ಏಪ್ರಿಲ್ 1 ರೊಳಗೆ ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯ: ಆದಾಯ ತೆರಿಗೆ ಇಲಾಖೆ ಎಚ್ಚರಿಕ

ನಾವು ಯಾವುದೇ ಅರ್ಜಿ ಅಥವಾ ಸೌಲಭ್ಯ ಪಡೆಯಬೇಕಾದರೆ ಆಧಾರ್ ಇರಲೇಬೇಕು ಹಾಗೆಯೇ ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ಮತ್ತು ಇತರ ಯಾವುದೇ ಗುರುತಿನ ದಾಖಲೆಯ ಆಧಾರದ ಮೇಲೆ ಪಡೆಯಲು ಸಾಧ್ಯವಿಲ್ಲದ ಕಾರಣ ಆಧಾರ್ ಕಾರ್ಡ್ ನ್ನು ಪ್ರತಿಯೊಂದು ದಾಖಲೆಗಳೊಂದಿಗೆ ಲಿಂಕ್ ಮಾಡುವುದು ಮುಖ್ಯ ಆಗಿದೆ. ಅಲ್ಲದೆ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಬ್ಯಾಂಕ್ ಖಾತೆಯಲ್ಲಿ ನಗದು ಠೇವಣಿ ಇಡುವುದು, ಡಿಮ್ಯಾಟ್ ಖಾತೆ ತೆರೆಯುವುದು, ಸ್ಥಿರಾಸ್ತಿಗಳ ವಹಿವಾಟು ಮತ್ತು ಸೆಕ್ಯುರಿಟಿಗಳಲ್ಲಿ ವ್ಯವಹರಿಸುವುದು ಸೇರಿದಂತೆ ಹಲವಾರು ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ದೇಶದ ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸ್ವೀಕರಿಸುವ ಫೋಟೋ ಗುರುತಿನ ಸಾಧನವಾಗಿದೆ ಎಂಬುದು ಈಗಾಗಲೇ ತಿಳಿದಿರುವ ವಿಚಾರ.

ಅಲ್ಲದೆ ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ಮತ್ತು ಇತರ ಯಾವುದೇ ಗುರುತಿನ ದಾಖಲೆಯ ಆಧಾರದ ಮೇಲೆ ಪಡೆಯಲು ಸಾಧ್ಯವಿಲ್ಲದ ಕಾರಣ, ಆಧಾರ್ ನ್ನು ಪ್ಯಾನ್ ಗೆ ಲಿಂಕ್ ಮಾಡುವುದು ತೆರಿಗೆ ಆಡಳಿತಕ್ಕೆ ಮುಖ್ಯವಾಗಿದೆ.

ಸದ್ಯ ಆಯಾ ಬಯೋಮೆಟ್ರಿಕ್ ಗುರುತಿನ ಸಂಖ್ಯೆ ಆಧಾರ್ ಗೆ ಲಿಂಕ್ ಮಾಡದ ಶಾಶ್ವತ ಖಾತೆ ಸಂಖ್ಯೆಗಳು ಏಪ್ರಿಲ್ 1 ರಿಂದ ನಿಷ್ಕ್ರಿಯವಾಗುತ್ತವೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ವರ್ಗಕ್ಕೆ ಸೇರದ ಎಲ್ಲಾ ಪ್ಯಾನ್ ಹೊಂದಿರುವವರು 2023 ರ ಮಾರ್ಚ್ 31 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

1 ಏಪ್ರಿಲ್ 2023 ರಿಂದ, ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಕೊನೆಯ ದಿನಾಂಕ ಶೀಘ್ರದಲ್ಲೇ ಸಮೀಪಿಸುತ್ತಿದೆ.

ಈ ಹಿಂದಿನ ಅಧಿಸೂಚನೆಯ ಪ್ರಕಾರ, ಆಧಾರ್ ಹೊಂದಿರದ ಮತ್ತು ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯದ ನಿವಾಸಿಗಳಾಗಿರುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ಹಿಂದಿನ ವರ್ಷದಲ್ಲಿ ಯಾವುದೇ ಸಮಯದಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಭಾರತದ ನಾಗರಿಕರಲ್ಲದವರು ವಿನಾಯಿತಿ ವರ್ಗಕ್ಕೆ ಸೇರುತ್ತಾರೆ.

ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವುದು ತೆರಿಗೆ ಇಲಾಖೆಯ ಪ್ರಮುಖ ಯೋಜನೆಯಾಗಿದ್ದು, ಇದು ನಕಲಿ ಪ್ಯಾನ್ ನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ತೆರಿಗೆ ಅನುಸರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ₹ 1000 ಶುಲ್ಕ ಪಾವತಿಸಿದ ನಂತರ ತೆರಿಗೆ ಇಲಾಖೆಯ ವೆಬ್ಸೈಟ್ನಲ್ಲಿ www.incometax.gov.in ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಬಹುದು ಎಂದು ಇಲಾಖೆ ತಿಳಿಸಿದೆ.

ಸದ್ಯ ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ಮತ್ತು ಇತರ ಯಾವುದೇ ಗುರುತಿನ ದಾಖಲೆಯ ಆಧಾರದ ಮೇಲೆ ಪಡೆಯಲು ಸಾಧ್ಯವಿಲ್ಲದ ಕಾರಣ ಈ ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಭ್ರಷ್ಟಾಚಾರ ತಡೆಗಟ್ಟಲು ಪ್ಯಾನ್ ಮತ್ತು ಆಧಾರ್ ನ್ನು ಲಿಂಕ್ ಮಾಡುವುದು ತೆರಿಗೆ ಆಡಳಿತಕ್ಕೆ ಮುಖ್ಯವಾಗಿದೆ.

Leave A Reply

Your email address will not be published.