ನಿಮ್ಮ ತೀಕ್ಷ್ಣ ಕಣ್ಣಿಗೊಂದು ಸವಾಲ್ ಓದುಗರೇ | ಈ ಚಿತ್ರದಲ್ಲಿರೋ ಆನೆಗಳ ಸಂಖ್ಯೆ ಪತ್ತೆ ಹಚ್ಚುವಿರಾ?

ನಮ್ಮ ಬುದ್ಧಿವಂತಿಕೆಯ ಜೊತೆಗೆ ಕಣ್ಣುಗಳಿಗೆ ಸವಾಲು ಹಾಕುವಂತಹ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಹರಿದಾಡುತ್ತಿರುತ್ತವೆ. ಅದು ಬಹುಶಃ ಪ್ರಾಣಿ-ಪಕ್ಷಿಗಳು ಇಲ್ಲವೇ ವಸ್ತುಗಳನ್ನು ಹುಡುಕುವ ಕೆಲಸ ಆಗಿರಬಹುದು. ಏನೇ ಆದರೂ, ನೆಟ್ಟಿಗರ ತಲೆಗೆ ಹುಳ ಬಿಟ್ಟು ತಮ್ಮ ಚುರುಕು ಕಣ್ಣಿಗೆ ಹುಡುಕಾಟ ನಡೆಸಲು ಪ್ರೇರಣೆ ನೀಡುವುದು ಸಹಜ.

ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಣಯವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವ ವಿಚಾರಕ್ಕೂ ಗ್ರಹಿಸಿವುದಕ್ಕೂ ಭಿನ್ನತೆ ಎದುರಾಗುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ.

ನೀವು ಕೂಡ ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಿರಾ?? ಮತ್ತೇಕೆ ತಡ!! ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ ನಿಮ್ಮ ಕಣ್ಣುಗಳಿಗೆ ಹಾಗೂ ಬುದ್ದಿವಂತಿಕೆಯನ್ನು ನಿರೂಪಿಸಿಕೊಳ್ಳಲು ಉತ್ತಮ ಅವಕಾಶ.

ಓದುಗರೇ ನಿಮಗಿದೋ ಒಂದು ಸವಾಲ್!! ನಿಮ್ಮ ತೀಕ್ಷ್ಣ ಕಣ್ಣಿಗೊಂದು ಸವಾಲ್ ಓದುಗರೇ!!ಈ ಚಿತ್ರದಲ್ಲಿರೋ ಆನೆಗಳ ಸಂಖ್ಯೆ ಪತ್ತೆ ಹಚ್ಚುವಿರಾ?
ಈ ಫೋಟೋದಲ್ಲಿ ಎಷ್ಟು ಆನೆಗಳಿವೆ? ಎಂಬ ಪ್ರಶ್ನೆಗೆ ನೀವೀಗ ಉತ್ತರ ಕಂಡುಕೊಳ್ಳಬೇಕು. ಅಂದಹಾಗೆ ಫೋಟೋದಲ್ಲಿ ಆನೆಗಳ ಹಿಂಡು ಕೊಳದ ಒಂದು ಬದಿಯಲ್ಲಿ ಸಾಲಾಗಿ ನಿಂತು ನೀರು ಕುಡಿಯುತ್ತಿವೆ. ಕೆಲವೊಂದು ಆನೆಗಳು ಫೋಟೋದಲ್ಲಿ ಮರೆಯಾಗಿದ್ದು, ಅಲ್ಲಿ ಎಷ್ಟು ಆನೆಗಳಿವೆ ಎಂಬುದು ಗುರುತಿಸುವುದು ನಿಮಗಿರುವ ಸಿಂಪಲ್ ಟಾಸ್ಕ್.

ನೀವೇನಾದರೂ ಈ ಫೋಟೋದಲ್ಲಿ ಆನೆಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಸರಿಯಾಗಿ ಗುರುತಿಸಿದರೆ, ನಿಮ್ಮ ಕಣ್ಣಿನ ಸಾಮರ್ಥ್ಯಕ್ಕೆ ಫುಲ್​ ಮಾರ್ಕ್ಸ್​ ಸಿಕ್ಕಿದೆ ಎಂದು ಅರ್ಥ. ಏಕೆಂದರೆ, ಶೇ. 95 ಮಂದಿ ಸರಿಯಾದ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಎಷ್ಟು ಆನೆಗಳಿವೆ ಎಂಬುದನ್ನು ಗುರುತಿಸಲು ನಿಮಗೆ ಸಾಧ್ಯವಾಗದೇ ಇದ್ದರೆ ಚಿಂತಿಸಬೇಕಾಗಿಲ್ಲ. ಉತ್ತರ ಮುಂದಿದೆ ನೋಡಿ;

ಭಾರತೀಯ ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ನಲ್ಲಿ ಆನೆಗಳ ಹಿಂಡು ನೀರು ಕುಡಿಯುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಆನೆಗಳ ಸಂಖ್ಯೆ ಎಷ್ಟಿದೆ ಎಂಬ ಪ್ರಶ್ನೆ ಕೇಳಿದ್ದು, ಸರಿ ಉತ್ತರ ಏನೆಂದು ಸುಶಾಂತ್​ ನಂದಾ ಅವರೇ ಉತ್ತರ ನೀಡಿದ್ದಾರೆ.

ವೈಲ್ಡ್​ಲೆನ್ಸ್​ ಇಕೋ ಫೌಂಡೇಶನ್, ಈ ಅದ್ಭುತ ಸಿಂಕ್ರೊನೈಸ್ ಮಾಡಿದ ಫ್ರೇಮ್ ಅನ್ನು ತೆಗೆದುಕೊಳ್ಳಲು 20 ನಿಮಿಷಗಳಲ್ಲಿ ಸುಮಾರು 1400 ಫೋಟೋಗಳನ್ನು ತೆಗೆದಿದೆ ಎನ್ನಲಾಗಿದೆ. ಸಾಕಷ್ಟು ಶ್ರಮವಹಿಸಿದ ಬಳಿಕ ಈ ಫೋಟೋದಲ್ಲಿ ವಿವಿಧ ವಯೋಮಾನದ ಮತ್ತು ಗಾತ್ರದ 7 ಆನೆಗಳಿವೆ ಎಂಬುದನ್ನು ಪತ್ತೆಹಚ್ಚಲಾಗಿದೆ. ಈಗ ನೀವು ಕೂಡ ಸರಿ ಉತ್ತರ ಕೊಟ್ಟಿದ್ದರೆ ನೀವು ಗ್ರೇಟ್ ಎಂದು ಪರಿಗಣಿಸಿಕೊಳ್ಳಿ!!.

Leave A Reply

Your email address will not be published.