ಈ ಸಿಮ್‌ಗೆ ರೀಚಾರ್ಜ್‌ ಮಾಡಿದರೆ 50ಜಿಬಿ ಡಾಟಾ ಫ್ರೀ ಫ್ರೀ ಫ್ರೀ!!

ಟೆಲಿಕಾಂ ಸಂಸ್ಥೆಗಳು ಒಂದಲ್ಲಾ ಒಂದು ಆಫರ್’ಗಳನ್ನು ಬಿಡುಗಡೆ ಮಾಡುತ್ತಿದ್ದೂ, ಗ್ರಾಹಕರನ್ನು ತನ್ನತ್ತ ಸೆಳೆಯುವುದೇ ಇದರ ಉದ್ದೇಶವಾಗಿದೆ. ದೇಶದ ನಂಬರ್ ವನ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಸ್ಪೆಷಲ್ ರೀಚಾರ್ಜ್​ ಪ್ಲಾನ್ ಬಿಡುಗಡೆ ಮಾಡಿದ್ದೂ ಇದರಲ್ಲಿ 50ಜಿಬಿ ಫ್ರೀ ಡೇಟಾವನ್ನು ಪಡೆಯಬಹುದಾಗಿದೆ.

ಪ್ರಸ್ತುತ ಫಿಫಾ ವಿಶ್ವಕಪ್ ಕತಾರ್ 2022 ನಡೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ ಫುಟ್ಬಾಲ್ ಪ್ರೇಮಿಗಳಿಗಾಗಿ ಫುಟ್ಬಾಲ್ ವಿಶ್ವಕಪ್ ಡೇಟಾ ಪ್ಯಾಕ್ ಅನ್ನು ನೀಡುತ್ತಿದೆ.

ಈ ಹೊಸ ಆಫರ್ ನಲ್ಲಿ ಹೆಚ್ಚು ಡೇಟಾ ಬಳಸುವವರಿಗಾಗಿ ಪ್ರಿಪೇಯ್ಡ್ ಪ್ಯಾಕ್‌ನಲ್ಲಿ 4G ಡೇಟಾ ಆ್ಯಡ್ ಆನ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಜಿಯೋ ಬಿಡುಗಡೆ ಮಾಡಿದ 222 ರೂಪಾಯಿಯ ಪ್ರಿಪೇಯ್ಡ್​ ಡೇಟಾ ಆ್ಯಡ್​ ಆನ್​ ಪ್ಯಾಕ್​ ಅನ್ನು ರೀಚಾರ್ಜ್​ ಮಾಡಿದರೆ 50GB ಡೇಟಾವನ್ನು ಪಡೆಯಬಹುದು. ಈ ಡೇಟಾ ಪ್ಯಾಕ್​ ಅನ್ನು 30 ದಿನಗಳವರೆಗೆ ಬಳಸಬಹುದು.

ಡೇಟಾ ಪ್ರಯೋಜನಗಳು ಮಾತ್ರ ಲಭ್ಯವಿದ್ದೂ, 50GB ಡೇಟಾವನ್ನು ಬಳಸಿದ ನಂತರ, ನೀವು 64kbps ವೇಗದಲ್ಲಿ ಅನ್ಲಿಮಿಟೆಡ್​ ಡೇಟಾವನ್ನು ಬಳಸಬಹುದು. ಆದರೆ ಈ ಯೋಜನೆ ಕಾಲ್​ ಮಾಡುವಂತಹ ಪ್ರಯೋಜನಗಳನ್ನು ಒಳಗೊಂಡಿಲ್ಲ. ಇದೊಂದು ಯೋಜನೆ ಮಾತ್ರವಲ್ಲದೇ ರಿಲಯನ್ಸ್ ಜಿಯೋದಲ್ಲಿ ಹಲವಾರು ಡೇಟಾ ಆ್ಯಡ್​ ಆನ್ ಪ್ಯಾಕ್‌ಗಳಿವೆ.

ಜಿಯೋದ ರೂ.181 ಡೇಟಾ ಆ್ಯಡ್ ಆನ್ ಪ್ಲಾನ್ ರೀಚಾರ್ಜ್ ಆಗಿದ್ದರೆ ನೀವು 30GB ಡೇಟಾವನ್ನು ಪಡೆಯಬಹುದು. ಆದರೆ ಇದರ ವ್ಯಾಲಿಡಿಟಿ ಮಾತ್ರ ಕೇವಲ 30 ದಿನಗಳು. ಜಿಯೋ ರೂ.241 ಡೇಟಾ ಆ್ಯಡ್ ಆನ್ ಪ್ಲಾನ್ ರೀಚಾರ್ಜ್ ಮಾಡಿದರೆ 40GB ಡೇಟಾವನ್ನು ಬಳಸಬಹುದು. ಈ ರೀಚಾರ್ಜ್​ ಪ್ಲಾನ್​ನ ವ್ಯಾಲಿಡಿಟಿ ಕೂಡ 30 ದಿನಗಳವರೆಗೆ ಇರುತ್ತದೆ.

ಜಿಯೋನ ರೂ.301 ಡೇಟಾ ಆ್ಯಡ್​ ಆನ್ ಪ್ಲಾನ್ ಅನ್ನು ರೀಚಾರ್ಜ್ ಮಾಡಿದರೆ 50GB ಡೇಟಾವನ್ನು ಗ್ರಾಹಕರಿಗೆ ಲಭ್ಯವಾಗುತ್ತದೆ. ಇದರ ವ್ಯಾಲಿಡಿಟಿ 30 ದಿನಗಳವರೆಗೆ ಇರುತ್ತದೆ. ಜಿಯೋದ ರೂ.555 ಡೇಟಾ ಆ್ಯಡ್ ಆನ್ ಪ್ಲಾನ್ ರೀಚಾರ್ಜ್ ಮಾಡಿದರೆ ನೀವು 55GB ಡೇಟಾವನ್ನು ಬಳಸಬಹುದು. ಈ ಯೋಜನೆಯನ್ನು 30 ದಿನಗಳವರೆಗೆ ಬಳಸಬಹುದಾಗಿದೆ.

ನೀವು ಜಿಯೋ ರೂ.2878 ಡೇಟಾ ಆ್ಯಡ್ ಆನ್ ಪ್ಲಾನ್ ಅನ್ನು ರೀಚಾರ್ಜ್ ಮಾಡಿದರೆ, ನೀವು ಪ್ರತಿದಿನ 2GB ಡೇಟಾವನ್ನು ಬಳಸಬಹುದು. ಆದರೆ ಇದರ ವ್ಯಾಲಿಡಿಟಿ ಮಾತ್ರ 365 ದಿನಗಳವರೆಗೆ ಇದೆ. ಜಿಯೋನ 2998 ರೂಪಾಯಿಯ ಡೇಟಾ ಆಡ್ ಆನ್ ಪ್ಲಾನ್ ಅನ್ನು ಆಯ್ದುಕೊಂಡರೆ ಪ್ರತಿದಿನ 2.5GB ಡೇಟಾವನ್ನು ಬಳಸಬಹುದು. ಈ ಯೋಜನೆಯ ವ್ಯಾಲಿಡಿಟಿ 365 ದಿನಗಳಾಗಿರುತ್ತದೆ.

ಇವೆಲ್ಲವೂ ಡೇಟಾ ಆ್ಯಡ್​ ಆನ್ ಪ್ಯಾಕ್‌ಗಳು ಮಾತ್ರ. ಈ ಯೋಜನೆಗಳು ಯಾವುದೇ ಅನ್ಲಿಮಿಟೆಡ್​ ಕಾಲ್ ಅಥವಾ ಎಸ್​ಎಮ್​ಎಸ್​ನ ಆಫರ್ಸ್​ಗಳನ್ನು ನೀಡುವುದಿಲ್ಲ. ಇದು ಹೆಚ್ಚು ಡೇಟಾ ಅಗತ್ಯವಿರುವವರಿಗೆ ಸಹಕಾರಿಯಾಗಲಿದೆ. ಇದೀಗ ಪ್ರಸ್ತುತ ಜಿಯೋನ ರೀಚಾರ್ಜ್​ ಪ್ಲಾನ್​ ಹೊಂದಿರುವವರಿಗೆ ಡೇಟಾ ವೋಚರ್ ಯೋಜನೆಗಳಿವೆ. ಅಂದರೆ ಈ ಯೋಜನೆಯಲ್ಲಿ ಒಂದು ದಿನಕ್ಕೆ ಲಭ್ಯವಿರುವ ಡೇಟಾವನ್ನು ಬಳಸಿದ ನಂತರ, ನೀವು ಹೆಚ್ಚುವರಿ 4G ಡೇಟಾವನ್ನು ಬಳಸಲು ಬಯಸಿದರೆ, ನೀವು 4G ಡೇಟಾ ವೋಚರ್ ಅನ್ನು ರೀಚಾರ್ಜ್ ಮಾಡಬಹುದು.

ಜಿಯೋದಿಂದ ರೂ.121 ಡೇಟಾ ವೋಚರ್ ರೀಚಾರ್ಜ್ ಮಾಡಿದರೆ 12GB ಡೇಟಾವನ್ನು ಪಡೆಯಬಹುದಾಗಿದೆ. ಅದೇ ರೀತಿ ಜಿಯೋದ ರೂ.61 ಡೇಟಾ ವೋಚರ್ ರೀಚಾರ್ಜ್ ಮಾಡಿದರೆ 6GB ಡೇಟಾವನ್ನು ಪಡೆಯಬಹುದು. ಹಾಗೇ ರೂ.25 ಡೇಟಾ ವೋಚರ್ ರೀಚಾರ್ಜ್ ಮಾಡಿದರೆ 2GB ಡೇಟಾವನ್ನು ಪಡೆಯಬಹುದಾಗಿದೆ. ಇನ್ನು ಕಡಿಮೆ ಬೆಲೆಯ ಡೇಟಾ ವೋಚರ್​ ಎಂದರೆ ಜಿಯೋನ 15 ರೂಪಾಯಿಯದ್ದಾಗಿದ್ದೂ ಇದರಲ್ಲಿ 1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ.

Leave A Reply

Your email address will not be published.