ವಿಶ್ವದ ಶ್ರೀಮಂತ ಪಟ್ಟವನ್ನು ಎಲಾನ್ ಮಸ್ಕ್ ಕೈಯಿಂದ ಕಸಿದುಕೊಂಡ ವ್ಯಕ್ತಿ, ನಿನ್ನೆ ನಡೆದಿತ್ತು ಬಹು ದೊಡ್ಡ ಹಗ್ಗ ಜಗ್ಗಾಟ !

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಷ್ಯ. ನಂಬರ್ ಒನ್ ಶ್ರೀಮಂತ ಮತ್ತು ಟ್ವಿಟ್ಟರ್ ನ ಹೊಸ ಓನರ್ ಆದ ಎಲಾನ್ ಮಸ್ಕ್ ನನ್ನೇ ಒಬ್ಬರು ಇತ್ತೀಚಿಗೆ ಓವರ್ ಟೇಕ್ ಮಾಡಿ ಶ್ರೀಮಂತರಾಗಿದ್ದರು ಎನ್ನುವುದು ನಿಮಗೆ ಗೊತ್ತೇ ?ಯಸ್, ಮತ್ತೊಬ್ಬ ಬಿಲಿಯನೇರ್ ಎಲಾನ್ ಮಸ್ಕಗೆ ಮಸ್ತಾಗಿ ಠಕ್ಕರ್ ಕೊಡುತ್ತಿದ್ದಾರೆ. ಕಳೆದ ಹದಿನಾಲ್ಕು ತಿಂಗಳ ಹಿಂದೆ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತ ಅನ್ನಿಸಿಕೊಂಡ ಟೆಸ್ಲಾ ಮುಖ್ಯಸ್ಥರ ತಲೆಯಿಂದ ನಿನ್ನೆ ಒಂದಷ್ಟು ಹೊತ್ತು ಕಿರೀಟ ಜಾರಿತ್ತು. ಬುಧವಾರ ಎಲಾನ್ ಮಸ್ಕ್ ತಮ್ಮ ಕಿರೀಟವನ್ನು ಕಳೆದುಕೊಂಡಿದ್ದರು. ಆದರೆ ಅದಕ್ಕೆ ಜೆಫ್ ಬಿಜೋಸ್ ನನ್ನ ದೂರುವ ಅಗತ್ಯ ಇಲ್ಲ. ಕಾರಣ, ಮಸ್ಕ್ ಅವರ ಕೈಯಿಂದ ಆ ಕಿರೀಟ ಕಸಿದುಕೊಂಡವರು ಬೇರೆಯದೇ ವ್ಯಕ್ತಿ !!

ಸೆಪ್ಟೆಂಬರ್ 27, 2021 ರಂದು, ಎಲೋನ್ ಮಸ್ಕ್ ಅವರು ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಮೊದಲ ಬಾರಿಗೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹಿಂದಿಕ್ಕಿದರು. “ನಾನು ಬೆಳ್ಳಿಯ ಪದಕದೊಂದಿಗೆ ಜೆಫ್ರಿ ಬಿ. ಅವರಿಗೆ ‘2’ ಅಂಕಿಗಳ ದೈತ್ಯ ಪ್ರತಿಮೆಯನ್ನು ಕಳುಹಿಸುತ್ತಿದ್ದೇನೆ” ಎಂದು ಟೆಸ್ಲಾ ಮುಖ್ಯಸ್ಥರು ಆ ದಿನ ಫೋರ್ಬ್ಸ್‌ಗೆ ಇಮೇಲ್ ಮಾಡಿ ತಮಾಷೆ ಮಾಡಿದ್ದರು. ಹದಿನಾಲ್ಕು ತಿಂಗಳ ನಂತರ, ನಿನ್ನೆ ಬುಧವಾರದಂದು ಮಸ್ಕ್ ಆ ರನ್ನರ್-ಅಪ್ ಟ್ರೋಫಿಯ ಸ್ಥಾನಕ್ಕೆ ಇಳಿಯಬೇಕಾಯ್ತು. ಅವರನ್ನು ಹಿಂದಿಕ್ಕಿದ್ದು ಮಾತ್ರ ಬಿಜೋಸ್ ಅಲ್ಲ, ಬದಲಿಗೆ LVMH ನ ಬರ್ನಾರ್ಡ್ ಅರ್ನಾಲ್ಟ್ !!

ಬುಧವಾರ ಬೆಳಗ್ಗೆ ಸ್ವಲ್ಪ ಸಮಯ ಫ್ರೆಂಚ್ ಐಷಾರಾಮಿ ಸರಕುಗಳ ಸಮೂಹ LVMH ನ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ನಂಬರ್ ಒನ್ ಶ್ರೀ. ಮಂತ ವ್ಯಕ್ತಿ ಎನಿಸಿಕೊಂಡರು. ಅರ್ನಾಲ್ಟ್ $ 185.4 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಶ್ರೇಯಾಂಕದಲ್ಲಿ ಸ್ಥಾನ ಪಡೆದರು. ಮಸ್ಕ್ $ 185.3 ಶತಕೋಟಿ ಮೌಲ್ಯವನ್ನು ಹೊಂದಿ ಎರಡನೆಯ ಸ್ಥಾನಕ್ಕೆ ಕುಸಿದರು ಮತ್ತು ವಿಶ್ವದ 3 ನೇ ಶ್ರೀಮಂತ ಬೆಜೋಸ್‌ ಎನಿಸಿಕೊಂಡರು.

ಆದರೆ ಎಲಾನ್ ಮಸ್ಕ್ ಬೆಳಗ್ಗೆ ಕಳಕೊಂಡ ಪಟ್ಟವನ್ನು ಮತ್ತೆ ಮಧ್ಯಾಹ್ನ ಮರಳಿ ಪಡೆದರು. ಈಗ ಈ ಇಬ್ಬರು ಉದ್ಯಮಿಗಳು ಹೆಚ್ಚು ಕಮ್ಮಿ ಒಂದೇ ಅದೃಷ್ಟ ಹೊಂದಿದ್ದು ಬಹುತೇಕ ಇಬ್ಬರೂ ಸಮಾನ ಶ್ರೀಮಂತರು. ಕೇವಲ $ 200 ಮಿಲಿಯನ್‌ ಮಾತ್ರ ಅವರಿಬ್ಬರಲ್ಲಿ ವ್ಯತ್ಯಾಸ. ವಿಶ್ವದ ಶ್ರೀಮಂತರ ಫೋರ್ಬ್ಸ್‌ನ ಶ್ರೇಯಾಂಕದಲ್ಲಿ ತೂಗುಯ್ಯಾಲೆಯ ಏರಿಳಿತ ಮುಂದುವರೆದರೆ ಏನೂ ಆಶ್ಚರ್ಯವಿಲ್ಲ.

ಅರ್ನಾಲ್ಟ್ ಬುಧವಾರ ಬೆಳಿಗ್ಗೆ ತನ್ನ ಸಂಪತ್ತಿಗೆ ಕೆಲವು ನೂರು ಮಿಲಿಯನ್ ಡಾಲರ್‌ಗಳನ್ನು ಸೇರಸಿ ಕೆಲ ಗಂಟೆಗಳ ಕಾಲ ನಂಬರ್ ಒನ್ ಶ್ರೀಮಂತ ಎನ್ನಿಸಿಕೊಂಡರು.
ಮಸ್ಕ್ ಟೆಸ್ಲಾ ಸ್ಟಾಕ್ ಭಯಾನಕ ಪ್ರದರ್ಶನ ನೀಡಿದ್ದು, ಟೆಸ್ಲಾ ಷೇರುಗಳು ವರ್ಷಕ್ಕೆ ಸುಮಾರು 50% ನಷ್ಟು ಕಡಿಮೆಯಾಗಿದೆ. ಮಸ್ಕ್ ನ ಮೌಲ್ಯ ಈಗ ನವೆಂಬರ್ 2021 ರಲ್ಲಿ ಅವರ ಗರಿಷ್ಠ ಮಟ್ಟಕ್ಕಿಂತ 43% ಕಡಿಮೆ ಆಗಿದೆ. ಅಲ್ಲದೆ, ಮಸ್ಕ್ ಅವರು ಟ್ವಿಟ್ಟರ್ ಖಾರೀದಿಸಿದ್ದು ಅದಕ್ಕೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದಾರೆ. ಅಲ್ಲದೆ ಟ್ವಿಟ್ಟರ್ ನಲ್ಲಿ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಟ್ವಿಟ್ಟರ್ ನ ಜಾಹೀರಾತುದಾರರ ಕೋಪಕ್ಕೆ ಕಾರಣ ಆಗಿ ಅವರು ಜಾಹೀರಾತು ಹಿಂಪಡೆದಿದ್ದರು. ಇದೆಲ್ಲ ಕಾರಣಕ್ಕೆ ಎಲಾನ್ ಮಸ್ಕ ನ ಸಂಪತ್ತು ಕ್ಷೀಣಿಸಿತ್ತು. ಆದರೆ, ಈ ಕ್ಷಣಕ್ಕೆ ಮಸ್ಕ್ ಅವರೇ ವಿಶ್ವದ ನಂಬರ್ ಒನ್ ಶ್ರೀಮಂತ !!!

Leave A Reply

Your email address will not be published.