯಾನ್ಸ್ ಮಾಡುವಂತಹ ಹಾಡು ಇದಾಗಿದ್ದು, ಇದಕ್ಕಾಗಿ  ಬರೋಬ್ಬರಿ ಸುಮಾರು 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿರುವ ‘ವಾರಿಸು’ ಸಿನಿಮಾದಲ್ಲಿ ವಿಜಯ್ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ತರೆ ಹಂಚಿಕೊಂಡಿದ್ದಾರೆ. ಬಾಲ್ಯದ ಕ್ರಶ್ ವಿಜಯ್ ದಳಪತಿ ಜೊತೆ ಸಿನಿಮಾ ಮಾಡುತ್ತಿರುವುದರಿಂದ ನ್ಯಾಷನಲ್ ಕ್ರಷ್ ರಶ್ಮಿಕಾ ಫುಲ್ ದಿಲ್ ಖುಷ್ ಆಗಿದ್ದಾರೆ. ಮುಹೂರ್ತದ ದಿನವೇ ಕಿರಿಕ್ ಚೆಲುವೆ ವಿಶೇಷ ಪೋಸ್ಟ್ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಆಕ್ಷನ್, ಕಾಮಿಡಿ, ರೊಮ್ಯಾನ್ಸ್ ಎಲ್ಲವೂ ಇರುವ ‘ವಾರಿಸು’ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೇನರ್ ಆಗಿದ್ದು. ಈ ಸಿನಿಮಾದಲ್ಲಿ ಆರ್. ಶರತ್ಕುಮಾರ್, ಶ್ರೀಕಾಂತ್, ಶ್ಯಾಮ್, ಪ್ರಭು, ಪ್ರಕಾಶ್ ರಾಜ್, ಗಣೇಶ್ ವೆಂಕಟರಾಮನ್, ಖುಷ್ಬೂ, ಸಂಗೀತಾ, ಜಯಸುಧಾ, ಯೋಗಿ ಬಾಬು ಮುಂತಾದ ದೊಡ್ಡ ತಾರಾಗಣವನ್ನು ಒಳಗೊಂಡಿದೆ.

Leave A Reply

Your email address will not be published.