ಮಹಿಳೆಯ ಸ್ತನ, ಕೈ, ಕಾಲು ಕತ್ತರಿಸಿ ಭೀಕರ ಕೊಲೆ | ಹಾಡಗಲೇ ನಡೆಯಿತು ಘನಘೋರ ರಕ್ತಪಾತ

Share the Article

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಕೆಲವೊಮ್ಮೆ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಹೆಣ್ಣನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ಬಿಹಾರದ (Bihar Crime news) ಭಾಗಲ್ಪುರ ಜಿಲ್ಲೆಯ ಪಿರಪೈಂಟಿ ಮಾರುಕಟ್ಟೆಯಲ್ಲಿ ಶನಿವಾರ ವಿಕೃತವಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಸಾರ್ವಜನಿಕ ಮಾರುಕಟ್ಟೆ ಮಹಿಳೆಯೋರ್ವಳ ಸ್ತನ, ಕೈ, ಕಾಲು ಮತ್ತು ಕಿವಿಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹತ್ಯೆಗೈಯಲಾಗಿದ್ದು, ಆರೋಪಿಯನ್ನು ಮೊಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದೆ . ಈ ಬಳಿಕ, ಮಡಿಕೆಯೊಳಗೆ ಹರಿತವಾದ ಆಯುಧವನ್ನು ಅಡಗಿಸಿಟ್ಟುಕೊಂಡು ಸಾರ್ವಜನಿಕ ಮಾರುಕಟ್ಟೆಯಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯನ್ನು ವಿಕೃತವಾಗಿ ವಿರೂಪಗೊಳಿಸಿದ ನಂತರ ಆರೋಪಿ ಶಕೀಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಅಶೋಕ್ ಯಾದವ್ ಮತ್ತು ಅವರ ಪತ್ನಿ ಛೋಟಿ ಹತ್ತಿರದ ಡಿಲೋರಿ ಎಂಬ ಸ್ಥಳದ ನಿವಾಸಿಗಳು ಎಂದು ತಿಳಿದುಬಂದಿದೆ. ಹಾಡಹಗಲೇ ಮಹಿಳೆಯ ಮೇಲೆ ವಿಕೃತವಾಗಿ ದಾಳಿ ನಡೆಸಿದನ್ನು ಕಂಡು ಅಲ್ಲಿದ್ದ ಸ್ಥಳೀಯರು (Deadly Murder) ಬೆಚ್ಚಿಬಿದ್ದಿದ್ದಾರೆ.

ಇದರ ಜೊತೆಗೆ ಮಹಿಳೆ ಖಾಯಂ ಮಾರುಕಟ್ಟೆಗೆ ಭೇಟಿ ನೀಡುತ್ತಿದ್ದ ಹಿನ್ನೆಲೆ ಆಕೆಯನ್ನು ಗುರುತಿಸಿದ ಸಾರ್ವಜನಿಕರು ಆಕೆಯ ಪತಿ ಅಶೋಕ್ ಯಾದವ್‌ಗೆ ಮಾಹಿತಿ ನೀಡಿದ್ದಾರೆ.

ಈ ಭೀಕರ ಘಟನೆಯ ನಂತರ ಗಾಯಗೊಂಡ ಮಹಿಳೆಯನ್ನು ಮಾಯಗಂಜ್‌ನ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದ್ದು, ಆದರೆ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಭೀಕರ ದಾಳಿಯ ಮಾಹಿತಿ ತಿಳಿದ ಪೊಲೀಸರು ತಕ್ಷಣ ದಾಳಿ ನಡೆದ ಸ್ಥಳಕ್ಕೆ ದೌಡಾಯಿಸಿದ್ದು, ಇದೇ ವೇಳೆ ಮಹಿಳೆ ಗಾಯಗೊಂಡ ಸ್ಥಿತಿಯಲ್ಲಿಯೇ ಪೊಲೀಸರಿಗೆ ದಾಳಿಕೋರನ ಹೆಸರನ್ನು ಹೇಳಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದು, ಆದರೆ ಮುಖ್ಯ ಆರೋಪಿ ಶಕೀಲ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

Leave A Reply