ಹೊಟೇಲ್ ರೂಂನಿಂದ ಸಂಪೂರ್ಣ ನಗ್ನವಾಗಿ ಹೊರಬಂದ ಮಹಿಳೆ| ಮುಂದೆ ನಡೆದಿದ್ದೇ ಬೇರೆ

ಮಹಿಳೆಯೊಬ್ಬರು ಪೂರ್ತಿ ನಗ್ನವಾಗಿ ಹೋಟೆಲ್ ರೂಂ ನಿಂದ ಹೊರಬಂದು, ಹೋಟೆಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಇನ್ನೂ, ವಿಚಿತ್ರವಾಗಿ ವರ್ತಿಸಿದ ಮಹಿಳೆ ಆಫ್ರಿಕನ್ ಮೂಲದವರು ಎನ್ನಲಾಗಿದೆ. ವಿಡಿಯೋದಲ್ಲಿ, ರಾಜಸ್ಥಾನದ ಪಂಚತಾರಾ ಹೋಟೆಲ್ನ ಸಿಬ್ಬಂದಿಯ ಜೊತೆಗೆ ವಿದೇಶಿ ಮಹಿಳೆಯೊಬ್ಬರು ಗಲಾಟೆ ಮಾಡುತ್ತಿದ್ದು, ಆಕೆಯನ್ನು ಸಮಾಧಾನಪಡಿಸಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಆದರೂ ಆಕೆ ಗಲಾಟೆ ನಿಲ್ಲಿಸುತ್ತಿಲ್ಲ, ಬದಲಾಗಿ ಗಲಾಟೆ ಅತಿರೇಕಗೊಂಡು ಸಿಬ್ಬಂದಿಗೆ ಥಳಿಸುತ್ತಿದ್ದಾರೆ. ಹಾಗೇ ಯಾವ ಕಾರಣಕ್ಕೆ ಈ ಮಹಿಳೆ ಹೋಟೆಲ್ ಸಿಬ್ಬಂದಿಗೆ ಥಳಿಸಿದ್ದಾರೆ ಎನ್ನುವುದು ತಿಳಿದುಬಂದಿಲ್ಲ.

ಮಹಿಳೆ ಬರೀ ಜಗಳವಾಡದೆ, ತನ್ನ ದೇಹದ ಮೇಲೆ ಒಂದು ತುಂಡು ಬಟ್ಟೆ ಕೂಡ ಧರಿಸಿಲ್ಲ. ಹಾಗೇ ಹೋಟೆಲ್ ರೂಂ ನಿಂದ ಒಂದೇ ಸಮನೆ ಹೊರಬಂದು ಹೋಟೆಲ್ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದಿದ್ದಾರೆ. ಎಲ್ಲರಿಗೂ ಆಕೆ ಬೆತ್ತಲೆಯಾಗಿ ಗಲಾಟೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ, ಈ ವಿದೇಶಿ ಮಹಿಳೆ ಮಹಿಳಾ ಹೊಟೇಲ್ ಉದ್ಯೋಗಿಯ ಕೂದಲನ್ನು ಎಳೆದಾಡಿದ್ದಾರೆ. ಜಗಳ ಮಿತಿಮೀರಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನೂ, ಗಲಾಟೆ ನಡೆದ ನಂತರ ಪೊಲೀಸರನ್ನು ಕರೆಸುತ್ತಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ವಿಚಿತ್ರ ವರ್ತನೆಯ ವಿಡಿಯೋವನ್ನು ಸಾಕ್ಷ್ಯಚಿತ್ರ ನಿರ್ಮಾಪಕಿ ಮತ್ತು ಕಾರ್ಯಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://twitter.com/barkhatrehan16/status/1604064475866624000?ref_src=twsrc%5Etfw

Leave A Reply

Your email address will not be published.