ಇಲ್ಲಿದೆ ನೋಡಿ, ‘ನನ್ನ 2ನೇ ಹೆಂಡತಿ’ ರೆಸ್ಟೋರೆಂಟ್ | ಮೊದಲ ಹೆಂಡತಿಯ ರಿಯ್ಯಾಕ್ಷನ್ ಹೇಗಿದೆ ಗೊತ್ತಾ?

ಪ್ರತಿಯೊಬ್ಬರು ಕೂಡ ತಾವೇನಾದರೂ ಶಾಪ್ ಓಪನ್ ಮಾಡೋ ಪ್ಲಾನ್ ಮಾಡಿದ್ದರೆ, ಅದಕ್ಕೂ ಮುನ್ನ ಶಾಪ್ ಗೆ ಯಾವ ಹೆಸರು ಇಡೋದು ಎಂದು ಸಾವಿರ ಬಾರಿ ಯೋಚಿಸುತ್ತಾರೆ. ಕೆಲವರು ತಮ್ಮ ಮಕ್ಕಳ ಹೆಸರು ಇಟ್ಟರೆ, ಇನ್ನೂ ಕೆಲವರು ದೇವರ ಹೆಸರು ಹೀಗೇ ಹಲವರು ಹಲವು ರೀತಿಯಲ್ಲಿ ತಮಗಿಷ್ಟವಾದ ಹೆಸರನ್ನು ಇಡುತ್ತಾರೆ. ಈ ಹಿಂದೆ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ನೆನಪಿನಲ್ಲಿ ಆಕೆಯ ಹೆಸರನ್ನು ತನ್ನ ಟೀ ಸ್ಟಾಲ್ ಗೆ ಇಟ್ಟು ಫೇಮಸ್ ಆಗಿದ್ದ. ಇದೇ ರೀತಿ ಡಿಫರೆಂಡ್ ಆಗಿರೋ ಹೆಸರಿನಿಂದ ಇಲ್ಲೊಂದು ರೆಸ್ಟೋರೆಂಟ್ ಸಖತ್ ಸದ್ದು ಮಾಡುತ್ತಿದ್ದು, ಇದರ ಹೆಸರು ‘ನನ್ನ 2ನೇ ಹೆಂಡತಿ’ ಎಂದಾಗಿದೆ. ಇನ್ನೂ, ಈ ವಿಚಿತ್ರ ಹೆಸರಿನ ರೆಸ್ಟೋರೆಂಟ್ ಪಾಟ್ನಾದಲ್ಲಿ ಇರುವುದಾಗಿದೆ.

ಈ ಸ್ಪೆಷಲ್ ರೆಸ್ಟೋರೆಂಟ್ ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬರ್ಹ್ ಥಾನಾ ರಸ್ತೆಯಲ್ಲಿನ ಸವೇರಾ ಸಿನಿಮಾ ಹಾಲ್ ಬಳಿ ಇದೆ. ರಸ್ತೆಯಲ್ಲಿ ಪ್ರಯಾಣಿಸುವ ಜನರೆಲ್ಲಾ ಈ ರೆಸ್ಟೋರೆಂಟ್ ಕಡೆಗೆ ಕಾಣ್ಣಾಯಿಸಿದಾಗ ಅವರ ಮುಖದಲ್ಲಿ ಒಮ್ಮೆ ವಿವಿಧ ಭಾವಗಳು ಮೂಡಿಬರುತ್ತವೆ. ಕೆಲವರು ಹೀಗೂ ಹೆಸರಿಡ್ತಾರಾ? ಎಂದವರೂ ಇದ್ದಾರೆ. ಇನ್ನೂ ಕೆಲವರು ರೆಸ್ಟೋರೆಂಟ್ ಮಾಲಿಕರ ಬಳಿಯೇ ಈ ಹೆಸರಿನ ವಿಶೇಷತೆ ಏನು? ಇದರ ಹಿನ್ನೆಲೆ ಏನಾದರೂ ಇದೆಯಾ? ಎಂದು ಕುತೂಹಲದಿಂದ ಪ್ರಶ್ನೆ ಕೇಳಿದವರೂ ಇದ್ದಾರೆ.

ಈ ಎಲ್ಲಾ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ರೆಸ್ಟೋರೆಂಟ್ ಮಾಲೀಕ ರಂಜಿತ್ ಕುಮಾರ್ ಅದರ ಬಗೆಗಿನ ಸ್ವಾರಸ್ಯಕರವಾದ ಮಾಹಿತಿ ತಿಳಿಸಿದ್ದಾರೆ. ರಂಜಿತ್ ಮನೆಗಿಂತ ರೆಸ್ಟೋರೆಂಟ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಬೆಳಗ್ಗಿನಿಂದ ತಡರಾತ್ರಿಯವರೆಗೂ ರೆಸ್ಟೋರೆಂಟ್ ನಲ್ಲೇ ಇರುತ್ತಾರೆ. ಹಾಗಾಗಿ ಅವರು ತಮ್ಮ ಈ ರೆಸ್ಟೋರೆಂಟ್ ಗೆ ‘ಮೈ ಸೆಕೆಂಡ್ ವೈಫ್’ ಎಂದು ಹೆಸರಿಟ್ಟಿದ್ದಾರಂತೆ. ಒಬ್ಬಳು ಹೆಂಡತಿ ಮನೆಯಲ್ಲಿದ್ದರೆ, ಇನ್ನೊಬ್ಬಳು ಈ ರೆಸ್ಟೋರೆಂಟ್ ಎಂದು ರಂಜಿತ್ ಕುಮಾರ್ ಮುಗುಳ್ನಗುತ್ತಾ ಹೇಳುತ್ತಾರೆ.

ಇನ್ನೂ, ಈ ರೆಸ್ಟೋರೆಂಟ್ ತೆರೆಯುವ ವೇಳೆ ಹಲವರು ಹಲವು ರೀತಿಯ ಮಾತುಗಳನ್ನು ಹೇಳಿದ್ದರು. ಕೆಲವರು ಈ ರೀತಿಯ ಹೆಸರೆಲ್ಲಾ ಇಡಬೇಡಿ ಎಂದು ಸಲಹೆ ಕೊಟ್ಟಿದ್ದರಂತೆ. ಹಾಗೇ ರಂಜಿತ್ ಕುಮಾರ್ ಅವರ ಪತ್ನಿ ಸುಷ್ಮಾ ಕುಮಾರಿ ಕೂಡ ಪತ್ನಿಯೊಂದಿಗೆ ವಾಸಿಸುವಾಗ ಎರಡನೇ ಹೆಂಡತಿ ಅಂತೆಲ್ಲಾ ಹೆಸರನ್ನು ಇಡಬಾರದು. ಈ ರೀತಿಯ ಹೆಸರು ಇಡಬೇಡಿ ಎಂದು ಹೇಳಿದ್ದರಂತೆ. ಆದರೆ ರಂಜಿತ್ ಮಾತ್ರ ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಿಲ್ಲ. ಯಾರೇನೇ ಹೇಳಿದರೂ ತಲೆಕೆಡಿಸಿಕೊಳ್ಳದೆ ತಾವಂದುಕೊಂಡ ಹೆಸರನ್ನೇ ಇಟ್ಟಿದ್ದಾರೆ.

ಹಾಗೇ ಈ ರೆಸ್ಟೋರೆಂಟ್ ನಿಂದ ಸಾಕಷ್ಟು ಫೇಮಸ್ ಆಗಿದ್ದು, ಬ್ಯುಸಿನೆಸ್ ಕೂಡ ಚೆನ್ನಾಗಿ ನಡಿತಾ ಇದೆ. ಅಲ್ಲದೆ, ಈ ರೆಸ್ಟೋರೆಂಟ್ ನಲ್ಲಿ 2ನೇ ಮದುವೆ ಆದವರಿಗೆ ಡಿಸ್ಕೌಂಟ್ ಕೂಡ ಇದೆ. ಮಾಲೀಕರ ಬಳಿ ತಾನು ಎರಡನೇ ಗಂಡ ಎಂದು ಹೇಳಿದರೆ ಸಾಕು ಬಿಲ್ ಮೇಲೆ ರಿಯಾಯಿತಿ ಕೊಡುತ್ತಾರಂತೆ. ಇದೀಗ ಈ ರೆಸ್ಟೋರೆಂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Leave A Reply

Your email address will not be published.