Affordable Cars: ನಿಮಗಿದು ತಿಳಿದಿರಲಿ ವಾಹನ ಪ್ರಿಯರೇ | 2 ರಿಂದ 4 ಲಕ್ಷ ರೂ.ಗಳಲ್ಲಿ ಲಭ್ಯವಿರುವ ಕಾರುಗಳಿವು

Share the Article

ಸಾಮಾನ್ಯವಾಗಿ ಎಲ್ಲರ ಬಳಿಯೂ ಒಂದಾದರು ಕಾರು ಇದ್ದೇ ಇರುತ್ತದೆ. ಹಾಗೇ ಕಾರು ಇಲ್ಲದವರು ಚಿಂತೆ ಮಾಡುವ ಅವಶ್ಯಕತೆ ಇಲ್ಲಾ. ನೀವೇನಾದರೂ ಕಾರು ಖರೀದಿಗೆ ಯೋಚಿಸಿದ್ದರೆ ಇಲ್ಲಿದೆ ಅತ್ಯುತ್ತಮ ಗುಣಮಟ್ಟದ ಕಾರುಗಳು ನಿಮಗಾಗಿ. ಇನ್ನೂ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕಾಗಿ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಕೂಡ ಲಭ್ಯವಿದೆ. ಅಂತಹ ಒಂದು ಪ್ಲಾಟ್‌ಫಾರ್ಮ್ ಎಂದರೆ ಕಾರ್ಸ್ 24. ಈ ಆನ್‌ಲೈನ್ ಪ್ಲಾಟ್‌ಫಾರ್ಮ್ನಲ್ಲಿ ನೀವು 2 ರಿಂದ 4 ಲಕ್ಷ ರೂ.ಗಳಲ್ಲಿ ಉತ್ತಮ ಗುಣಮಟ್ಟವುಳ್ಳ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಬಹುದಾಗಿದೆ.

ಇದೀಗ ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಐದು ಕಾರುಗಳು ಯಾವುದು? ಅದರ ಬೆಲೆ ಏನು? ಹಾಗೇ ಇದರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.

2011 ಹ್ಯುಂಡೈ i10 MAGNA: ಇನ್ನೂ, 2011 ಹ್ಯುಂಡೈ i10 MAGNA 1.2 KAPPA2 ಮ್ಯಾನುಯಲ್ ಕಾರಿನ (ಸೆಕೆಂಡ್ ಹ್ಯಾಂಡ್) ಬೆಲೆ 2.72 ಲಕ್ಷ ರೂ. ಎನ್ನಲಾಗಿದೆ. ಹಾಗೇ ಈ ಕಾರು 45,437 ಕಿಮೀ ಓಡಿದ್ದು, ಇದು ಮೊದಲ ಮಾಲೀಕರ ಕಾರಾಗಿದೆ. ಹಾಗೂ ಪೆಟ್ರೋಲ್ ಎಂಜಿನ್ ಕಾರಾಗಿದ್ದು, ಇದರ ಇಎಂಐ 5,318ರೂ.ಗಳಿಂದ ಪ್ರಾರಂಭವಾಗುತ್ತದೆ.

2011 ರ ಮಾರುತಿ ವ್ಯಾಗನ್ R: ಈ ಕಾರಿನ 1.0 VXI ಮ್ಯಾನುವಲ್‌ ಬೆಲೆ 2.72 ರೂ. ಎಂದು ತಿಳಿದುಬಂದಿದೆ. ಇನ್ನೂ, ಈ ಕಾರು ಕೇವಲ 28,971 ಕಿ.ಮೀ ಕ್ರಮಿಸಿದ್ದು ಈ ಮೊದಲ ಮಾಲೀಕರ ಕಾರು. ಪೆಟ್ರೋಲ್ ಎಂಜಿನ್ ಕಾರ್ ಆಗಿದ್ದು, ಇದರ ಇಎಂಐ ಕೂಡ 5,318ರೂ.ಗಳಿಂದ ಆರಂಭವಾಗಲಿದೆ.

2012 ಹ್ಯುಂಡೈ i10 ERA: ಇದರ 1.1 IRDE ಮ್ಯಾನುಯಲ್ ಬೆಲೆಯನ್ನು 2.46 ಲಕ್ಷ ರೂ. ಆಗಿದ್ದು, ಈ ಕಾರು 30,492 ಕಿ.ಮೀ ಕ್ರಮಿಸಿದೆ ಎನ್ನಲಾಗಿದೆ. ಈ ಪೆಟ್ರೋಲ್ ಎಂಜಿನ್‌ ಕಾರ್ ಮೊದಲ ಮಾಲೀಕರ ಕಾರ್ ಆಗಿದ್ದು, ಡ್ರಇದರ ಇಎಂಐ 4,809ರೂ.ನಿಂದ ಪ್ರಾರಂಭವಾಗುತ್ತದೆ.

2018 ರ Datsun Redi Go A: ಇನ್ನೂ, ಈ ಕಾರಿನ ಮ್ಯಾನುಯಲ್‌ನ ಬೆಲೆ 2.77 ಲಕ್ಷ ರೂ. ಆಗಿದ್ದು,ಈ ಕಾರು 22,237 ಕಿ.ಮೀ. ಕ್ರಮಿಸಿದೆ. ಇದು ಪೆಟ್ರೋಲ್ ಎಂಜಿನ್ ಕಾರ್ ಆಗಿದ್ದು, ಮೊದಲ ಮಾಲೀಕರ ಕಾರ್ ಆಗಿದೆ. ಇದರ ಇಎಂಐ 5,415ರೂ.ಗಳಿಂದ ಆರಂಭವಾಗಲಿದೆ.

2013 ಹೋಂಡಾ ಅಮೇಜ್: 2013 ಹೋಂಡಾ ಅಮೇಜ್ 1.2 SMT I VTEC ಮ್ಯಾನುವಲ್‌ ಕಾರಿಗೆ 3.67 ಲಕ್ಷ ರೂ.ಗಳು ಎನ್ನಲಾಗಿದೆ. ಈ ಕಾರು ಸುಮಾರು 58,239 ಕಿ.ಮೀ ಕ್ರಮಿಸಿದೆ. ಈ ಪೆಟ್ರೋಲ್ ಎಂಜಿನ್ ಕಾರ್ ಫಸ್ಟ್ ಓನರ್ ಕಾರ್ ಆಗಿದ್ದು, ಇದರ ಇಎಂಐ 7,175 ರೂ.ನಿಂದ ಪ್ರಾರಂಭವಾಗಲಿದೆ.

Leave A Reply