ಈಸಿಯಾಗಿ ಮಕ್ಕಳನ್ನು ಮೊಬೈಲ್ ಗಳಿಂದ ದೂರ ಇಡುವುದು ಹೇಗೆ?
ಅದೊಂದು ಕಾಲವಿತ್ತು, ಮಕ್ಕಳು ಊಟ ಮಾಡಿಲ್ಲ ಅಂದ್ರೆ ಚಂದಮಾಮನನ್ನು ತೋರಿಸಿ, ಕಥೆ ಹೇಳಿ ಊಟ ಮಾಡಿಸುವುದು ಅಂತ. ಆದರೆ ಈಗ ಮೊಬೈಲ್ ಯುಗವಾಗಿದೆ. ಮಕ್ಕಳು ಸ್ವಲ್ಪ ಹಠ ಮಾಡಿದ್ರು ಕೂಡ ಮೊಬೈಲ್ ಕೊಟ್ಟು ಬಿಡುವುದು. ಆಗ ಸುಮ್ಮನೆ ಆಗ್ತಾರೆ. ಆದ್ರೆ ಅದೇ ಇದೀಗ ಸಮಸ್ಯೆ ಆಗಿದೆ. ಎಂದಿಗೂ ಮಕ್ಕಳು ಮೊಬೈಲ್ ಹಿಡ್ಕೊಂಡು ಇರ್ತಾರೆ ಅಂತ ಪೋಷಕರ ದೂರು ಆಗಿದೆ. ಹಾಗಾದ್ರೆ ಮಕ್ಕಳನ್ನು ಮೊಬೈಲ್ ನಿಂದ ದೂರ ಇರಿಸುವುದು ಹೇಗೆ ಅಂತ ಈಸಿ ಟಿಪ್ಸ್ ನಿಮಗಾಗಿ!
ಕಟ್ಟುನಿಟ್ಟಾದ ವೇಳಾಪಟ್ಟಿ:- ಅಂದರೆ ಒಂದೇ ಬಾರಿಗೆ ಮಕ್ಕಳಿಂದ ಮೊಬೈಲ್ ದೂರ ಇರಿಸಲು ಅಸಾಧ್ಯ. ಅದು ಖಿನ್ನತೆಗೆ ಕಾರಣವಾಗಬಹುದು. ಹಾಗಾಗಿ ವೇಳಾಪಟ್ಟಿಯನ್ನು ತಯಾರು ಮಾಡಿ. ಯಾವಾಗ ಎಲ್ಲಾ ಮೊಬೈಲ್ ಬಳಕೆ ಮಾಡಬೇಕು ನಿಮ್ಮ ಮಕ್ಕಳು ಅಂತ ಡಿಸೈಡ್ ಮಾಡಿ.
ಇತರರೊಂದಿಗೆ ಹೆಚ್ಚು ಬೆರೆಸಿ:- ನಿಜ. ಮನೆಯಲ್ಲಿ ಕೇವಲ ಅಪ್ಪ ಅಮ್ಮ ಮಾತ್ರವಲ್ಲದೆ, ತಮ್ಮ ಕುಟುಂಬದ ಸದಸ್ಯರನ್ನು ಪರಿಚಯ ಮಾಡಿ ಕೊಡಿ. ಅವರೊಂದಿಗೆ ಆಟ, ಮಾತುಕತೆಗಳನ್ನು ಮಾಡಲು ಬಿಡಿ. ಆಗ ಅವರಿಗೆ ಮೊಬೈಲ್ ನೆನಪೇ ಇರುವುದಿಲ್ಲ. ಮತ್ತು ಬೇಕು ಅಂತ ಅನಿಸೋದಿಲ್ಲ.
ಇತರೆ ತರಬೇತಿಗಳು:- ನಿಜ. ಡ್ಯಾನ್ಸ್ ಕ್ಲಾಸ್, ಮ್ಯೂಸಿಕ್, ಡ್ರಾಮ ಹೀಗೆ ಇನ್ನಿತರ ಕ್ಲಾಸ್ ಗಳಿಗೆ ಸೇರಿಸಿ. ಒತ್ತಾಯ ಆಗಿರಬಾರದು. ಅವರಿಗೆ ಯಾವ ಕ್ಷೇತ್ರದಲ್ಲಿ ಹೆಚ್ಚು ಇಷ್ಟ ಅಥವಾ ಆಸಕ್ತಿ ಇರುತ್ತದೆಯೋ ಅದರಲ್ಲಿ ಪಳಗಿಸಿ.
ಪ್ರೇರಣೆ:- ಇನ್ಸ್ಪಿರೇಷನ್ ಕಥೆಗಳು, ರಿಯಾಲಿಟಿ ಶೋ ಗಳನ್ನು ತೋರಿಸಿ. ಇದರಿಂದ ಅವರಿಗೂ ಕೂಡ ತಾನು ಕೂಡ ಹೀಗೆ ಆಗಬೇಕು ಎಂಬ ಆಸೆ ಬರುತ್ತದೆ. ಇದರ ನಡುವೆ ಮೊಬೈಲ್ ನೆನಪಾಗೋದು ಕಡಿಮೆ. ನೀವು ಅವರೊಂದಿಗೆ ಆಟವಾಡಿ.
ಹೀಗೆ ಒಂದಷ್ಟು ಟಿಪ್ಸ್ ಗಳನ್ನು ಫಾಲೋ ಮಾಡೋದ್ರಿಂದ ಈಸಿಯಾಗಿ ಮಕ್ಕಳನ್ನು ಮೊಬೈಲ್ ಇಂದ ಹೊರಗೆ ತರಬಹುದು.