Anand Mahindra: ಆನಂದ್‌ ಮಹೀಂದ್ರಾ ಅವರು ಶೇರ್ ಮಾಡಿದ್ರು ಮತ್ತೊಂದು ಫೋಟೋ | ಈ ಪೋಟೋ ಬಗ್ಗೆ ಮಹೀಂದ್ರಾ ಮಾತು ಈ ರೀತಿ ಇದೆ!

ಕೆಲವರಿಗೆ ಕ್ರಿಕೆಟ್ ಆಟದ ಬಗ್ಗೆ ಹುಚ್ಚುಪ್ರೀತಿ ಮತ್ತೆ ಕೆಲವರು ಫುಟ್ಬಾಲ್ ಮಾಯೆಗೆ ಒಳಗಾಗಿರುತ್ತಾರೆ. ಈಗ ಎಲ್ಲ ಕಡೆಯೂ ಫುಟ್ಬಾಲ್ ಆಟದ್ದೆ ಸುದ್ದಿ. ಫುಟ್ಬಾಲ್ ಆಟಕ್ಕೆ ಜಗತ್ತಿನೆಲ್ಲೆಡೆಯು ಫುಟ್ಬಾಲ್ ಆಟದ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಕೂಡ ಒಂದೇ ಒಂದು ಆಟವನ್ನು ಕೂಡ ಯಾವುದೇ ಕಾರಣಕ್ಕೂ ಮಿಸ್‌ ಮಾಡದೆ ನೋಡುವ ಫುಟ್ಬಾಲ್ ಅಭಿಮಾನಿಗಳು ಇದ್ದಾರೆ ಎಂಬುದು ಅಷ್ಟೇ ಸತ್ಯ.ಈ ಮಾತನ್ನು ರುಜುವಾತು ಮಾಡುವ ಸನ್ನಿವೇಶವೊಂದು ಮುನ್ನಲೆಗೆ ಬಂದಿದೆ.

ಫುಟ್ಬಾಲ್ (Football) ಮಾಯೆ ಎಲ್ಲ ಕಡೆ ಇದ್ದು, ಈಗ ಎಲ್ಲೆಡೆಯೂ ಫುಟ್ಬಾಲ್ ಕ್ರೇಜ್‌ (Football craze) ಸಕತ್‌ ಸದ್ದು ಮಾಡುತ್ತಿದ್ದು, ಫುಟ್ಬಾಲ್ ಆಟಕ್ಕೆ (Game) ಜಗತ್ತಿನ ಎಲ್ಲ ಕಡೆಯೂ ಅಭಿಮಾನಿಗಳಿದ್ದಾರೆ (Fans). ಆದರೆ, ಈ ನಡುವೆ ಕೆಲವರಿಗೆ ತಮ್ಮ ಕೆಲಸಗಳ ನಡುವೆ (Busy Schedule) ಫುಟ್ಬಾಲ್ ಲೈವ್‌ (Football live) ಅನ್ನು ನೋಡಲು ಆಗದೇ ಕೆಲಸದ ನಡುವೆಯೂ ನೋಡುವವರಿದ್ದಾರೆ.

ಕೆಲವರಿಗೆ ಫುಟ್ಬಾಲ್ ಕ್ರೇಜ್‌ ಎಷ್ಟಿರುತ್ತೆ ಎಂದು ಬಣ್ಣಿಸಲು ಆಗದು. ಫುಟ್ಬಾಲ್ ಆಟದ ಅಭಿಮಾನಿಯೊಬ್ಬರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗ ಕೂಡ ಆಟವನ್ನು ವೀಕ್ಷಿಸುವ ಮೂಲಕ ಫೀಫಾ ಫುಟ್ಬಾಲ್‌ ವಿಶ್ವಕಪ್ ಆಟದ ಹುಚ್ಚು ಎಷ್ಟಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಪೋಟೊ ಈಗ ಸಖತ್‌ ವೈರಲ್‌ ಆಗಿದ್ದು, ಶಸ್ತ್ರಚಿಕಿತ್ಸೆಯ ವೇಳೆ ಫುಟ್ಬಾಲ್ ವೀಕ್ಷಣೆ ಮಾಡುತ್ತಿರುವ ವ್ಯಕ್ತಿಯ ಫೋಟೋವನ್ನು ಆನಂದ್‌ ಮಹೀಂದ್ರಾರವರು ಶೇರ್‌ ಮಾಡಿಕೊಂಡಿದ್ದಾರೆ.

ಪೋಲೆಂಡ್‌ನ ಕೀಲ್ಸ್‌ನಲ್ಲಿರುವ SP ZOZ MSWiA ಎಂಬ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಿಂದ ಈ ಘಟನೆ ವರದಿಯಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದ್ದು, ನವೆಂಬರ್ 25 ರಂದು ಕೀಲ್ಸ್‌ನ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಬೆನ್ನುಮೂಳೆಯ ಆಪರೇಷನ್‌ಗೆ ಒಳಗಾಗಿದ್ದ ಸಂದರ್ಭ ಆಗ ಆ ರೋಗಿಯು ಆಪರೇಷನ್‌ ಮಾಡುವಾಗ ವೇಲ್ಸ್ ಮತ್ತು ಇರಾನ್ ನಡುವಿನ ಫುಟ್ಬಾಲ್‌ ಪಂದ್ಯವನ್ನು ವೀಕ್ಷಿಸಬಹುದೇ ಎಂದು ಅವರು ಶಸ್ತ್ರಚಿಕಿತ್ಸಕರನ್ನು ಕೇಳಿದ್ದಾರೆ. ಅವರ ಕೋರಿಕೆಯನ್ನು ವೈದ್ಯರು ಸಮ್ಮತಿ ಸೂಚಿಸಿದ್ದು, ಹಾಗಾಗಿ, ಆಪರೇಷನ್ ಥಿಯೇಟರ್‌ಗೆ ಟಿವಿಯನ್ನು ತರಿಸಲಾಗಿತ್ತು. ಆದರೆ ರೋಗಿಗೆ ಅರಿವಳಿಕೆಯ ಔಷಧಿಯನ್ನು ನೀಡಲಾಗಿದೆ.

ಭಾರತದ ಹೆಸರಾಂತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಈ ವೀಡಿಯೊವನ್ನು ಮೆಚ್ಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋವನ್ನು ಪೋಲಿಷ್ ನಗರದ ಕೀಲ್ಸ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ತೆಗೆಯಲಾಗಿದ್ದು, ಅದೇ ಆಸ್ಪತ್ರೆಯೇ ಆ ಫೋಟೋವನ್ನು ಶೇರ್‌ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಫೋಟೋವನ್ನು ಕೀಲ್ಸ್‌ನಲ್ಲಿರುವ SP ZOZ MSWiA ಎಂಬ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯು ಶೇರ್ ಮಾಡಿಕೊಂಡಿದ್ದು, ವೈದ್ಯರು ಆಪರೇಷನ್‌ ಅನ್ನು ಮುಂದುವರಿಸಿದಾಗ ಕೂಡ ಆಪರೇಶನ್ ಥಿಯೇಟರ್‌ನೊಳಗಿನ ಟಿವಿ ಪರದೆ ಮೇಲೆ ಫಿಫಾ ವಿಶ್ವಕಪ್ ಪಂದ್ಯ ಬರುತ್ತಿರುವುದನ್ನು ಮತ್ತು ರೋಗಿಯು ಅದನ್ನು ತದೇಕ ಚಿತ್ತದಿಂದ ವೀಕ್ಷಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ

ಆನಂದ್‌ ಮಹೀಂದ್ರಾ ಅವರ ಗಮನಸೆಳೆದ ವಿಡಿಯೋ ಗೆ ಟ್ವೀಟ್ ಕೂಡ ಮಾಡಿದ್ದಾರೆ. ಆನಂದ್‌ ಮಹೀಂದ್ರಾ ಅವರು ಪೋಲೆಂಡ್‌ನ ಟ್ವೀಟ್‌ನಿಂದ ಕೆಲವು ನೋಟ್‌ಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಅದರ ಶೀರ್ಷಿಕೆಯು, “ಪೋಲೆಂಡ್‌ನಲ್ಲಿರುವ ವ್ಯಕ್ತಿಯೊಬ್ಬರು ಬೆನ್ನುಮೂಳೆಯ ಆಪರೇಷನ್ ಮಾಡಿಸಿಕೊಳ್ಳುವಾಗಲೂ ಸಹ ಫಿಫಾ ಪುಟ್ಬಾಲ್‌ ವಿಶ್ವಕಪ್ ಆಟವನ್ನು ವೀಕ್ಷಣೆ ಮಾಡಲೇಬೇಕೆಂದು ಹಠ ಮಾಡಿದರ ಪರಿಣಾಮ ಅದಕ್ಕೆ ವೈದ್ಯರು ಸಹ ಅನುಮತಿ ಸೂಚಿಸಿದ್ದಾರೆ”. ಎಂದು ತಿಳಿಸಿದ್ದು, ಈ ವೀಡಿಯೊ ನೋಡಿ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.


“ಈಗಿನ ದಿನಗಳಲ್ಲಿ OT ಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ಸರ್. ರೋಗಿಯ ಆತಂಕವನ್ನು ನಿವಾರಿಸಲು, ನಾವು ಅಂತಹ ಅಭ್ಯಾಸಗಳನ್ನು ಮಾಡಬೇಕಾಗಿದೆ” ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್ ನೋಡಿ ವೈದ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದು,ಉತ್ತಮ ಸಂಗೀತ, ವೆಬ್ ಸರಣಿಯ ಸಂಚಿಕೆ ಅಥವಾ ಲೈವ್ #Fifa ಪಂದ್ಯಗಳನ್ನು ನೋಡುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು” ಎಂದು ಬರೆದಿದ್ದಾರೆ.

ಮತ್ತೊಬ್ಬರು ” ರೋಗಿಯ ಜೊತೆಗೆ, ವೈದ್ಯಕೀಯ ವೃತ್ತಿಪರರು ಶಸ್ತ್ರಚಿಕಿತ್ಸೆ ಮಾಡುವಾಗ ಅವರಿಗೆ ಫುಟ್ಬಾಲ್‌ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಸಹ ದೊಡ್ಡ ದೊಡ್ಡ ಟ್ರೋಫಿಗೆ ಅರ್ಹರು” ಎಂದು ಬರೆದುಕೊಂಡಿದ್ದಾರೆ. ಹೀಗೆ ಫುಟ್ಬಾಲ್ ಆಟದ ಮೇಲೆ ವ್ಯಕ್ತಿಗಿರುವ ಆಸಕ್ತಿ ಎಲ್ಲೆಡೆ ಪ್ರಖ್ಯಾತಿ ಗಳಿಸಿದ್ದು, ಭಾರತದ ಹೆಸರಾಂತ ಉದ್ಯಮಿ ಕೂಡ ಈ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.