ಯೂಟ್ಯೂಬ್‌ ನೋಡುತ್ತಾ ಮರ್ಮಾಂಗಕ್ಕೆ ರಿಂಗ್‌ ಸಿಲುಕಿತು | ಆದರೆ ರಿಂಗ್‌ ತೆಗೆಯಲು ಮಾತ್ರ ಅಗ್ನಿಶಾಮಕದವರು ಬಂದ್ರು | ಯಾಕೆಂದರೆ…

ಏನೋ ಮಾಡಲು ಹೋಗಿ ಇನ್ನೇನೋ ಅವಾಂತರ ಮಾಡಿಕೊಳ್ಳುವ ಪರಿಪಾಠ ಇಂದು ಸಾಮಾನ್ಯವಾಗಿದೆ. ಹುಚ್ಚು ಹರಸಾಹಸ ಮಾಡಲು ಹೋಗಿ ತೊಂದರೆಗಳಿಗೆ ಆಹ್ವಾನ ಮಾಡಿಕೊಟ್ಟಂತಾಗುತ್ತದೆ. ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಶನಿವಾರ ಯೂಟ್ಯೂಬ್ ವಿಡಿಯೋ ನೋಡುತ್ತಾ ಮರ್ಮಾಂಗದಲ್ಲಿ ರಿಂಗ್ ಸಿಲುಕಿಸಿ ಕೊಂಡ ಘಟನೆಯೊಂದು ವರದಿಯಾಗಿದೆ. ರಿಂಗ್ ತೆಗೆಯಲು ಕುಟುಂಬಸ್ಥರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ . ಆದರೆ, ಮನೆಯವರಿಂದ ಆಗದೇ ಇದ್ದಾಗ ವೈದ್ಯರನ್ನು ಸಂಪರ್ಕಿಸಲಾಗಿದೆ. ಕೊನೆಗೆ ವೈದ್ಯರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ರಿಂಗ್ ಅನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ವೈದ್ಯರು ವೆಲ್ಲಿಮಡುಕುನ್ನುವಿನಲ್ಲಿರುವ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೇರಳದ ಫೆರೊಕೆ ಮೂಲದ ಬಾಲಕ ಭಾನುವಾರ ಬೆಳಗ್ಗೆ ಕೊಯಿಕ್ಕೋಡ್ ಮೆಡಿಕಲ್ ಕಾಲೇಜು ಹಾಸ್ಪಿಟಲ್ ಗೆ ದಾಖಲು ಮಾಡಲಾಗಿದೆ. ಕೊಯಿಕ್ಕೋಡ್ ನಲ್ಲಿ ಸರಿಯಾದ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ 15 ವರ್ಷದ ಬಾಲಕನ ಮರ್ಮಾಂಗದಲ್ಲಿ ಸಿಲುಕಿಕೊಂಡಿದ್ದ ಸ್ಟೀಲ್​ ರಿಂಗ್​ ಅನ್ನು ಹೊರ ತೆಗೆಯುವ ಮೂಲಕ ಆತನ ಪ್ರಾಣ ಕಾಪಾಡಿರುವ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ವರದಿಯಾಗಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ವೈದ್ಯರ ಸಹಾಯದಿಂದ ವಿಶೇಷವಾಗಿ ಹೊಂದಿಕೊಳ್ಳುವ ಮತ್ತು ಮೃಧು ಗ್ರೈಂಡರ್ ಬಳಸಿ ಸ್ಟೀಲ್ ರಿಂಗ್ ಅನ್ನು ಕತ್ತರಿಸುವ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾರೆ.

Leave A Reply

Your email address will not be published.