Maruti Suzuki : ಥಾರ್‌ ಕಾರಿಗೆ ಠಕ್ಕರ್‌ ಕೊಡಲು ಬಂತು ಮಾರುತಿ ಸುಜುಕಿಯ ಹೊಸ ಜಿಮ್ನಿ!

ಭಾರತದ ವಾಹನಗಳ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕಾರುಗಳ ಮಾರಾಟ ಹೆಚ್ಚುತ್ತಲೇ ಇದೆ. ಅವುಗಳಲ್ಲೂ ಎಸ್’ಯುವಿ ಮಾದರಿಗಳನ್ನೇ ಅತಿ ಹೆಚ್ಚಾಗಿ ಗ್ರಾಹಕರು ಖರೀದಿಸುತ್ತಿದ್ದಾರೆ. ಭಾರತದಲ್ಲಿ ಸದ್ಯ ಮಾರಾಟಗೊಳ್ಳುತ್ತಿರುವ ಹೊಸ ಕಾರುಗಳಲ್ಲಿ ಆಫ್ ರೋಡ್ ವರ್ಷನ್ ಗಳು ಕೂಡಾ ಗಮನಸೆಳೆಯುತ್ತಿದ್ದು, ಆಫ್ ರೋಡ್ ಪ್ರಿಯರಿಗಾಗಿ ವಿವಿಧ ಕಾರು ಕಂಪನಿಗಳು ತಮ್ಮ ನವನವೀನ ಮಾದರಿಗಳನ್ನು ರಸ್ತೆಗಿಳಿಸುತ್ತಿವೆ. ಇದೀಗ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿ ಆಫ್ ರೋಡ್ ಪ್ರಿಯರ ಬಹುನೀರಿಕ್ಷಿತ ಜಿಮ್ನಿ ಬಿಡುಗಡೆಗೆ ತಯಾರಾಗಿದೆ.

ಸದ್ಯ ಭಾರತೀಯ ಮಾರುಕಟ್ಟೆಗೆ ಎಂಟ್ರಿಕೊಡಲಿರುವ ಹೊಸ ಜಿಮ್ನಿ 5 ಡೋರ್ ಇಷ್ಟು ದಿನ ಮಾರುತಿ ಟೆಸ್ಟಿಂಗ್ ವೇಳೆ ತನ್ನ ಕಾರನ್ನು ಜೀಬ್ರಾ ಮೇಲ್ಮೈನೊಂದಿಗೆ ಹಲವು ಬಾರಿ ಕಾಣಿಸಿಕೊಂಡಿತ್ತು. ಆದರೆ ಮೊದಲ ಬಾರಿಗೆ 5 ಡೋರ್ ವರ್ಷನ್ ಮಾರುತಿ ಜಿಮ್ನಿ ಈಗ ಯಾವುದೇ ಮರೆಮಾಚುವಿಕೆ ಇಲ್ಲದೆ ಕಾಣಿಸಿಕೊಂಡಿದೆ. ಇದು ಮಾರುಕಟ್ಟೆಯಲ್ಲಿನ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಹೊಸ ಕಾರು ಮಾದರಿಯು ವಿಶೇಷವಾಗಿ ಆಫ್ ರೋಡ್ ಡ್ರೈವ್ ವೈಶಿಷ್ಟ್ಯತೆಗಾಗಿ ನಿರ್ಮಾಣಗೊಂಡಿದ್ದು, ಇದು 2023ರ ಜನವರಿಯಂದು ಎಂಜಿನ್ ಮತ್ತು ಪರ್ಫಾಮೆನ್ಸ್ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡನಂತರವಷ್ಟೇ ಹೊಸ ಜಿಮ್ನಿ ಕಾರು ಅಧಿಕೃತವಾಗಿ ಬಿಡುಗಡೆಯಾಗಬಹುದಾಗಿದ್ದು, ಇದಕ್ಕಾಗಿ ಹಲವಾರು ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಜಿಮ್ನಿ ಕಾರು ಲ್ಯಾಡರ್ ಫೇಮ್ ಚಾಸಿಸ್ ಅನ್ನು ಆಧರಿಸಿದ್ದು, 1.5L 4-ಸಿಲಿಂಡರ್, NA ಎಂಜಿನ್, K15B ಎಂಜಿನ್ ಅನ್ನು ಹೊಂದಿರಲಿದೆ. ಇದು 104 bhp ಪವರ್ ಮತ್ತು 138 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಜಾಗತಿಕವಾಗಿ, 4X4 ವರ್ಗಾವಣೆ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಮಾತ್ರ ನೀಡಲಾಗುತ್ತದೆ. ಅಲ್ಲದೇ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ನೀಡಲಾಗುತ್ತಿದೆ. ಇದರೊಂದಿಗೆ ಇದು ಪರ್ಫಾಮೆನ್ಸ್ ಜೊತೆಗೆ ಹೆಚ್ಚಿನ ಇಂಧನ ದಕ್ಷತೆ ಹೊಂದಿರಲಿದೆ.

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಜಿಮ್ನಿ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ 3 ಡೋರ್ ವರ್ಷನ್ ನಲ್ಲಿ ಮಾರಾಟಗೊಳ್ಳುತ್ತಿದೆ. ಆದರೆ ಮಾರುತಿ ಸುಜುಕಿ ಕಂಪನಿಯು ಹೊಸ ಕಾರನ್ನು ದೇಶಿಯ ಮಾರುಕಟ್ಟೆಗಾಗಿ ತುಸು ಬದಲಾವಣೆಗೊಳಿಸುತ್ತಿದೆ. ಭಾರತದಲ್ಲಿ 3 ಡೋರ್ ಬದಲಾಗಿ 5 ಡೋರ್ ವರ್ಷನ್ ಮಾರಾಟ ಮಾಡಲು ನಿರ್ಧರಿಸಿದೆ.

ಇದು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಬಹುದು. ಬಿಡುಗಡೆ ಬಳಿಕ ಇದು ಗೂರ್ಖಾದ 5-ಬಾಗಿಲಿನ ಆವೃತ್ತಿ ಮತ್ತು ಥಾರ್‌ನ 5-ಬಾಗಿಲಿನ ಆವೃತ್ತಿಗೆ ಪ್ರತಿಸ್ಪರ್ಧಿಯಾಗಲಿದೆ. ಇದರೊಂದಿಗೆ ಹೊಸ ಕಾರನ್ನು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಆಕರ್ಷಕ ಬೆಲೆಗೆ ಬಿಡುಗಡೆ ಮಾಡಲು ಯೋಜಿಸಲಾಗುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

Leave A Reply

Your email address will not be published.