ಬ್ಯೂಟಿ ಆಗಲು ಆಲೂಗೆಡ್ಡೆಯನ್ನು ಬಳಸಿ!
ತಾನು ಸುಂದರವಾಗಿ ಕಾಣಬೇಕು ಅಂತ ಅದೆಷ್ಟೋ ಜನರು ಪಾರ್ಲರ್ ಗಳಿಗೆ ಹೋಗುತ್ತಾರೆ ಹಾಗೆ ನಾನಾ ರೀತಿಯ ಕ್ರೀಮ್ ಗಳನ್ನ ಬಳಸುತ್ತಾರೆ. ಆದರೆ ಇವು ಯಾವುದರಿಂದನೂ ಪ್ರಯೋಜನ ಸಿಗದೇ ಬೇಸರಕೊಳಗಾಗುತ್ತಾರೆ. ಬೇಜಾರ್ ಆಗಬೇಡಿ. ನಿಮಗಾಗಿ ಇದೆ ಆಲೂಗೆಡ್ಡೆ.
ಹೌದು. ಆಲೂಗೆಡ್ಡೆ ಕೇವಲ ಸಾಂಬಾರ್ ಗೆ ಅಥವಾ ಬೋಂಡಾಗೆ ಸೀಮಿತವಲ್ಲದೆ ಸೌಂದರ್ಯಕ್ಕೂ ಕೂಡ ಮದ್ದಾಗಿದೆ. ಹೇಗೆ ಅಂತ ಕೇಳ್ತೀರಾ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ನಿಮ್ಮ ಮುಖದ ಮೇಲೆ ಇರುವ ಕಲೆ, ರಂಧ್ರಗಳನ್ನು ಹೋಗಲಾಡಿಸಲು ಆಲೂಗೆಡ್ಡೆ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶವು ಹೇರಳವಾಗಿ ಇರುವುದರಿಂದ ಎಲ್ಲಾ ಸಮಸ್ಯೆಗಳನ್ನೂ ನಿವಾರಣೆ ಮಾಡುತ್ತದೆ. ಆಲೂಗೆಡ್ಡೆಯನ್ನು ಕಟ್ ಮಾಡಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.
ಆಲೂಗೆಡ್ಡೆ ರಸವನ್ನು ಜೇನುತುಪ್ಪೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ತದನಂತರ ನಿಮ್ಮ ಮುಖ ಮತ್ತು ಕಪ್ಪು ಕುತ್ತಿಗೆ ಬಳಿ ಲೇಪಿಸಿ. 10 ರಿಂದ 15 ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಕುತ್ತಿಗೆ ಬಳಿ ಇರುವವ ಕಪ್ಪು ಕಲೆಗಳು ಮಾಯವಾಗುತ್ತದೆ.
ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ, ಅದಕ್ಕೆ ಸ್ವಲ್ಪ ಹಾಲು ಮತ್ತು ನಿಂಬೆ ರಸವನ್ನು ಮಿಕ್ಸ್ ಮಾಡಿ ಲೇಪನ ಮಾಡಿಕೊಳ್ಳಿ. ಇದರಿಂದ ಸುಕ್ಕು ಕಟ್ಟಿದ ನಿಮ್ಮ ತ್ವಚೆಯು ಪಳ ಪಳ ಹೊಳೆಯುವಂತೆ ಮಾಡುತ್ತದೆ.
ಮುಖಕ್ಕೆ ಟೊಮೆಟೊವನ್ನು ಹಚ್ಚಿಕೊಳ್ಳುವುದು ಗೊತ್ತು. ಆದರೆ ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿ ಅದನ್ನು ಟೊಮೇಟೊ ಹಣ್ಣಿನೊಂದಿಗೆ ಮಿಶ್ರಣ ಮಾಡಿ ನಂತರ ಸ್ವಲ್ಪ ನಿಂಬೆ ರಸವನ್ನು ಅದರೊಂದಿಗೆ ಮಿಕ್ಸ್ ಹಚ್ಚುವುದರಿಂದ ಚಳಿಗಾಲಕ್ಕೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಇಷ್ಟೆಲ್ಲಾ ಉಪಯೋಗಗಳು ಆಲೂಗೆಡ್ಡೆಯಲ್ಲಿ ಇರುವಾಗ ಬೇರೆಲ್ಲೂ ಯಾಕೆ ನಾನಾ ರೀತಿಯ ಕ್ರೀಮ್ಗಳನ್ನು ನಾವು ಬಳಸಬೇಕು. ಇಂದಿನಿಂದಲೇ ಆಲೂಗಡ್ಡೆ ಟ್ರೀಟ್ಮೆಂಟ್ ಆರಂಭ ಮಾಡಿ.