Mobile Dual Sim Feature: ಮೊಬೈಲ್‌ ​ಗಳಲ್ಲಿ ಡ್ಯುಯಲ್​ ಸಿಮ್​ ಫೀಚರ್ಸ್​ ಇನ್ನು ಮುಂದೆ ಇಲ್ಲ! ಯಾಕಾಗಿ?

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಇದರ ಜೊತೆಗೆ ಡ್ಯುಯಲ್ ಸಿಮ್ ಬಳಕೆ ಮಾಡುವವರ ಸಂಖ್ಯೆ ಸಹ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಕೆಲ ಟೆಲಿಕಾಂ ಕಂಪನಿಗಳ ರೀಚಾರ್ಜ್​ ಪ್ಲಾನ್​ಗಳು ಹೆಚ್ಚಾಗಿರುವುದರಿಂದ ಕೇವಲ ಒಂದೇ ಸಿಮ್ ಅನ್ನು ಬಳಸುತ್ತಿದ್ದಾರೆ. ಟೆಲಿಕಾಂ ಕಂಪನಿಗಳ ಹೊಸ ನಿಯಮಗಳಿಂದ ಡ್ಯುಯಲ್ ಸಿಮ್​ಗಳ ಬಳಕೆ ಮುಂದಿನದಿನಗಳಲ್ಲಿ ನಿಲ್ಲಲಿದೆ ಎಂಬ ಮಾಹಿತಿ ಇದೆ.

ಕೆಲವೊಂದು ತಂತ್ರಜ್ಞಾನದ ಪ್ರಗತಿಯಿಂದ ಸ್ಮಾರ್ಟ್​ಫೋನ್​ಗಳಲ್ಲಿ ಡ್ಯುಯಲ್​ ಸಿಮ್​ ಫೀಚರ್ಸ್​ ಬಂತು. ಈ ಮೂಲಕ ಒಂದು ಸ್ಮಾರ್ಟ್​​ಫೋನ್​ನಲ್ಲಿ ಎರಡು ಸಿಮ್​ಗಳನ್ನು ಬಳಕೆ ಮಾಡಬಹುದಿತ್ತು. ನಂತರ ಡ್ಯುಯಲ್​ ಸಿಮ್ ಬಳಕೆ ಟೆಲಿಕಾಂ ಕಂಪನಿಗಳ ಯುಗದಲ್ಲಿ ಒಂದು ಹೊಸ ಟ್ರೆಂಡ್ ಅನ್ನು ರೂಪಿಸಿದೆ. ಸ್ಮಾರ್ಟ್​ಫೋನ್​ಗಳಲ್ಲಿ ಡ್ಯುಯಲ್​ ಸಿಮ್​ಗಳ ಬಳಕೆ ವ್ಯಾಪಕವಾಗಿ ಬೆಳೆಯಲು ಕಾರಣ ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡಿದ್ದ ರೀಚಾರ್ಜ್​​ ಪ್ಲಾನ್​ಗಳು ಎಂದು ಹೇಳಬಹುದು. ಆದರೆ ಈಗ ಎಲ್ಲಾ ಸಿಮ್​ಗಳ ರೀಚಾರ್ಜ್​​ ಪ್ಲಾನ್​ಗಳು ಒಂದೇ ರೀತಿಯಿದೆ. ಆದ್ದರಿಂದ ಎಲ್ಲರೂ ಇತ್ತೀಚೆಗೆ ಒಂದೇ ಸಿಮ್​ಗಳನ್ನು ಬಳಕೆ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಡ್ಯುಯಲ್ ಸಿಮ್ ಅನ್ನು ಹೊಂದಿದ್ದಾರೆ. ಈ ಎರಡು ಸಿಮ್​ಗಳನ್ನು ಬಳಸುವುದೇ ಒಂದು ಟ್ರೆಂಡ್​ ಆಗಿದೆ. ಆದರೆ ಕೆಲ ವರ್ಷಗಳಿಂದ ಪ್ರತಿಯೊಂದು ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್​ ಯೋಜನೆಯನ್ನು ಒಂದೇ ರೀತಿ ಬಿಡುಗಡೆ ಮಾಡಿದೆ. ಆದ್ದರಿಂದ ಈಗ ಕೇವಲ ಒಂದೇ ಸಿಮ್​ಗಳನ್ನು ಮಾತ್ರ ಮತ್ತೆ ಬಳಸಲು ಆರಂಭಿಸಿದ್ದಾರೆ.

ಹಿಂದಿನ ಸಿಮ್​ ಬಳಕೆ ಮಾಡಬೇಕಾದರೆ ಅದು ಆ್ಯಕ್ಟಿವ್ ಆಗಿರಲು ಪದೇ ಪದೇ ರೀಚಾರ್ಜ್ ಮಾಡಬೇಕೆಂದಿರಲಿಲ್ಲ. ಒಮ್ಮೆ ರೀಚಾರ್ಜ್​ ಮಾಡಿದರೆ ಮತ್ತೆ ಯಾರಿಗೆ ಬೇಕಾದರು ಕಾಲ್ ಮಾಡಬಹುದಿತ್ತು. ಆದರೆ ಕೆಲವರ್ಷಗಳ ಹಿಂದೆ ಟೆಲಿಕಾಂ ಕಂಪನಿಗಳು ಈ ನಿಯಮವನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿದೆ. ಈ ಮೂಲಕ ಇದು ಒಂದು ಸಿಮ್​ ಕಾರ್ಡ್​ ಆ್ಯಕ್ಟಿವ್​ ಇರಬೇಕಾದರೆ ಪ್ರತೀ ತಿಂಗಳು ರೀಚಾರ್ಜ್​ ಮಾಡಬೇಕು. ಇಲ್ಲದಿದ್ದರೆ ಯಾವುದೇ ಇಂಟರ್ನೆಟ್​​, ಕಾಲ್ ಸೌಲಭ್ಯಗಳು ದೊರೆಯುವುದಿಲ್ಲ.

ಈ ಮೇಲಿನ ಕಾರಣದಿಂದ ಡ್ಯುಯಲ್ ಸಿಮ್ ಹೊಂದಿರುವವರು ಪ್ರತೀ ಸಿಮ್​ನ ರೀಚಾರ್ಜ್​ ವ್ಯಾಲಿಡಿಟಿ ಮುಗಿದ ಕೂಡಲೇ ಸಿಮ್​ಗಳಿಗೆ ಉತ್ತಮ ವ್ಯಾಲಿಡಿಟಿ ಹೊಂದಿರುವ ಡೇಟಾ, ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ಹೊಂದಿರುವ ರೀಚಾರ್ಜ್ ಅನ್ನು ಮಾಡಬೇಕು. ಒಂದು ವೇಳೆ ರೀಚಾರ್ಜ್​ ಮಾಡದಿದ್ದರೆ ಸಿಮ್​ಗೆ ಸಂಬಂಧಪಟ್ಟ ಟೆಲಿಕಾಂ ಕಂಪನಿಯಿಂದ ಕಾಲ್ ಮಾಡಿ ರೀಚಾರ್ಜ್​ ಮಾಡಬೇಕು ಇಲ್ಲವಾದರೆ ನಿಮ್ಮ ಸಿಮ್​ನ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸುತ್ತಾರೆ. ಇದರಿಂದ ಎರಡೂ ಸಿಮ್​ಗೆ ಪ್ರತ್ಯೇಕವಾಗಿ ರೀಚಾರ್ಜ್​ ಮಾಡಬೇಕಾಗಿದೆ.

ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪನಿಗಳ ರೀಚಾರ್ಜ್​ ಪ್ಲಾನ್​ಗಳು ಒಂದೇ ರೀತಿಯಾಗಿದೆ. ಅದ್ದರಿಂದ ಬಳಕೆದಾರರು ಹೆಚ್ಚಾಗಿ ಈಗ ಒಂದೇ ಸಿಮ್​ ಅನ್ನು ಬಳಸಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಈ ವರ್ಷದ ಎಪ್ರಿಲ್‌ನಲ್ಲಿ ಸುಮಾರು 70 ಲಕ್ಷ ಜನರು ಸಿಮ್ ಬಳಸುವುದನ್ನೇ ನಿಲ್ಲಿಸಿದ್ದಾರೆ. ಇವುಗಳಲ್ಲಿ ವೊಡಾಫೋನ್-ಐಡಿಯಾ ಮೊದಲ ಸ್ಥಾನದಲ್ಲಿದ್ದರೆ, ಭಾರ್ತಿ ಏರ್ಟೆಲ್ ದ್ವಿತೀಯ ಸ್ಥಾನದಲ್ಲಿದೆ.

ವರದಿ ಪ್ರಕಾರ ಟೆಲಿಕಾಂ ಕಂಪನಿಗಳು ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಪ್ರೀಪೇಯ್ಡ್​ ರೀಚಾರ್ಜ್​ ಅನ್ನು ಹೆಚ್ಚಿಸಲಿದೆ ಎಂದು ತಿಳಿಸಲಾಗಿದೆ . ರಿಚಾರ್ಜ್ ಏರಿಕೆಯಿಂದ ಮತ್ತೆ ಎರಡು ಸಿಮ್​ಗಳನ್ನು ಹೊಂದಿರುವವರಿಗೆ ಹೊರೆಯಾಗಲಿದೆ. ಕಳೆದ ನವೆಂಬರ್​ – ಡಿಸೆಂಬರ್​ನಲ್ಲಿ ಕಂಪನಿಗಳು ತನ್ನ ರೀಚಾರ್ಜ್​ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ ಈ ಸಂದರ್ಭ ಮತ್ತೆ ಮರುಕಳಿಸಲಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ 5ಜಿ ಸೇವೆ ಕೂಡ ಆರಂಭವಾಗುವುದರಿಂದ ರೀಚಾರ್ಜ್​ ಪ್ಲಾನ್​ ಹೆಚ್ಚಳವಾಗುವದು ಮಾತ್ರ ಖಚಿತ ಎನ್ನಲಾಗುತ್ತಿದೆ.

ಟೆಲಿಕಾಂ ಕಂಪನಿಗಳ ಹೊಸ ನಿಯಮಗಳಿಂದ ಮತ್ತು ರಿಚಾರ್ಜ್ ಬೆಲೆ ಏರಿಕೆ ಕಾರಣದಿಂದ ಮುಂದಿನ ದಿನಗಳಲ್ಲಿ ಡ್ಯುಯಲ್ ಸಿಮ್​ಗಳ ಬಳಕೆ ನಿಲ್ಲಲು ಕಾರಣವಾಗಿದೆ.

Leave A Reply

Your email address will not be published.