Fennel Seeds : ಈ ರೀತಿಯಾಗಿ ಸೋಂಪು ಸೇವಿಸಿ | ಚಮತ್ಕಾರ ಆಮೇಲೆ ಆನಂದಿಸಿ

ಬಡೆಸೊಪ್ಪು, ಸೊಂಪು ಎಂಬ ಹೆಸರಿನಿಂದ ಕರೆಯುವ, ನೋಡಲು ಜೀರಿಗೆಯಂತೆ ಕಾಣುವ ಸೊಂಪನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ. ಜನರು ಊಟವಾದ ನಂತರ ಸೊಂಪನ್ನು ತಿನ್ನುತ್ತಾರೆ. ಕೆಲವು ಕಡೆಗಳಲ್ಲಿ ಮದುವೆ ಮನೆಗಳಲ್ಲಿ ಊಟದ ನಂತರ ಸೊಂಪನ್ನು ಕೊಡುವುದು ಪದ್ಧತಿಯಾಗಿದೆ. ಆದರೆ ಅದರ ಉಪಯೋಗಗಳ ಬಗ್ಗೆ ಗೊತ್ತಿರುವುದಿಲ್ಲ. ಸೊಂಪನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ರಕ್ತದೊತ್ತಡ ನಿಯಂತ್ರಿಸುತ್ತದೆ:- ಪ್ರತಿನಿತ್ಯ ಸೊಂಪು ಸೇವಿಸುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಸುತ್ತದೆ. ಅದರ ಪರಿಣಾಮವು ತಂಪಾಗಿರುತ್ತದೆ. ಆದ್ದರಿಂದ ಇದನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಬಳಸಲಾಗುತ್ತದೆ.

ನೆನಪಿನ ಶಕ್ತಿಗೆ ಸಹಕಾರಿ:- ನಿಮ್ಮ ಜ್ನಾಪಕ ಶಕ್ತಿ ನಿಧಾನವಾಗಿದ್ದರೆ ನೀವು ಬಾದಾಮಿ, ಸೋಂಪು ಮತ್ತು ಸಕ್ಕರೆಯನ್ನು ಸಮಾನ ಪ್ರಮಾಣದಲ್ಲಿ ಪುಡಿಮಾಡಿ ಮತ್ತು ಪ್ರತಿದಿನ ಊಟದ ಬಳಿಕ ಸೇವಿಸಿ. ಇದರಿಂದ ನಿಮ್ಮ ನೆನಪಿನ ಶಕ್ತಿ ಚುರುಕಾಗುತ್ತದೆ. ಅಲ್ಲದೆ ಇದರಿಂದ ದೃಷ್ಟಿಯೂ ಗುಣವಾಗುತ್ತದೆ.

ಸೊಂಪಿನಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇರುವ ಕಾರಣ, ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೊಂಪನ್ನು ತಿನ್ನುವುದರಿಂದ ರಕ್ತವು ಶುದ್ಧವಾಗುತ್ತದೆ. ಇದರಿಂದ ಚರ್ಮವೂ ಹೊಳೆಯುತ್ತದೆ. ಯಾರಿಗಾದರೂ ಬಾಯಿಯಿಂದ ಹೆಚ್ಚು ವಾಸನೆ ಬಂದರೆ, ಅವರು ಪ್ರತಿದಿನ ಸೋಂಪನ್ನು ತಿನ್ನಬೇಕು. ಇದರ ಬಳಕೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಕಾಲೋಚಿತ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮುಟ್ಟಿನ ತೊಂದರೆ ಎದುರಿಸುತ್ತಿರುವ ಮಹಿಳೆಯರು ಊಟದ ನಂತರ ಬೆಲ್ಲದ ಜೊತೆ ಸೊಂಪು ತಿನ್ನುವುದರಿಂದ ಮುಟ್ಟಿನ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ಕಫದ ಸಮಸ್ಯೆಯನ್ನು ಎದುರಿಸುವವರು ಸೊಂಪನ್ನು ತಿನ್ನುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ. ಅಸ್ತಮಾ ಹಾಗೂ ಕೆಮ್ಮು ಇರುವವರು ಸೊಂಪನ್ನು ತಿನ್ನುವುದು ಒಳ್ಳೆಯದು.

Leave A Reply

Your email address will not be published.