ಬ್ಯಾಂಕ್ ಗ್ರಾಹಕರೇ ಗಮನಿಸಿ| ಜನವರಿ 1ರಿಂದ ಜಾರಿಯಾಗಲಿದೆ ಈ ಹೊಸ ನಿಯಮಗಳು!!

ಬ್ಯಾಂಕ್​ ಗ್ರಾಹಕರಿಗೆ ಸಿಹಿ ಸುದ್ದಿ ಕಾದಿದೆ. ಜನವರಿ 1 ರಿಂದ ಹೊಸ ನಿಯಮಗಳು ಜಾರಿಯಾಗಲಿದೆ. ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ ಇದಾಗಿದ್ದು, ಜನವರಿ 1 ರಿಂದ ನಿಯಮಗಳು ಬದಲಾಗಲಿರುವುದರಿಂದ ಬ್ಯಾಂಕ್ ಲಾಕರ್ ಸೇವೆಗಳನ್ನು ಪಡೆಯಲು ಬಯಸುವವರಿಗೆ ಪರಿಹಾರ ದೊರೆಯಲಿದೆ.

ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆಯ ತಿಂಗಳಿಗೆ ವಿದಾಯ ಹೇಳಿ,ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ. ಹೊಸ ವರ್ಷವು ಹೊಸ ನಿಯಮಗಳನ್ನು ತರುತ್ತದೆ. ಮೊಬೈಲ್ ಎಂಬ ಸಾಧನದ ಮೂಲಕ ಅನೇಕ ವಹಿವಾಟುಗಳನ್ನು ಕ್ಷಣಮಾತ್ರದಲ್ಲಿ ಮಾಡಲು ಅನೇಕ ಬ್ಯಾಂಕ್ಗಳು ನೆರವು ಮಾಡಿಕೊಟ್ಟಿದೆ. ಇದೀಗ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗಲಿದ್ದು, ಹಾಗಾಗಿ ಬ್ಯಾಂಕ್ ಖಾತೆದಾರರು ಈ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದೆ.ಲಾಕರ್ ಸಂಬಂಧಿತ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮಾವಳಿಗಳನ್ನು ತಂದಿದ್ದು, ಇದರ ಭಾಗವಾಗಿ ಬ್ಯಾಂಕ್ ಗಳು ಲಾಕರ್ ಗಳ ವಿಚಾರದಲ್ಲಿ ಹೆಚ್ಚು ಜವಾಬ್ದಾರಿಯಿಂದ ವರ್ತಿಸಲಿವೆ. ಎಸ್‌ಬಿಐ ಮತ್ತು ಪಿಎನ್‌ಬಿಯಂತಹ ಬ್ಯಾಂಕ್‌ಗಳು ಈಗಾಗಲೇ ಎಸ್‌ಎಂಎಸ್ ಮೂಲಕ ಈ ಹೊಸ ಲಾಕರ್ ನಿಯಮಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿವೆ.

ಈಗಾಗಲೇ ಲಾಕರ್ ಸೌಲಭ್ಯವನ್ನು ಬಳಸುತ್ತಿರುವ ಗ್ರಾಹಕರೊಂದಿಗೆ ಬ್ಯಾಂಕ್‌ಗಳು ಲಾಕರ್ ಒಪ್ಪಂದವನ್ನು ಕೂಡ ನವೀಕರಣ ಮಾಡಲಾಗುತ್ತಿದೆ.ಬ್ಯಾಂಕ್‌ನಲ್ಲಿ ಎಷ್ಟು ಲಾಕರ್‌ಗಳು ಖಾಲಿ ಇವೆ ಜೊತೆಗೆ ಯಾವ ಲಾಕರ್‌ಗಳು ವೇಟಿಂಗ್ ಲಿಸ್ಟ್‌ನಲ್ಲಿವೆ ಎಂಬ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಬೇಕಾಗಿದೆ. ಅಲ್ಲದೆ ಬ್ಯಾಂಕುಗಳು ಒಂದೇ ಬಾರಿಗೆ ಲಾಕರ್ ಶುಲ್ಕವನ್ನು ಸಂಗ್ರಹಣೆ ಮಾಡಬಹುದಾಗಿದೆ.

ಇದು ಗರಿಷ್ಠ ಮೂರು ವರ್ಷಗಳ ಅವಧಿಗೆ ಅನ್ವಯವಾಗಲಿದೆ. ಇದರ ಜೊತೆಗೆ ಶುಲ್ಕ 1500 ರೂ. 4500 ಕ್ಕಿಂತ ಹೆಚ್ಚು ಶುಲ್ಕ ವಿಧಿಸಲು ಬ್ಯಾಂಕ್ ಅಧಿಕಾರ ಹೊಂದಿಲ್ಲ ಎಂಬುದನ್ನು ಗಮನಿಸಬೇಕು.ಇದಲ್ಲದೆ, ಅನಧಿಕೃತವಾಗಿ ಲಾಕರ್ ತೆರೆದರೆ ಆ ಬಗ್ಗೆ ಬ್ಯಾಂಕ್ ಗಳು ಗ್ರಾಹಕರಿಗೆ ಮಾಹಿತಿ ನೀಡಬೇಕಾಗಿದೆ. ಇದಲ್ಲದೆ , ಗ್ರಾಹಕರು ಲಾಕರ್ ಅನ್ನು ತೆರೆದರೆ, ಅವರು SMS ಎಚ್ಚರಿಕೆಯನ್ನು ಪಡೆಯಬಹುದಾಗಿದೆ.

ಲಾಕರ್‌ಗಳಲ್ಲಿ ಯಾವುದೇ ವಂಚನೆಗಳು ಕಂಡುಬಂದ ಸಂದರ್ಭ ಬ್ಯಾಂಕ್‌ಗಳು ತಾವು ಭಾಗಿಯಾಗಿಲ್ಲ ಎಂಬುದನ್ನು ಸುಲಭವಾಗಿ ನಿರಾಕರಿಸುತ್ತವ ಪ್ರಕರಣಗಳೂ ನಡೆಯುತ್ತಿವೆ. ಆದರೆ ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಬ್ಯಾಂಕ್‌ಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನ ನಿರ್ಲಕ್ಷ್ಯದಿಂದ ಲಾಕರ್‌ನಲ್ಲಿರುವ ವಸ್ತುಗಳಿಗೆ ಹಾನಿಯಾಗಿದ್ದರೆ ಅದಕ್ಕೆ ಬ್ಯಾಂಕ್‌ಗಳೇ ಹೊಣೆಯಾಗುತ್ತದೆ.

ಬೆಂಕಿ ಮತ್ತು ಕಳ್ಳತನದಿಂದ ಭದ್ರತೆಯನ್ನು ಒದಗಿಸುವುದು ಬ್ಯಾಂಕಿನ ಜವಾಬ್ದಾರಿಯಾಗಿದೆ. ಆದರೆ ಭೂಕಂಪ, ಭಾರೀ ಪ್ರವಾಹ, ಸುನಾಮಿ ಮುಂತಾದ ಸಂದರ್ಭಗಳಲ್ಲಿ ಮುಂದೇನಾಗಲಿದೆಯೋ ಈ ರೀತಿಯ ಪ್ರಕರಣಗಳಿಗೆ ಲಾಕರ್‌ನಲ್ಲಿರುವ ವಸ್ತುಗಳಿಗೆ ಹಾನಿಯಾದರೆ, ಅಂತಹ ಸಮಯದಲ್ಲಿ ಬ್ಯಾಂಕ್‌ಗಳಿಗೆ ಯಾವುದೇ ಸಂಬಂಧವಿರುವುದಿಲ್ಲ.

ಬ್ಯಾಂಕ್‌ಗಳು ಗ್ರಾಹಕರಿಗೆ ಯಾವುದೇ ಹಣವನ್ನು ಪಾವತಿ ಮಾಡುವುದಿಲ್ಲ. ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆರ್‌ಬಿಐ ಲಾಕರ್ ನಿಯಮಗಳನ್ನು ಪರಿಷ್ಕರಿಸಿದೆ. ಇದು ಅನೇಕ ಜನರಿಗೆ ಪರಿಹಾರವನ್ನು ನೀಡುತ್ತದೆ.

Leave A Reply

Your email address will not be published.