Pro Kabaddi Final | ಪ್ರೊ ಕಬಡ್ಡಿ ಫೈನಲ್ ಗೆ ಕ್ಷಣಗಣನೆ, ಇವತ್ತು ರಾತ್ರಿ 8 ಗಂಟೆಯ ಆಗಮನದ ನಿರೀಕ್ಷೆಯಲ್ಲಿದೆ ಜಗತ್ತು !
ಪ್ರೊ ಕಬಡ್ಡಿ 2022 ಅಂತ್ಯ ಕಾಣಲು ಕೇವಲ ಒಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಇವತ್ತಿನ ಈ ಒಂದು ಪಂದ್ಯ ಮಾತ್ರ ಆಡಲು ಬಾಕಿ ಇದೆ. ಆ ಮೂಲಕ ಪ್ರೊ ಕಬಡ್ಡಿ 2022 ಸೀಸನ್ ನ ವರ್ಣರಂಜಿತ ಜಿದ್ದಾಜಿದ್ದಿನ ಆಟ ಇವತ್ತಿಗೆ ಕೊನೆಗೊಳ್ಳಲಿದೆ.
ಇವತ್ತು ಸಂಜೆ 8 ಗಂಟೆಯಿಂದ ಫೈನಲ್ ಧಮಾಕಾ ಆರಂಭ ಆಗಲಿದ್ದು ಫೈನಲ್ ಗೆ ಎರಡೂ ತಂಡಗಳೂ ಎಲ್ಲಾ ತಯಾರಿ ನಡೆಸಿವೆ. ಲೀಗ್ ಅಂತ್ಯದ ಪಂದ್ಯಗಳನ್ನು ಮುಗಿಸಿಕೊಂಡು ಸೆಮಿಫೈನಲ್ ನಲ್ಲಿ ಸೆಣಸಿ ಇದೀಗ ಫೈನಲ್ ಪ್ರವೇಶಿಸಿದ ಜೈಪುರ್ಸ್ ಮತ್ತು ಪುಣೇರಿ ಪಲ್ಟನ್ ಮಧ್ಯೆ ಹಿಂದೆಂದೂ ಕಂಡು ಕೇಳರಿಯದ ರೋಮಾಂಚಕಾರಿ ಆಟಕ್ಕೆ ಈ ಸಂಜೆ ಸಾಕ್ಷಿ ಆಗಲಿದೆ.
ಇವತ್ತು ಮುಂಬೈನ SVP ಕ್ರೀಡಾಂಗಣದಲ್ಲಿ ಜಗತ್ತಿನ ಬಹುಮುಖ ಸ್ಕಿಲ್ ಗಳನ್ನು ಹೊಂದಿದ ಆಟ ಎಂದು ಕರೆಸಿಕೊಳ್ಳುವ ಫೈನಲ್ ಕಬಡ್ಡಿ ಪಂದ್ಯಾವಳಿಯಲ್ಲಿ ಅಕ್ಷರಶಃ, ಪುಟಿಯುವ ರಬ್ಬರ್ ನಂತಹ ಮಾಂಸಖಂಡಗಳ, ಉಕ್ಕಿನ ನರಮಂಡಲದ, ಸೂಪರ್ ಕಂಪ್ಯೂಟರ್ ನ ವೇಗದಲ್ಲಿ ಯೋಚಿಸಿ ಗ್ರಹಿಸಿ ನಿರ್ಧಾರ ತೆಗೆದುಕೊಂಡು, ರಾಕೆಟ್ ಪಡೆದುಕೊಳ್ಳುವ ವೇಗದಂತೆ ಕಣ್ರೆಪ್ಪೆ ಮುಚ್ಚುವ ಒಳಗೆ ಗುರಿ ಸಾಧಿಸಬಲ್ಲ ಯುವಕರೇ ಹೆಚ್ಚಾಗಿ ಇರುವ ಎರಡೂ ತಂಡಗಳೂ ಸೆಣಸಾಟಕ್ಕೆ ಇಳಿಯಲಿದೆ.
ಎರಡು ತಂಡಗಳು ಕೂಡ ಕೇಳುವ ತಂಡಗಳೇ. ಯಾವುದೇ ಕಾರಣಕ್ಕೂ ಕೂಡ ಸೋಲಪ್ಪಿಕೊಳ್ಳುಬಾರದು ಎಂದು ಅಮಿತಾಬಚ್ಚನ್ ಮಾಲಿಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುನೆರಿ ಪಲ್ಟನ್ ತಂಡಗಳೂ ಖಚಿತ ಹೋರಾಟ ನಡೆಸುವುದಂತೂ ಗ್ಯಾರಂಟಿ.ಇವತ್ತಿನ ಫೈನಲ್ ಪಂದ್ಯದಲ್ಲಿ, ಚೊಚ್ಚಲ ಪ್ರೊ ಕಬಡ್ಡಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ ಮತ್ತು ಪುಣೆರಿ ಪಲ್ಟಾನ್ ಮಧ್ಯೆ ನಡೆಯಲಿದೆ.
ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಸಾಕಷ್ಟು ಆಟಗಾರರು ಗಾಯಗೊಂಡಿದ್ದು, ಆಯಾ ತಂಡಗಳಿಗೆ ಅದು ಸಾಕಷ್ಟು ಏರಿಳಿತಗಳನ್ನು ತಂದಿಟ್ಟಿದೆ. ಆದಾಗ್ಯೂ, ಹೆಚ್ಚಿನ ತಂಡಗಳು ಸೋಲಿನ ಸುಳಿಯಿಂದ, ಕಷ್ಟಗಳ ಸರಪಳಿಯಿಂದ ಸದಿಲಿಸಿಕೊಂದು ಪುಟಿದು ನಿಂತಿದ್ದಾರೆ. ಎಲ್ಲಾ 12 ತಂಡಗಳು ನೆಕ್ ಟು ನೆಕ್ ಫೈಟ್ ನ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದಿದೆ. ಇನ್ನೊಂದು ಸೆಮಿ ಫೈನಲ್ ಆಟದಲ್ಲಿ ತಮಿಳ್ ತಲೈವಾಸ್ ಪುಣೇರಿ ಪಲ್ಟನ್ ತಂಡದ ವಿರುದ್ಧ 2 ಅಂಕಗಳ ವಿರೋಜಿತ ಸೋಲನ್ನು ಅನುಭವಿಸಿತು.
ತಮಿಳ್ ತಲೈವಾಸ್ ತಂಡವು ಈ ಋತುವಿನಲ್ಲಿ ಸ್ಟಾರ್ ರೈಡರ್ ಪವನ್ ಶೆರಾವತ್ ಮತ್ತು ಮುಖ್ಯ ಡಿಫೆಂಡರ್ ಸಾಗರ್ ರಥಿ ಅವರ ಅನುಪಸ್ಥಿತಿಯ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಚಿಕ್ಕ ಅಂತರದಲ್ಲಿ ಸೆಮಿಫೈನಲ್‌ನಲ್ಲಿ ತಮಿಳ್ ತಲೈವಾಸ್ ತೀವ್ರ ಪೈಪೋಟಿ ನೀಡಿದರೂ ಅಂತಿಮವಾಗಿ 2 ಅಂಕಗಳಿಂದ ಸೋಲು ಕಂಡಿತು. ಈಗ ಫೈನಲ್ ಪಂದ್ಯಕ್ಕೆ ಕೆಲವೇ ಗಂಟೆಗಳ ಸಮಯ ಬಾಕಿ ಇದೆ. ದೇಶ ದೇಸಿ ಆಟದ ಸೊಬಗ ಸವಿಯಲು ಕಾಯುತ್ತಿದೆ.