One plus Smart LED TV : ಅರೇ, ಬಂತು ನೋಡಿ | ಒನ್ ಪ್ಲಸ್ ನಿಂದ ಸ್ಮಾರ್ಟ್ ಟಿವಿ !!!

ಪ್ರಸ್ತುತ ಜನರಿಗಾಗಿ ವಿಶೇಷ ಫೀಚರ್ಸ್​ಗಳುಳ್ಳ ಸ್ಮಾರ್ಟ್​ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಲೇ ಇರುತ್ತದೆ.ಹೌದು, ಸ್ಮಾರ್ಟ್​ಟಿವಿಗಳು ಈಗ ಎಲ್ಲರ ಮನೆಯಲ್ಲೂ ಇದೆ. ಇದರ ಫೀಚರ್ಸ್​ ಅನ್ನು ನೋಡಿ ಜನರು ಆಕರ್ಷಿತರಾಗುತ್ತಾರೆ. ಜನರು ಸಹ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳುತ್ತಾರೆ ಅನ್ನೋದು ಸತ್ಯ. ಹೌದು ಸಿನಿಮಾ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. ಅದಲ್ಲದೆ ಈಗಿನ ಕಾಲದ ಸ್ಮಾರ್ಟ್​ಟಿವಿಗಳ ಫೀಚರ್ಸ್​ಗಳು ಕೂಡ ಮೊಬೈಲ್​ನಂತೆಯೇ ಫೀಚರ್ಸ್​ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್​ಸೀರಿಸ್​, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್​ಟಿವಿಗಳಲ್ಲೇ ನೋಡಬಹುದು.

 

ಸದ್ಯ ಹೊಸ ಸ್ಮಾರ್ಟ್​​ಟಿವಿ ಖರೀದಿಸುವ ಯೋಜನೆಯಲ್ಲಿರುವವರಿಗೆ ನಂಬರ್ 1​ ಕಂಪನಿ ಒನ್​​ಪ್ಲಸ್​ನಿಂದ ಒಂದು ಒಳ್ಳೆಯ ಸುದ್ದಿ ನೀಡಿದೆ. ಸ್ಮಾರ್ಟ್​​​ಟಿವಿ ಪ್ರಿಯರಿಗಾಗಿ ಉತ್ತಮ ಫೀಚರ್ಸ್​ ಹೊಂದಿದ ಟಿವಿ ಲಭ್ಯವಿದೆ.

ಹೌದು ನಂಬರ್ 1​ ಕಂಪನಿ ಒನ್​​ಪ್ಲಸ್​ ನಿಂದ ಬಿಡುಗಡೆ ಆದ ಸ್ಮಾರ್ಟ್ ಟಿವಿಯಲ್ಲಿ ಗಮನ ಸೆಳೆಯುವ ಆಫರ್ಸ್​ ಲಭ್ಯವಿದೆ. ಈಗಾಗಲೇ ಭಾರತದಲ್ಲಿ ಮೊಬೈಲ್​ ಬ್ರ್ಯಾಂಡ್​ಗಳ ಮೂಲಕ ಜನಪ್ರಿಯತೆ ಪಡೆದಿರುವ ಒನ್​ಪ್ಲಸ್​ ಕಂಪನಿ ನಂತರದಲ್ಲಿ ಸ್ಮಾರ್ಟ್​ಟಿವಿ ಬಿಡುಗಡೆ ಮಾಡಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ.

ಒನ್​​ಪ್ಲಸ್​ ಬಿಡುಗಡೆ ಮಾಡುತ್ತಿರುವ ಒನ್​​ಪ್ಲಸ್​ ವೈ1ಎಸ್​ ಪ್ರೋ 4ಕೆ ಸ್ಮಾರ್ಟ್​​ಟಿವಿಯಾಗಿದ್ದು ಇದು 43 ಇಂಚಿನ ಮತ್ತು 50 ಇಂಚಿನ ಸ್ಮಾರ್ಟ್​ಟಿವಿ ವರ್ಷನ್​ಗಳನ್ನು ಒಳಗೊಂಡಿದೆ. ಒನ್​ಪ್ಲಸ್​ ಸ್ಮಾರ್ಟ್​ಫೋನ್​ಗಳ ಮಾದರಿಗಳಲ್ಲಿ ಬಹಳಷ್ಟು ಬೇಡಿಕೆಯನ್ನು ಹೊಂದಿದ್ದು ಇದೀಗ ದೊಡ್ಡ ಇಂಚಿನ ಡಿಸ್​ಪ್ಲೇಯನ್ನು ಒಳಗೊಂಡ ಸ್ಮಾರ್ಟ್​ಟಿವಿಯನ್ನು ಬಿಡುಗಡೆ ಮಾಡಿದೆ.

ಸದ್ಯ ಈ 55 ಇಂಚಿನ ಒನ್​ಪ್ಲಸ್​ ಸ್ಮಾರ್ಟ್‌ಟಿವಿಯನ್ನು 39,999 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಇದೇ ಡಿಸೆಂಬರ್ 13 ರಿಂದ ಮಧ್ಯಾಹ್ನ 12 ಗಂಟೆಯಿಂದ ಮೊಟ್ಟ ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿರುವ ಈ 55-ಇಂಚಿನ ಒನ್​ಪ್ಲಸ್​ ವೈ1ಎಸ್ ಪ್ರೋ​​ 55 ಇಂಚಿನ ಸ್ಮಾರ್ಟ್‌ಟಿವಿಯನ್ನು OnePlus.in, ಫ್ಲಿಪ್​ಕಾರ್ಟ್​​ ಮತ್ತು ಒನ್​ಪ್ಲಸ್​ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಲು ಅವಕಾಶವಿದೆ.

ಇನ್ನು ಈ ಸ್ಮಾರ್ಟ್​​​ಟಿವಿಯನ್ನು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಖರೀದಿಸಿದರೆ 3,000 ರೂ. ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದಾಗಿದೆ. ಇಷ್ಟೇ ಅಲ್ಲದೇ, ಪ್ರಮುಖ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಈ ಸ್ಮಾರ್ಟ್‌ಟಿವಿ ಖರೀದಿಸುವ ಗ್ರಾಹಕರಿಗೆ ಒಂಬತ್ತು ತಿಂಗಳವರೆಗೆ ನೋ-ಕಾಸ್ಟ್ ಇಎಮ್​ಐ ಲಾಭವನ್ನು ಸಹ ನೀಡುವುದಾಗಿ ಒನ್​​ಪ್ಲಸ್​ ಕಂಪನಿ ತಿಳಿಸಿದೆ.

ಒನ್​​ಪ್ಲಸ್​ ವೈ1ಎಸ್​ ಪ್ರೋ 55-ಇಂಚಿನ ಸ್ಮಾರ್ಟ್‌ಟಿವಿ ಯ ವಿಶೇಷತೆ :

  • ಒನ್​​ಪ್ಲಸ್​ ವೈ1ಎಸ್​ ಪ್ರೋ 55-ಇಂಚಿನ ಸ್ಮಾರ್ಟ್‌ಟಿವಿ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿರುವ 55-ಇಂಚಿನ 4K ಯುಹೆಚ್​ಡಿ LED ಡಿಸ್‌ಪ್ಲೇ ಹೊಂದಿದೆ.
  • HDR10+ ಡಿಕೋಡಿಂಗ್, HDR10 ಮತ್ತು HLG ಫಾರ್ಮ್ಯಾಟ್‌ಗಳ ಜೊತೆಗೆ ಆಟೊ ಲೋ ಲೆನ್ಸಿಟಿ ಮೋಡ್​ (ALLM) ಮತ್ತು ಸುಧಾರಿತ ವಿಡಿಯೋ ಫ್ರೇಮ್ ರೇಟ್ (MEMC) ವೈಶಿಷ್ಟ್ಯಗಳನ್ನು ಹೊಂದಿರುವ ಈ ಡಿಸ್‌ಪ್ಲೇ ಹೊಂದಿದೆ.
  • ಹುಡ್ ಅಡಿಯಲ್ಲಿ, 2GB RAM ಮತ್ತು 8GB ಇಂಟರ್ನಲ್ ಸ್ಟೋರೇಜ್​​ನೊಂದಿಗೆ ರಚಿಸಲಾಗಿರುವ ಮೀಡಿಯಾಟೆಕ್​ MT9216 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ.
  • ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಟಿವಿ 10 ಆಧಾರಿತ OxygenPlay 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
  • ಹೊಸದಾಗಿ ಬಿಡುಗಡೆಯಾಗಿರುವ ಒನ್​​ಪ್ಲಸ್​ ವೈ1ಎಸ್​ ಪ್ರೋ 55-ಇಂಚಿನ ಸ್ಮಾರ್ಟ್‌ಟಿವಿ 24 ವ್ಯಾಟ್ ಆಡಿಯೊ ಔಟ್‌ಪುಟ್ ಅನ್ನು ನೀಡಲಿದೆ.
  • ಜೊತೆಗೆ Dolby Atmosಗೆ ಬೆಂಬಲವನ್ನು ಕೂಡ ನೀಡುತ್ತದೆ.
  • ಈ ಸ್ಮಾರ್ಟ್‌ಟಿವಿಯಲ್ಲಿರುವ ಇನ್‌ಬ್ಯುಲ್ಡ್ ಗಾಮಾ ಎಂಜಿನ್ ಡೈನಾಮಿಕ್, ಡಿಸ್​​ಪ್ಲೇನ ಬಣ್ಣಗಳು ಮತ್ತು ಕಾಂಟ್ರಾಸ್ಟ್ ನಲ್ಲಿ ದೃಶ್ಯಗಳನ್ನು ಉತ್ತಮಗೊಳಿಸುವ ಭರವಸೆ ನೀಡುತ್ತದೆ.
  • 3x HDMI (HDMI1 ನಲ್ಲಿ ARC ಬೆಂಬಲ), 2x USB, ಆಪ್ಟಿಕಲ್ ಮತ್ತು ಇಂಟರ್ನೆಟ್​, Wi-Fi 802.11 ac, 2.4GHz + 5GHz, ಬ್ಲೂಟೂತ್ 5.0 LE ವೈರ್‌ಲೆಸ್ ಕನೆಕ್ಟಿಂಗ್​ ಹೊಂದಿದೆ .
  • ಈ ಸ್ಮಾರ್ಟ್‌ಟಿವಿ ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ಜೊತೆಗೆ 230+ ಲೈವ್ ಚಾನೆಲ್‌ಗಳಿಗೆ ಪ್ರವೇಶ ನೀಡುವುದರೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಒಟ್ಟಿನಲ್ಲಿ ಈ ಸ್ಮಾರ್ಟ್ ಟಿವಿ ಜನರ ಮನಸ್ಸನ್ನು ಗೆಲ್ಲುವುದು ಖಂಡಿತ.

Leave A Reply

Your email address will not be published.