Realme Smartphone: ಕೇವಲ 9 ನಿಮಿಷಗಳಲ್ಲಿ ಫುಲ್‌ ಚಾರ್ಜ್‌ ಆಗೋ ಫೋನ್‌ ರಿಯಲ್​ಮಿಯಿಂದ ಬಿಡುಗಡೆ !

ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿಯ ಜೊತೆಗೆ ಬಂಪರ್ ಆಫರ್ ಕೂಡ ದೊರೆಯಲಿದೆ. ನೀವೇನಾದರೂ ಹೊಸ ಸ್ಮಾರ್ಟ್ ಫೋನ್ ಕೊಂಡು ಕೊಳ್ಳುವ ಯೋಜನೆಯಲ್ಲಿದ್ದರೆ, ರಿಯಲ್​ಮಿ ಕಂಪನಿ ಗುಡ್​ ನ್ಯೂಸ್ ನೀಡುತ್ತಿದೆ. ಹೌದು!!!..ಇದೀಗ ರಿಯಲ್​ಮಿ ಕಂಪನಿಯಿಂದ ಹೊಸ ಸ್ಮಾರ್ಟ್​ಫೋನ್​ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ರಿಯಲ್​ಮಿ ಕಂಪನಿಯಿಂದ ರಿಯಲ್​ಮಿ ಜಿಟಿ ನಿಯೋ 5 ಎಂಬ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನಲಾಗುತ್ತಿದೆ.

ಹೊಸ ಸ್ಮಾರ್ಟ್​ಫೋನ್ ಖರೀದಿ ಮಾಡುವ ಯೋಚನೆಯಲ್ಲಿರುವವರಿಗೆ ರಿಯಲ್​ಮಿ ಕಂಪನಿ ಗುಡ್​ ನ್ಯೂಸ್ ನೀಡುತ್ತಿದೆ. ಇದೀಗ ರಿಯಲ್​ಮಿ ಕಂಪನಿಯಿಂದ ಹೊಸ ಸ್ಮಾರ್ಟ್​ಫೋನ್​ ಬಿಡುಗಡೆಯಾಗುವ ಸುದ್ದಿಯಾಗಿದೆ. ರಿಯಲ್​ಮಿ ಕಂಪನಿಯಿಂದ ರಿಯಲ್​ಮಿ ಜಿಟಿ ನಿಯೋ 5 ಎಂಬ ಮುಂಬರುವ ಸ್ಮಾರ್ಟ್​ಫೋನ್ ಆಗಿದೆ.

ರಿಯಲ್​ಮಿ ಜಿಟಿ ನಿಯೋ 3 ಸ್ಮಾರ್ಟ್‌ಫೋನ್ ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ಈ ಸರಣಿಯಲ್ಲಿ ರಿಯಲ್​ಮಿ ಜಿಟಿ ನಿಯೋ 5 ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಈ ಹಿಂದೆ ನಿಯೋ ಸೀರಿಸ್​ನ ಅಡಿಯಲ್ಲಿ ಬಿಡುಗಡೆಯಾದ ಎರಡೂ ಫೋನ್‌ಗಳು 150 ವ್ಯಾಟ್ ಚಾರ್ಜಿಂಗ್ ವೇಗವನ್ನು ಹೊಂದಿವೆ. 5 ನಿಮಿಷಗಳಲ್ಲಿ 50 ಶೇಕಡಾ ಬ್ಯಾಟರಿ ಚಾರ್ಜ್ ಆಗುತ್ತದೆ ಮತ್ತು 15 ನಿಮಿಷಗಳಲ್ಲಿ 100 ಶೇಕಡಾದಷ್ಟು ಬ್ಯಾಟರಿ ತುಂಬುತ್ತದೆ ಎಂದು ಕಂಪನಿ ಮಾಹಿತಿ ನೀಡಿದ್ದು, ಮುಂಬರುವ ನಿಯೋ 5 ಸ್ಮಾರ್ಟ್​​ಫೋನ್ ಇದಕ್ಕಿಂತ ಹೆಚ್ಚಿನ ಫೀಚರ್ಸ್​ಗಳನ್ನು ಹೊಂದಿರಲಿವೆ ಎನ್ನಲಾಗುತ್ತಿದೆ.

ಕೆಲ ವರದಿಗಳ ಪ್ರಕಾರ , ರಿಯಲ್​ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ 2023 ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆಯಲ್ಲಿ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಈ ಸರಣಿಯಲ್ಲಿ ಬರುವ ಸ್ಮಾರ್ಟ್‌ಫೋನ್‌ಗಳು ಸೋನಿ IMX890 ಸೆನ್ಸಾರ್​ ಮತ್ತು OIS ಬೆಂಬಲದ ವಿಶೇಷತೆಯನ್ನು ಹೊಂದಿರಲಿದೆ. ಇದರ ಜೊತೆಗೆ , ಎರಡು ಮಾಡೆಲ್‌ಗಳು ಈ ಸೀರಿಸ್​ನ ಅಡಿಯಲ್ಲಿ ಬಿಡುಗಡೆಯಾಗಲೂ ಅಣಿಯಾಗಿದೆ.
5000 mAh ಬ್ಯಾಟರಿ ಫೋನ್ 150 ವ್ಯಾಟ್ ಚಾರ್ಜಿಂಗ್ ವೇಗವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಇದಲ್ಲದೆ , 4600 mAh ಬ್ಯಾಟರಿ ಫೋನ್ 240 ವ್ಯಾಟ್ ಚಾರ್ಜಿಂಗ್ ವೇಗವನ್ನು ಒಳಗೊಂಡಿರಬಹುದು.
ಇಷ್ಟೇ ಅಲ್ಲದೆ, 240 ವ್ಯಾಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಮೊದಲ ಸ್ಮಾರ್ಟ್​ಫೋನ್ ಆಗಿರಲಿದೆ.ಈ 240 ವ್ಯಾಟ್ನಷ್ಟು ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ ಸ್ಮಾರ್ಟ್ಫೋನ್ಗಳು ಕೇವಲ 9 ನಿಮಿಷಗಳಲ್ಲಿ ಚಾರ್ಜ್ ಆಗುತ್ತವೆ.


ಈ ಸ್ಮಾರ್ಟ್​ಫೋನ್​ನಲ್ಲಿ ಒಂದು 5000 mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆ ಇದ್ದು, ಮತ್ತೊಂದು 4600 mAh ಬ್ಯಾಟರಿಯನ್ನು ಒಳಗೊಂಡಿರಬಹುದು. ಅಲ್ಲದೇ, ಇವೆರಡೂ ಬೇರೆ ಬೇರೆ ಚಾರ್ಜಿಂಗ್ ವೇಗವನ್ನು ಹೊಂದಿದೆ ಎನ್ನಲಾಗಿದೆ.


ಮುಂಬರುವ ರಿಯಲ್​ಮಿ ಜಿಟಿ ನಿಯೋ 5 ಸ್ಮಾರ್ಟ್ ಫೋನ್ ಅನ್ನು ಕಂಪೆನಿ ಸೆಪ್ಟೆಂಬರ್ 8 ರಂದು ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಇದು ಅದ್ಭುತ ಬ್ಯಾಟರಿ ವೇಗವನ್ನು ಹೊಂದಿರುತ್ತದೆ ಎನ್ನಲಾಗಿದೆ. ಇದರ ಜೊತೆಗೆ ರಿಯಲ್​ಮಿ 10 ಪ್ರೋ ಪ್ಲಸ್ ಸ್ಮಾರ್ಟ್​​ಫೋನ್ ಅನ್ನು ಬಿಡುಗಡೆ ಮಾಡಲಿದ್ದು, ನಿಯೋ ಸರಣಿಯಲ್ಲಿ ಮತ್ತೊಂದು ಹೊಸ ಫೋನ್ ಅನಾವರಣಗೊಳ್ಳಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Leave A Reply

Your email address will not be published.