Passport Office Recruitment 2023: ಡಿಗ್ರಿ ಪಾಸಾದವರಿಗೆ ಪಾಸ್‌ಪೋರ್ಟ್‌ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗವಕಾಶ | ಸಂಬಳ 2 ಲಕ್ಷದವರೆಗೆ

Passport Office Recruitment 2023: ಕೇಂದ್ರೀಯ ಪಾಸ್​​ಪೋರ್ಟ್ ಸಂಸ್ಥೆಯಲ್ಲಿ(The Central Passport Organization) ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಕಳುಹಿಸಬೇಕು. ಇದರೊಂದಿಗೆ, ಅಧೀನ ಕಾರ್ಯದರ್ಶಿ/ ಉನ್ನತ ಅಧಿಕಾರಿಗಳು ಶಿಫಾರಸ್ಸು ಮಾಡಿದ ಕಳೆದ 5 ವರ್ಷಗಳ APARನ ಪ್ರತಿಯನ್ನು ಅರ್ಜಿಯೊಂದಿಗೆ ಸೇರಿಸಬೇಕು.

ಸಂಸ್ಥೆ : ಕೇಂದ್ರೀಯ ಪಾಸ್​​ಪೋರ್ಟ್​ ಸಂಸ್ಥೆ
ಹುದ್ದೆ : ಡೆಪ್ಯುಟಿ ಪಾಸ್​​ಪೋರ್ಟ್​ ಆಫೀಸರ್
ಒಟ್ಟು ಹುದ್ದೆ : 8
ವೇತನ : ತಿಂಗಳಿಗೆ 67,700-2,08,700
ಉದ್ಯೋಗದ ಸ್ಥಳ : ಭಾರತ
ಅರ್ಜಿ ಸಲ್ಲಿಕೆ ಬಗೆ : ಆಫ್​ಲೈನ್

ಹುದ್ದೆಯ ವಿವರ :
ಕೊಯಮತ್ತೂರ್-1
ವಿಜಯವಾಡ-1
ಅಹಮದಾಬಾದ್-1
ಚಂಡೀಗರ್-1
ಘಾಜಿಯಾಬಾದ್-1
ಲಕ್ನೋ-1
ಮಧುರೈ-1
ಪಾಟ್ನಾ-1

ಶೈಕ್ಷಣಿಕ ಅರ್ಹತೆ: ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು.
ಪೇರೆಂಟ್ ಕೇಡರ್ ಅಥವಾ ಡಿಪಾರ್ಟ್‌ಮೆಂಟ್‌ನಲ್ಲಿ ನಿಯಮಿತ ಹುದ್ದೆಯಲ್ಲಿ ಕೆಲಸ ಮಾಡಿರಬೇಕು. ಅಥವಾ ಪೇ ಮ್ಯಾಟ್ರಿಕ್ಸ್ ಲೆವೆಲ್ 10 ರ ಅಡಿಯಲ್ಲಿ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಪಾಸ್‌ಪೋರ್ಟ್/ ಕಾನ್ಸುಲರ್/ ವಲಸೆ/ ಆಡಳಿತ/ ಹಣಕಾಸು/ ಖಾತೆಗಳು/ ವಿಜಿಲೆನ್ಸ್ ಕೆಲಸ/ ಸಾರ್ವಜನಿಕ ಕುಂದುಕೊರತೆ ಇಲಾಖೆಯಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವೇತನ: ಕೇಂದ್ರೀಯ ಪಾಸ್​ಪೋರ್ಟ್ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 67,700-2,08,700 ರೂ.ರವರೆಗೆ ಸಂಬಳ ಕೊಡಲಾಗುತ್ತದೆ.

ವಯೋಮಿತಿ: ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 56 ವರ್ಷ ಮೀರಿರಬಾರದು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಪಾಸ್​​ಪೋರ್ಟ್​ ಸಂಸ್ಥೆಯ ಅಧಿಕೃತ ವೆಬ್​ಸೈಟ್ passportindia.gov.in ​ಗೆ ಭೇಟಿ ನೀಡಬಹುದು. ನವೆಂಬರ್ 30ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕೊನೆಯ ದಿನಾಂಕವನ್ನು ಇನ್ನೂ ಸಹ ತಿಳಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.

Leave A Reply

Your email address will not be published.