Aadhaar Card ನಲ್ಲಿ ಈ ಮಾಹಿತಿಯನ್ನು ಈ ಕೂಡಲೇ ನವೀಕರಿಸಿ | ಇಲ್ಲದಿದ್ದರೆ ಸರಕಾರಿ ಯೋಜನೆ ಸಿಗೋದು ಕಷ್ಟ

ನೀವೇನಾದರೂ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಲ್ಲವಾದರೆ, ಅದನ್ನು ಈ ಕೂಡಲೇ ಅಪ್ಡೇಟ್ ಮಾಡಿ. ಯಾಕಂದ್ರೆ ನಿಮ್ಮ ಆಧಾರ್ ಕಾರ್ಡ್ ನವೀಕರಿಸದಿದ್ದರೆ ನೀವು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೆಲವು ಮುಖ್ಯವಾದ ಮಾಹಿತಿಯನ್ನು ನೀಡಿದೆ. ಹಾಗೇ ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಯೋಜನೆಗಳ ಪ್ರಯೋಜನವನ್ನು ನೀವು ಪಡೆದಿದ್ದು, ಆ ಪ್ರಯೋಜನಗಳನ್ನು ಮುಂದುವರಿಸಲು ಆಧಾರ್ ಕಾರ್ಡ್‌ನಲ್ಲಿ POI(Proof of Identity) ಮತ್ತು POA (Proof of Address) ಅನ್ನು ನವೀಕರಿಸಬೇಕಾಗುತ್ತದೆ.

ಒಂದು ವೇಳೆ ನೀವು ಆಧಾರ್ ಕಾರ್ಡ್‌ನಲ್ಲಿ POI ಮತ್ತು POA ಅನ್ನು ನವೀಕರಿಸದಿದ್ದಲ್ಲಿ, ಕೂಡಲೇ ಅದನ್ನು ನವೀಕರಿಸಿ. ಇನ್ನೂ ಆನ್‌ಲೈನ್‌ನಲ್ಲಿ ಈ ನವೀಕರಣ ಪ್ರಕ್ರಿಯೆಗೆ 25 ರೂಪಾಯಿ ಪಾವತಿಸಬೇಕಿದೆ. ಹಾಗೇ ಇದರ ಆಫ್‌ಲೈನ್‌ ನವೀಕರಣ ಪ್ರಕ್ರಿಯೆಗೆ ಶುಲ್ಕ 50 ರೂಪಾಯಿ ಆಗಿರುತ್ತದೆ. ನೀವು ಇದನ್ನು ಅಪ್ಡೇಟ್ ಮಾಡಿದರೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಯಾವುದೇ ಅಡ್ಡಿ ಇರುವುದಿಲ್ಲ.

POI ಯನ್ನು ಗುರುತಿನ ಪುರಾವೆ ಎನ್ನಲಾಗುತ್ತದೆ. ಜುಲೈ 1, 2022 ರಂದು ಆಧಾರ್ ನೀಡಿದ ಸೂಚನೆ ಏನೆಂದರೆ, ಗುರುತಿನ ಪುರಾವೆ (POI) ಅಪ್‌ಡೇಟ್‌ಗೆ ಹೆಸರು ಮತ್ತು ಫೋಟೋವನ್ನು ಒಳಗೊಂಡಿರುವ ದಾಖಲೆಗಳ ಅಗತ್ಯವಿದೆ. ಯಾವುದೆಂದರೆ, ಪ್ಯಾನ್ ಕಾರ್ಡ್, ಇ-ಪಾನ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಶಸ್ತ್ರಾಸ್ತ್ರ ಪರವಾನಗಿ, ಫೋಟೋ ಬ್ಯಾಂಕ್ ಎಟಿಎಂ ಕಾರ್ಡ್, ಫೋಟೋ ಕ್ರೆಡಿಟ್ ಕಾರ್ಡ್, ಮದುವೆಯ ಪ್ರಮಾಣಪತ್ರ, ರೈತರ ಫೋಟೋ ಪಾಸ್‌ಬುಕ್ ಸೇರಿದಂತೆ ಈ ರೀತಿಯ ದಾಖಲೆಗಳನ್ನು ಪುರಾವೆಗಳಾಗಿ ನೀಡಬಹುದು .

ಹಾಗೇ POA ಅನ್ನು ವಿಳಾಸದ ಪುರಾವೆ ಎಂದು ಕರೆಯಲಾಗುತ್ತದೆ. POA ನವೀಕರಣಕ್ಕೆ ಬೇಕಾದ ದಾಖಲೆಗಳು ಯಾವುದೆಂದರೆ, ನಿಮ್ಮ ಹೆಸರು ಮತ್ತು ವಿಳಾಸವನ್ನು ಒಳಗೊಂಡಿರುವ ದಾಖಲೆಗಳು ಬೇಕಿದೆ. ಅಂದರೆ, ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ಮೆಂಟ್, ಪಡಿತರ ಚೀಟಿ, ಮತದಾರರ ಕಾರ್ಡ್, ಚಾಲನಾ ಪರವಾನಗಿ, ಪಿಂಚಣಿ ಕಾರ್ಡ್, ಕಿಸಾನ್ ಪಾಸ್‌ಬುಕ್, ಅಂಗವಿಕಲರ ಕಾರ್ಡ್, ಎಂಎನ್‌ಆರ್‌ಇಜಿಎ ಕಾರ್ಡ್, ಮಾನ್ಯ ಶಾಲಾ ಗುರುತಿನ ಚೀಟಿ, ಶಾಲೆ ಬಿಡುವ ಪ್ರಮಾಣಪತ್ರ, ವಿದ್ಯುತ್ ಬಿಲ್, ವಾಟರ್ ಬಿಲ್, ಲ್ಯಾಂಡ್‌ಲೈನ್ ಟೆಲಿಫೋನ್ ಬಿಲ್, ಪೋಸ್ಟ್‌ಪೇಯ್ಡ್ ಮೊಬೈಲ್ ಬಿಲ್ ಇಂತಹ ದಾಖಲೆಗಳನ್ನು ಪುರಾವೆಯಾಗಿ ಸಲ್ಲಿಸಬಹುದಾಗಿದೆ.

ಇನ್ನೂ, ಆಧಾರ್ ಕಾರ್ಡ್‌ನಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಕೂಡ ಅಪ್ಡೇಟ್ ಮಾಡಬಹುದು. ಉದಾಹರಣೆಗೆ, ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಭಾಷೆಯಲ್ಲಿ ಏನಾದರೂ ಬದಲಾವಣೆ ಆಗಬೇಕಿದ್ದರೆ ಅದು ಆನ್‌ಲೈನ್‌ನಲ್ಲಿ ಮಾಡಬಹುದಾಗಿದೆ. ಹಾಗೇ ಆನ್‌ಲೈನ್ ನವೀಕರಣಕ್ಕಾಗಿ ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಾಗಿ ಬೇಕು. ಹಾಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ ಮೊದಲು ಅದನ್ನು ನವೀಕರಿಸಿ. ಆಗ ಸುಲಭವಾಗಿ ಉಳಿದ ಎಲ್ಲಾ ಮಾಹಿತಿ ನವೀಕರಿಸಬಹುದು.

Leave A Reply

Your email address will not be published.