Yamaha Electric Scooter: ಅಬ್ಬಾ ಏನಿದು ಅದ್ಭುತ | ಸೂಪರ್ ಮಾಡೆಲ್ ಯಮಹಾ ಎಲೆಕ್ಟ್ರಾನಿಕ್​ ಸ್ಕೂಟರ್​! ಇದನ್ನು ಓದಿ, ನೀವು ಖಂಡಿತ ಬೆರಗಾಗ್ತೀರಾ!!!

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮುಗಿಲು ಮುಟ್ಟಿದ್ದೂ, ಇದರಿಂದ ಪಾರಾಗಲು ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯಿದೆ. ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತಿದ್ದಂತೆ, ಹಲವು ಜನಪ್ರಿಯ ವಾಹನ ತಯಾರಿಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ. ನಿಯೋ, ಹೀರೋ ಮತ್ತು ಟಿವಿಎಸ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ತಂದಿವೆ. ಇದೀಗ ಜಪಾನಿನ ತಯಾರಕರಾದ ಯಮಹಾ ಕೂಡ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಿಭಾಗಕ್ಕೆ ಪ್ರವೇಶಿಸಲು ತಯಾರಾಗುತ್ತಿದ್ದಾರೆ.

ಯಮಹಾ ಮೋಟಾರ್ ಇಂಡಿಯಾ ಇವಿ ಮಾರುಕಟ್ಟೆಯನ್ನು ಪ್ರವೇಶಿಸಲು ಮುಂದಾಗಿದ್ದೂ, ಅದಕ್ಕಾಗಿಯೇ ಹೊಸ ಎಲೆಕ್ಟ್ರಿಕ್ ಸ್ಕೂಟರ್ ತರಲು ಸಿದ್ಧವಾಗುತ್ತಿದೆ. ಯಮಹಾ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಂದಿದ್ದೂ, ನಿಯೋ ಬ್ರ್ಯಾಂಡ್ ಅಡಿಯಲ್ಲಿ ಇವುಗಳನ್ನು ಮಾರಾಟ ಮಾಡುತ್ತಿದೆ. ಯಮಹಾ ಕಂಪನಿಯು ಈ ನಿಯೋ ಸ್ಕೂಟರ್‌ಗಳನ್ನು ಮೊದಲ ಬಾರಿಗೆ ವಿದೇಶಿ ಮಾರುಕಟ್ಟೆಯಿಂದ ನಮ್ಮ ಮಾರುಕಟ್ಟೆಗೆ ತರುವ ಸಾಧ್ಯತೆಯಿದೆ.

ಕಂಪನಿಯು ಪ್ರಸ್ತುತ ಭಾರತಕ್ಕಾಗಿ ಎಲೆಕ್ಟ್ರಿಕ್ ಸ್ಕೂಟರ್ ಪ್ಲಾಟ್‌ಫಾರ್ಮ್‌ನ ವ್ಯಾಪಕ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಯಮಹಾ ಇಂಡಿಯಾದ ಅಧ್ಯಕ್ಷ ಐಶಿನ್ ಚಿಹಾನಾ ಬಹಿರಂಗಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಗೆ ತರಲು ಕಂಪನಿಯು ಸಜ್ಜಾಗಿದೆ.

ಈ ಇ-ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿಗಳನ್ನು ಹೊಂದಿದ್ದೂ, ಈ ಸ್ಕೂಟರ್‌ನ ವ್ಯಾಪ್ತಿಯು 68 ಕಿಲೋಮೀಟರ್‌ಗಳು. ಎಲ್ಇಡಿ ಲೈಟಿಂಗ್, ಸಂಪೂರ್ಣ ಡಿಜಿಟಲ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ ಕನೆಕ್ಟಿವಿಟಿ, ಸ್ಮಾರ್ಟ್ ಕೀ ಇಂಟಿಗ್ರೇಷನ್, ಟೆಲಿಸ್ಕೋಪಿಕ್ ಫ್ರಂಟ್ ಮತ್ತು ಮೊನೊಶಾಕ್ ರಿಯರ್ ಸಸ್ಪೆನ್ಷನ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಯಮಹಾ ನಿಯೋ 50 ಸಿಸಿ ಎಂಜಿನ್ ಸ್ಕೂಟರ್‌ಗೆ ಸಮನಾಗಿದೆ ಎಂದು ಹೇಳಬಹುದು. ಇದು 2 kW ಶಕ್ತಿಯನ್ನು ಹೊಂದಿದೆ. ಯಮಹಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು 2025 ರ ವೇಳೆಗೆ ಭಾರತಕ್ಕೆ ಬರಲು ಪ್ರಾರಂಭಿಸುತ್ತದೆ ಎಂದು ಖಚಿತಪಡಿಸಿದೆ. 50cc ಸ್ಕೂಟರ್‌ಗೆ ಸಮನಾದ ಯಮಹಾ ನಿಯೋ, ಸುಮಾರು 2kW ಪವರ್ ಅನ್ನು ತಲುಪಿಸುವ ಹಬ್ ಮೋಟಾರ್ ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2025 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ತರುವುದಾಗಿ ಕಂಪನಿಯು ಈಗಾಗಲೇ ಘೋಷಿಸಿದೆ. ಈ ಕಂಪನಿಯ ವಾಹನಗಳ ಮೇಲೆ ಗ್ರಾಹಕರಿಗೆ ವಿಶ್ವಾಸವಿದ್ದೂ, ಇನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.