ಪುರಾಣಗಳಲ್ಲಿ ಸ್ಥಾನ ಪಡೆದುಕೊಂಡಿರುವ ಪವಿತ್ರವಾದ ಪಾರಿಜಾತದಲ್ಲಿದೆ ಕ್ಯಾನ್ಸರ್ ನಿವಾರಕ ಶಕ್ತಿ!

ಪಾರಿಜಾತ ಏಷ್ಯಾದ ಎಗ್ಗಿಲ್ಲದ ಚೆಲುವೆ. ಹೌದು, ಪುರಾಣ ಪುಣ್ಯ ಕತೆಗಳಲ್ಲಿ ಪಾರಿಜಾತ ಹಲವೆಡೆ ಸ್ಥಾನ ಪಡೆದುಕೊಂಡಿದೆ. ಸಮುದ್ರ ಮಂಥನ ಸಮಯದಲ್ಲಿ ಉದಯಿಸಿದ ಐದು ವೃಕ್ಷಗಳಲ್ಲೊಂದು ಪಾರಿಜಾತ. ಹೀಗೆ ಪವಿತ್ರವೆಂದು ಭಾವಿಸಿದ ಪಾರಿಜಾತ ಹೂವು ಮತ್ತು ಎಲೆಗಳಿಂದ ಹಲವಾರು ಆರೋಗ್ಯ ಲಾಭಗಳಿವೆ.

 

ಹೌದು. ಇಂತಹ ಅದ್ಭುತ ಶಕ್ತಿಯುಳ್ಳ ಈ ಹೂವಿನಿಂದ ಚಿಕಿತ್ಸೆಯೇ ಇಲ್ಲದ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಇದೆ. ಹೌದು. ಇದು ಬಹಳ ಅಪಾಯಕಾರಿ ರೋಗವಾದ ಕ್ಯಾನ್ಸರ್ ನಿಂದ ಮುಕ್ತಿ ದೊರಕಿಸಿ ಕೊಡುತ್ತದೆ. ಸಂಶೋಧಕರು, ಪಾರಿಜಾತದ ಎಲೆಗಳಲ್ಲಿ ಲಿವರ್‌ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ಗುಣಲಕ್ಷಣಗಳನ್ನು ಪತ್ತೆ ಮಾಡಿದ್ದಾರೆ.

ಸಂಶೋಧಕರು ಪ್ರಯೋಗಾಲಯದಲ್ಲಿ 5 ವಂಶವಾಹಿಗಳನ್ನು ಸಂಶೋಧಿಸಿದ್ದು, ಕ್ಯಾನ್ಸರ್ ಬೆಳವಣಿಗೆಗೆ ಇದೇ ಕಾರಣ ಎಂದು ಹೇಳಿದ್ದಾರೆ. ರಾತ್ರಿರಾಣಿ ಅಥವಾ ಪಾರಿಜಾತದ ಎಲೆಗಳ ಕಷಾಯವನ್ನು ಬಳಸಿ ಕ್ಯಾನ್ಸರ್‌ ಬೆಳವಣಿಗೆಯನ್ನು ನಿಲ್ಲಿಸಬಹುದು. ಪಾರಿಜಾತದ ಎಲೆಗಳ ಕಷಾಯವನ್ನು ಬಳಸುವುದರಿಂದ 5 ವಂಶವಾಹಿಗಳು ನಿಷ್ಕ್ರಿಯವಾಗುತ್ತವೆ. ಪಾರಿಜಾತದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಸಯಾಟಿಕಾ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಎಲೆ, ಹೂವು, ತೊಗಟೆಯನ್ನು 200 ಮಿಲಿ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿದರೆ ಸಂಧಿವಾತ ಸಮಸ್ಯೆ ದೂರವಾಗುತ್ತದೆ. ಒಂದು ಲೋಟ ನೀರು ಹಾಕಿದರೆ ಅದು ಕಾಲು ಲೋಟಕ್ಕೆ ಬರುವವರೆಗೆ ಕುದಿಸಬೇಕು. ಬಳಿಕ ಸೇವಿಸಿದರೆ ಎಲ್ಲ ಸಮಸ್ಯೆಯೂ ನಿವಾರಣೆ ಆಗುತ್ತದೆ.

ಪಾರಿಜಾತದ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ನೆಗಡಿ, ಕೆಮ್ಮು ನಿವಾರಣೆಯಾಗುತ್ತದೆ. ಇದರ ಎಲೆಗಳ ರಸವು ಜ್ವರದ ವಿರುದ್ಧ ಕೂಡ ಪರಿಣಾಮಕಾರಿಯಾಗಿದೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೇ ರೀತಿಯ ಒತ್ತಡವನ್ನು ಅನುಭವಿಸುತ್ತಿದ್ದರೆ, ಪಾರಿಜಾತದ ಎಲೆಗಳ ಕಷಾಯ ಕುಡಿಯಬೇಕು. ಈ ಎಲೆಗಳು ಒತ್ತಡ ಮತ್ತು ಆತಂಕವನ್ನು ತೊಡೆದು ಹಾಕಲು ಸಹಾಯ ಮಾಡುತ್ತವೆ.

ಅಷ್ಟೇ ಅಲ್ಲದೆ, ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ ದೇಹದ ಎಲ್ಲೇ ಉರಿ, ಗಾಯ, ಊತಗಳಿದ್ದರೂ ಇದರಿಂದ ತಯಾರಿಸಿದ ಎಣ್ಣೆ ಬಳಸುವುದರಿಂದ ಉರಿ ತಗ್ಗುತ್ತದೆ. ಇದರಲ್ಲಿರುವ ಬೆಂಜೋಯಿಕ್ ಆ್ಯಸಿಡ್ ಹಾಗೂ ಕೆರೋಟಿನ್ ಪಾರಿಜಾತದ ಎಲೆಗೆ ಈ ಗುಣ ನೀಡಿದೆ. ಹಾಗೂ ಆಯುರ್ವೇದ ಔಷಧಿಗಳಲ್ಲಿ ಪಾರಿಜಾತದ ಎಲೆಗಳನ್ನು ಮಲೇರಿಯಾ ಹಾಗೂ ಡೆಂಘೆ ಜ್ವರಗಳ ಚಿಕಿತ್ಸೆಗೆ ಔಷಧವಾಗಿ ಬಳಸಲಾಗುತ್ತದೆ. ಜ್ವರದ ಚಿಕಿತ್ಸೆಗೆ ಇದರ ತೊಗಟೆಯೂ ಉಪಯೋಗವಾಗುತ್ತದೆ. ಪಾರಿಜಾತದ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಅಂಗಾಲಿಗೆ ತಿಕ್ಕುವುದರಿಂದ ಜ್ವರ ಕಡಿಮೆಯಾಗುತ್ತದೆ.

ಮಂಡಿನೋವಿದ್ದಾಗ ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದರಿಂದ ಉಪಶಮನ ದೊರೆಯುತ್ತದೆ. ಪಾರಿಜಾತದ ಎಲೆಗಳಲ್ಲಿರುವ ಮಿನರಲ್‌ಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಪಾರಿಜಾತದ ಟೀ(ಕಷಾಯ) ದಿನಕ್ಕೊಮ್ಮೆ ಸೇವಿಸಿದರೆ ಸಾಕು. ದೇಹದಲ್ಲಿ ಮೂಳೆ ಸವೆತ ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿ ಪಾರಿಜಾತ ಕಷಾಯಕ್ಕಿದೆ. ಏಕೆಂದರೆ ಪಾರಿಜಾತ ಎಲೆಯ ಕಷಾಯದಲ್ಲಿ ಕಾರ್ಟಿಲೆಜ್ ಎಂಬ ಅಂಶವಿದ್ದು, ಮೂಳೆ ಸವೆದು ಹೋದಾಗ ಮತ್ತೆ ಮೂಳೆಗಳಿಗೆ ಕಾರ್ಟಿಲೆಜ್ ಅಂಶವನ್ನು ಪಾರಿಜಾತ ಕಷಾಯ ನೀಡುತ್ತದೆ.

Leave A Reply

Your email address will not be published.