Income Tax: ಈ ಜನರಿಗೆ ಸಿಗಲಿದೆ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ |
ಈಗಾಗಲೇ 2020 ರ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿದ್ದು ಆ ಕುರಿತಂತೆ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು ವಿವಿಧ ವಿಭಾಗಗಳ ಅಡಿಯಲ್ಲಿ ಕಡಿತಗಳನ್ನು ಕ್ಲೈಮ್ ಮಾಡದೆ ಕಡಿಮೆ ದರದಲ್ಲಿ ತೆರಿಗೆ ಪಾವತಿಸುವ ಆಯ್ಕೆ ಇರಿಸಲಾಗಿತ್ತು . ಆದರೆ ಇನ್ನು ಮುಂದೆ ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರಗಳು ಬೇರೆ ಬೇರೆ ರೀತಿಯಾಗಿದೆ. ಅದಲ್ಲದೆ ತೆರಿಗೆದಾರರ ವಯಸ್ಸು 60 ವರ್ಷಕ್ಕಿಂತ ಕಡಿಮೆಯಿದ್ದರೆ, ಅವರು ವಾರ್ಷಿಕವಾಗಿ ರೂ 2.5 ಲಕ್ಷಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎನ್ನಲಾಗಿದೆ.
ಪ್ರಸ್ತುತ ಜನರ ಆದಾಯ ಹೆಚ್ಚಾದಂತೆ ಆದಾಯಕ್ಕೆ ಅನುಗುಣವಾಗಿ ಅವರು ತೆರಿಗೆ ಪಾವತಿಸಬೇಕಾಗುತ್ತದೆ. ಜನರ ಆದಾಯವು ಒಂದೊಮ್ಮೆ ತೆರಿಗೆ ವ್ಯಾಪ್ತಿಗೆ ಒಳಪಟ್ಟಾಗ, ಜನರು ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವಿವಿಧ ಆದಾಯ ಗುಂಪುಗಳಿಗೆ ಆದಾಯ ತೆರಿಗೆ ಸ್ಲ್ಯಾಬ್‌ಗಳು ವಿಭಿನ್ನವಾಗಿವೆ. ಇದೇ ವೇಳೆ, ಜನರು ಎರಡು ತೆರಿಗೆ ಪದ್ಧತಿಗೆ ಅನುಗುಣವಾಗಿ ಆದಾಯ ತೆರಿಗೆಯನ್ನು ಪಾವತಿಸಬಹುದು. ಇವುಗಳಲ್ಲಿ ಒಂದು ಹಳೆಯ ತೆರಿಗೆ ಪದ್ಧತಿಯಾಗಿದ್ದಾರೆ, ಇನ್ನೊಂದು ಹೊಸ ತೆರಿಗೆ ಪದ್ಧತಿಯಾಗಿದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ಹೊಸ ತೆರಿಗೆ ಪದ್ಧತಿಯ ದರಗಳನ್ನು ವಯಸ್ಸಿನ ಆಧಾರದ ಮೇಲೆ ವ್ಯತ್ಯಾಸ ಮಾಡಲಾಗಿಲ್ಲ. ಆದಾಗ್ಯೂ, ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ, 60 ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ವಾರ್ಷಿಕ 3 ಲಕ್ಷ ರೂಪಾಯಿ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಮತ್ತೊಂದೆಡೆ, ಸೂಪರ್ ಸೀನಿಯರ್ ಸಿಟಿಜನ್ಸ್ ಅಂದರೆ ಯಾರ ವಯಸ್ಸು 80 ವರ್ಷಕ್ಕಿಂತ ಹೆಚ್ಚಾಗಿದೆಯೋ ಅಂತಹ ಜನರು ತಮ್ಮ 5 ವರೆಗಿನ ವಾರ್ಷಿಕ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.
ಸದ್ಯ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ತೆರಿಗೆದಾರರು 2.5 ಲಕ್ಷದಿಂದ 5 ಲಕ್ಷದ ವಾರ್ಷಿಕ ಆದಾಯ ಹೊಂದಿದ್ದರೆ, ಅವರು ತಮ್ಮ ಹೆಚ್ಚುವರಿ ಆದಾಯದ ಮೇಲೆ ಶೇ.5 ರಷ್ಟು ತೆರಿಗೆ ಪಾವತಿಸಬೇಕು. ಅದಲ್ಲದೆ ಈ ಜನರು ಶೇ.5 ರಷ್ಟು ತೆರಿಗೆ ವಿನಾಯಿತಿ ಯನ್ನು ಸಹ ಪಡೆಯಬಹುದು. ಆದರೆ ಕೆಲವರಿಗೆ ಹೆಚ್ಚಿನ ವಾರ್ಷಿಕ ಆದಾಯದ ಮೇಲೂ ಸರ್ಕಾರದಿಂದ ತೆರಿಗೆ ವಿನಾಯಿತಿ ನೀಡುತ್ತದೆ ಎಂದು ಮಾಹಿತಿ ನೀಡಲಾಗಿದೆ.