ನಿಮ್ಮ ಹೆಸರನ್ನು ಆಧಾರ್ ಕಾರ್ಡ್‌ನಲ್ಲಿ ಇಷ್ಟು ಬಾರಿ ಬದಲಾವಣೆ ಮಾಡಬಹುದು
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್ 12 ಅಂಕಿಯ ಗುರುತಿನ ಸಂಖ್ಯೆಯಾಗಿದ್ದು, ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿದೆ. ಆಧಾರ್ ಕಾರ್ಡ್‌ನಲ್ಲಿರುವ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಜನರು ಹೆಸರು, ಮೊಬೈಲ್ ಸಂಖ್ಯೆ, ವಿಳಾಸಗಳಂತಹ ಮಾಹಿತಿ ತಪ್ಪಾಗಿದ್ದರೆ, ಸರಿ ಮಾಡಿಕೊಳ್ಳಲು ಅವಕಾಶ ಇದೆ. ಹಾಗಂತ ನಮಗೆ ಇಷ್ಟ ಬಂದ ಹಾಗೆ ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ, ಇದಕ್ಕೂ ಇತಿ-ಮಿತಿಗಳಿವೆ. ಹಾಗಾದರೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಎಷ್ಟು ಸಲ ಸಾಧ್ಯ? ಎಂಬ ಕುತೂಹಲ ಮಾಹಿತಿಯನ್ನು ನಾವಿಂದು ತಿಳಿಸಿಕೊಡುತ್ತೇವೆ.
ಆಧಾರ್ ನ ಆನ್‌ಲೈನ್ ಸೇವೆಗಳನ್ನು ಪ್ರವೇಶಿಸಬೇಕಾದರೆ ನೋಂದಾಯಿತ ಮೊಬೈಲ್ ಸಂಖ್ಯೆಯ ಅಗತ್ಯವಿದೆ. ಆನ್‌ಲೈನ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲಾಗುವುದಿಲ್ಲ. ಒಂದು ವೇಳೆ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬೇಕಾದರೆ, ನೀವು ಹತ್ತಿರದ ಆಧಾರ್ ಸೇವಾ ಕೇಂದ್ರ (ASK) ಅಥವಾ ಆಧಾರ್ ನೋಂದಣಿ ನವೀಕರಣ ಕೇಂದ್ರಕ್ಕೆ ಭೇಟಿ ನೀಡಬೇಕು.
UIDAI ಕಚೇರಿಯ ಮೆಮೊ ಪ್ರಕಾರ ಆಧಾರ್ ಕಾರ್ಡ್ ಹೊಂದಿರುವವರು ಈಗ ಎರಡು ಬಾರಿ ಮಾತ್ರ ಆಧಾರ್ ಕಾರ್ಡ್‌ನಲ್ಲಿ ತನ್ನ ಹೆಸರನ್ನು ಬದಲಾಯಿಸಲು ಅವಕಾಶವಿದೆ. ಹುಟ್ಟಿದ ದಿನಾಂಕ (DOB) ಅಪ್‌ಡೇಟ್ ಮಾಡಲು
ನಿಮ್ಮ ಆಧಾರ್‌ನಲ್ಲಿ ಒಮ್ಮೆ ಮಾತ್ರ ನವೀಕರಿಸಬಹುದು. UIDAI ಪ್ರಕಾರ, ‘ಮಿತಿಗಿಂತ ಹೆಚ್ಚಿನ ಪ್ರಕರಣಗಳನ್ನು ವಿನಾಯಿತಿ ಪ್ರಕರಣವೆಂದು ಪರಿಗಣಿಸಲಾಗುತ್ತದೆ.
ಅಂತಹ ಸಂದರ್ಭಗಳಲ್ಲಿ, ನಿವಾಸಿಯು ಆಧಾರ್ ಕೇಂದ್ರದಲ್ಲಿ ನವೀಕರಣ ವಿನಂತಿಯನ್ನು ಹಾಕಬಹುದು ಮತ್ತು ನಂತರ ವಿನಾಯಿತಿಯ ಅಡಿಯಲ್ಲಿ ನವೀಕರಣದ ಅನುಮೋದನೆಗಾಗಿ UIDAI ನ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದು. ಅಧಿಕೃತ ಅಧಿಕಾರಿಗಳು ಸರಿಯಾದ ಪರಿಶೀಲನೆಯ ನಂತರ ವಿನಂತಿಯನ್ನು ಅನುಮೋದಿಸಲಾಗುತ್ತದೆ/ ತಿರಸ್ಕರಿಸಲಾಗುತ್ತದೆ. ನಿಮ್ಮ ಹೆಸರನ್ನು ಹೊಂದಿರುವ ಮಾನ್ಯವಾದ ಜನ್ಮ ದಿನಾಂಕ ಪುರಾವೆಯೊಂದಿಗೆ ನಿಮ್ಮ ಆಧಾರ್‌ನಲ್ಲಿ ನೀವು ಜನ್ಮ ದಿನಾಂಕವನ್ನು ನವೀಕರಿಸಬಹುದು.
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ದುರ್ಬಳಕೆ ಆಗದಂತೆ ತಡೆಯಲು ಕೆಲವೊಂದು ಕ್ರಮ ಅನುಸರಿಸುವುದು ಸೂಕ್ತ. ಹಾಗಾಗಿ ಮಾಸ್ಕ್ಡ್ ಆಧಾರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಮೊದಲು ಅಧಿಕೃತ UIDAI ವೆಬ್‌ಸೈಟ್‌ಗೆ myaadhaar.uidai.gov.in ಹೋಗಿ. ಟ್ಯಾಬ್‌ನಲ್ಲಿ ನನ್ನ ಆಧಾರ್’ ಆಯ್ಕೆಯನ್ನು ಕಾಣಬಹುದು. ಅಲ್ಲಿ ಡ್ರಾಪ್-ಡೌನ್ ಮೆನುವಿನಿಂದ, ‘ಡೌನ್‌ಲೋಡ್ ಆಧಾರ್’ ಆಯ್ಕೆಯನ್ನು ಆರಿಸಿ. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿ ಅಥವಾ ದಾಖಲಾತಿ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಅದರ ನಂತರ ನೀವು ಕೇವಲ ‘ಮಾಸ್ಕ್ಡ್ ಆಧಾರ್’ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಮುಂದಿನ ಹಂತದಲ್ಲಿ, ನೀವು ಕ್ಯಾಪ್ಚಾ ಕೋಡ್ ಅನ್ನು ಪರಿಶೀಲಿಸಬೇಕಾಗುತ್ತದೆ. ಬಳಕೆದಾರನು ನಂತರ ಡ್ರಾಪ್-ಡೌನ್ ಮೆನುವಿನಿಂದ ‘ಸೆಂಡ್ OTP’ ಆಯ್ಕೆಯನ್ನು ಒತ್ತಿರಿ. ನಿಮ್ಮ ನೋಂದಾಯಿತ ಫೋನ್‌ನಿಂದ OTP ಅನ್ನು ನಮೂದಿಸಿದ ನಂತರ, ನೀವು ಮಾಸ್ಕ್ಡ್ ಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು.