ಪುತ್ತೂರು | ಭಿನ್ನ ಕೋಮಿನ ವಿದ್ಯಾರ್ಥಿಗಳ ಜತೆ ಮಸ್ತ್ ಮಸ್ತ್ ಬರ್ತ್ ಡೇ ಪಾರ್ಟಿ ! ಸಹಪಾಠಿಗಳ ವಿರುದ್ಧವೇ ವಿದ್ಯಾರ್ಥಿನಿಯರು ಠಾಣೆ ಮೆಟ್ಟಲೇರಿದ್ದು ಯಾಕೆ ಗೊತ್ತೇ ?!

ಪುತ್ತೂರು: ನಗರದ ಕಾಲೇಜೊಂದರ ಭಿನ್ನ ಕೋಮಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿ ರೈಲು ನಿಲ್ದಾಣದ ಬಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋ ಒಂದು ವೈರಲ್ ಆಗಿದ್ದು, ಈ ಬಗ್ಗೆ ಹಿಂದೂ ಸಂಘಟನೆಗಳು ಲವ್ ಜಿಹಾದ್ ಎಂದು ಆರೋಪಿಸಿದಲ್ಲದೇ, ಆಕ್ರೋಶ ಹೊರಹಾಕಿದ ಬೆನ್ನಲ್ಲೇ ವಿದ್ಯಾರ್ಥಿನಿಯರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಖಾಸಗಿ ನರ್ಸಿಂಗ್ ಕಾಲೇಜಿಗೆ ಸೇರಿದ ವಿದ್ಯಾರ್ಥಿನಿಯರು ಸಹಪಾಠಿಗಳಾದ ಅನ್ಯ ಕೋಮಿನ ವಿದ್ಯಾರ್ಥಿಗಳೊಂದಿಗೆ ಬರ್ತ್ ಡೇ ಪಾರ್ಟಿ ನಡೆಸಿದಲ್ಲದೇ, ಪರಸ್ಪರ ಶುಭಕೋರುವರು ಫೋಟೋ ಗಳನ್ನು ಕ್ಲಿಕಿಸಿದ್ದರು, ವೀಡಿಯೋ ಮಾಡಿದ್ದರು ಎನ್ನಲಾಗಿದೆ. ಆನಂತರ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿದ್ದರು. ಜೊತೆಗೆ ಸಮೋಸ ತಿಂದಿದ್ದರು. ‘ ಸಮೋಸದ ಹಿಂದೆ ಇದೆ ದೊಡ್ಡ ಮೋಸ. ಮೊದಲು ಪಾರ್ಟಿಯ ನೆಪ, ನಂತರ ಸೆಲ್ಫಿ, ಗಿಫ್ಟ್, ಸಮೋಸ – ಇವೆಲ್ಲದರ ಬೆನ್ನಿಗೇ ಇದೆ ಲವ್ ಜಿಹಾದ್ ನ ಮೋಸ ‘ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಘಟನೆಯ ವಿಡಿಯೋ ಹಾಗೂ ಫೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರಿಣಾಮ ವಿದ್ಯಾರ್ಥಿನಿಯರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿದ್ದವು. ಸ್ವತಃ ಅನ್ಯಕೋಮಿನ ಸಹಪಾಠಿಗಳೇ ವೈರಲ್ ನಡೆಸಿದ್ದರು ಎಂಬ ವಿಚಾರ ವಿದ್ಯಾರ್ಥಿನಿಯರ ಗಮನಕ್ಕೆ ಬಂದಂತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ವಿದ್ಯಾರ್ಥಿನಿಯರು ಠಾಣೆಯ ಮೆಟ್ಟಿಲೇರಿದ್ದು, ವಿಡಿಯೋ ವೈರಲ್ ನಡೆಸಿದ ಸಹಪಾಠಿಗಳ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಿಂದೂ ವಿದ್ಯಾರ್ಥಿನಿಯರ ಮಾನಹಾನಿ ಮಾಡುವ ಉದ್ದೇಶದಿಂದ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್ಚಿನ ಮಾಹಿತಿಗೆ ಕಾಯಲಾಗುತ್ತಿದೆ.

Leave A Reply

Your email address will not be published.