ಅಡಿಕೆ ಮರದಿಂದ ಕಾಯಿ ಕೀಳುವ ಕೆಲಸ ಇನ್ನು ಸುಲಭ

ಅಡಿಕೆ ಮರದಿಂದ ಕಾಯಿ ಕೀಳುವುದು ಇದೀಗ ಸರಳ ಹಾಗೂ ಸುಲಭ!!. ನೀವು ಅಡಿಕೆ ಬೆಳೆಗಾರರಾಗಿದ್ದು,  ಅಡಿಕೆ ಕುಯ್ಲು ಮಾಡಲು ಕೆಲಸದವರು ಸಿಗದೇ ತೊಂದರೆ ಅನುಭವಿಸುತ್ತಿದ್ದರೆ, ನಿಮ್ಮ ಕೃಷಿ ಕೆಲಸಕ್ಕೆ ನೆರವಾಗುವ ನಿಟ್ಟಿನಲ್ಲಿ ಹೊಸ ಯಂತ್ರದ ಆವಿಷ್ಕಾರ ಮಾಡಲಾಗಿದೆ. ಇದರ ಕುರಿತಾದ ಮಾಹಿತಿ ಇಲ್ಲಿದೆ.

ಭಾಸ್ಕರ್ ಎಂಬ ವ್ಯಕ್ತಿಯು ಅಡಿಕೆ ಮರವನ್ನು ಹತ್ತುವ ಯಂತ್ರವನ್ನು ಕಂಡುಹಿಡಿದಿದ್ದಾರೆ. ಈ  ಯಂತ್ರವನ್ನು ಉಪಯೋಗಿಸಿಕೊಂಡು ಯಾರು ಬೇಕಿದ್ದರು ಕೂಡ  ಮರವನ್ನು ಹತ್ತಬಹುದಾಗಿದೆ. ಈ  ಯಂತ್ರವನ್ನು  ಬಳಸಿ ಎಷ್ಟು  ಬಾರಿ ಮರ ಹತ್ತಿದರು ಕೂಡ ನಿಮಗೆ ಆಯಾಸ ಆಗದು. ಈ ಯಂತ್ರದ ಆವಿಷ್ಕಾರ ಪೂರ್ಣಗೊಳಿಸಲು ಇವರು ಮೂರು ವರ್ಷ ತೆಗೆದುಕೊಂಡಿದ್ದಾರೆ.

ಕಾರ್ಮಿಕರ ಅಗತ್ಯತೆ ಅಡಿಕೆ ಬೆಳೆಗೆ ಅನಿವಾರ್ಯವಾಗಿದ್ದು, ಇದರ ಜೊತೆಗೆ ಕೊಯ್ಯಲು ಸಿದ್ಧವಾಗಿರುವ ಅಡಿಕೆಯನ್ನು ಸರಿಯಾದ ಸಮಯಕ್ಕೆ ಕೊಯ್ಯದೇ ಹೋದಲ್ಲಿ ಫಸಲಿಗೆ ರೋಗ ಭಾದೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ,  ಇಡೀ ಅಡಿಕೆ ಮರಗಳೇ ರೋಗ ಭಾದಿತವಾಗಲಿದ್ದು, ಈ ಎಲ್ಲಾ ಕಾರಣಕ್ಕಾಗಿ ಕಾರ್ಮಿಕರ ಅಗತ್ಯತೆ ಅಡಿಕೆ ಬೆಳೆಗೆ ಅಗತ್ಯವಾಗಿದೆ.

ಅಡಿಕೆ ಮರ ಹತ್ತುವ ಉಪಕರಣವನ್ನು  ಕಬ್ಬಿಣದ ರಾಡ್ ಗಳನ್ನು ಬಳಸಿ ಈ ಉಪಕರಣವನ್ನು ನಿರ್ಮಿಸಲಾಗಿದ್ದು, ಅಡಿಕೆ ಮರವನ್ನು ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗೂ ಕಾಲಿನ ಸಹಾಯದಿಂದ ಈ ಉಪಕರಣವನ್ನು ಉಪಯೋಗಿಸಬಹುದಾಗಿದೆ. ಹಲವಾರು ಕಾರಣಗಳಿಂದಾಗಿ ಓದಿಗೆ ವಿರಾಮ ಹೇಳಿ ಭಾಸ್ಕರ್ ಕೃಷಿಯತ್ತ ಮುಖ ಮಾಡಿದ್ದು,  ಅಡಿಕೆ ತೋಟವನ್ನು ಹೊಂದಿರುವ ಬಾಸ್ಕರ್ ಗೆ ಕಾರ್ಮಿಕರ ಸಮಸ್ಯೆ ತಲೆದೋರಿದೆ. ಹೀಗಾಗಿ, ಈ ಅನ್ವೇಷಣೆಗೆ ಮುಂದಾಗಿದ್ದಾರೆ.

ಸಾಮಾನ್ಯವಾಗಿ ಕಾರ್ಮಿಕರು ದೊಡ್ಡ ತೋಟಗಳಲ್ಲಿ ಹೆಚ್ಚು ಆದಾಯ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಸಣ್ಣ ಕೃಷಿ ತೋಟಗಳ ಕಡೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಭೇಟಿ ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲಸದವರ ಅಭಾವದಿಂದ  ಸಣ್ಣ ಕೃಷಿಕನ ತೋಟಕ್ಕೆ ಸರಿಯಾದ ಸಮಯದಲ್ಲಿ ಮದ್ದು ಬಿಡದೆ ಅಡಿಕೆ ಬೆಳೆ ನಾಶವಾದ ನಿದರ್ಶನಗಳು ಕೂಡ ಇವೆ.

ಹೀಗಾಗಿ, ಭಾಸ್ಕರ್ ರವರು ಈ  ಯಂತ್ರದ ಬಗ್ಗೆ ತರಬೇತಿ ನೀಡಿದ ಬಳಿಕವೇ ಉಪಕರಣ ಮಾರಾಟ ಮಾಡುತ್ತಿದ್ದಾರೆ. ಇದರ ಉಪಯೋಗವನ್ನು ಅರಿತ ಹಲವು ಕೃಷಿಕರಿಗೆ ಬಾಸ್ಕರ್ ಉಪಕರಣವನ್ನು ನೀಡಿದ್ದು, 6500 ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಉಪಕರಣ ಪಡೆಯಲು ಬರುವ ಕೃಷಿಕನಿಗೆ ತನ್ನ ಅಡಿಕೆ ತೋಟದಲ್ಲೇ ತರಬೇತಿ ನೀಡಿದ ಬಳಿಕವೇ ಉಪಕರಣವನ್ನು ಮಾರಾಟ ಮಾಡುತ್ತಿದ್ದಾರೆ. ಅಡಿಕೆ ಮರ ಹತ್ತುವ ಟ್ರಿ ಸೈಕಲ್ ನ ವಿಡಿಯೋ ಕೂಡ ಇದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಮೊಬೈಲ್ ನಂಬರ್ : 9902212501




Leave A Reply

Your email address will not be published.