ಯಾವುದೇ ಕಾರಣಕ್ಕೂ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಬೇಡ!

ನೇತ್ರ ಎಂಬುದು ನಮ್ಮ ದೇಹದಲ್ಲಿ ಇರುವ ಪ್ರಮುಖ ಅಂಗಾಂಗಗಳಲ್ಲಿ ಒಂದು. ಅಂಧಕಾರ ಎಂಬುದು ಆವರಿಸಿದರೆ ಅದೆಷ್ಟು ನರಳಾಡ ಬೇಕು ಎಂಬುದು ವಿವರಿಸಲು ಅಸಾಧ್ಯ. ಅದ್ರಲ್ಲೂ ನೇತ್ರದಾನ ಮಾಡುವುದು ಮಹಾದಾನ ಎಂಬುದು ಎಲ್ಲರಿಗೂ ಗೊತ್ತು. ಯಾಕೆ ಇಷ್ಟೆಲ್ಲಾ ಹೇಳ್ತಾ ಇರೋದು ಅಂದ್ರೆ, ಕಣ್ಣಿನ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲೇಬಾರದು.

ಕ್ಯಾರೆಟ್ ತಿನ್ನುವುದು ಬಹಳ ಮುಖ್ಯ. ವಿಟಮಿನ್ ಎ ಕಣ್ಣಿಗೆ ತುಂಬಾ ಪೋಷಕಾಂಶವನ್ನು ನೀಡುತ್ತದೆ. ತನ್ನ ಸಣ್ಣ ವಯಸ್ಸಿನಲ್ಲಿ ಆದಷ್ಟು ಜನರು ಕಣ್ಣಿನಲ್ಲಿ ಪೊರೆ ಕಾಣಿಸಿ ಆಪರೇಷನ್ ಗಳನ್ನ ಮಾಡಿಸಿಕೊಳ್ಳುತ್ತಾರೆ. ಹೀಗಾಗಿ ಕ್ಯಾರೆಟ್ ಅನ್ನು ತಿನ್ನಿ.

ಕಣ್ಣಿನ ಹೊರಭಾಗವೂ ಕೂಡ ತುಂಬಾ ಮುಖ್ಯ ಹೀಗಾಗಿ ಕಣ್ಣಿನ ಹೊರಭಾಗದಲ್ಲಿ ಒಣ ಚರ್ಮ ಕಾಣಿಸಿಕೊಂಡಲ್ಲಿ ಈ ಟಿಪ್ಸ್ ಫಾಲೋ ಮಾಡಿ.

ಗ್ರೀನ್ ಟೀ ಬ್ಯಾಗ್: ಹೌದು, ಕೇವಲ ಡಯಟ್ ಗೆ ಮಾತ್ರವಲ್ಲದೆ ಕಣ್ಣಿನ ಆರೋಗ್ಯಕ್ಕೂ ಸೂಕ್ತವಾಗಿದೆ. ಕಣ್ಣಿನ ಸುತ್ತ ಇರುವ ಪಫಿನೆಸ್ ಮತ್ತು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತೆ.

ನಿಮ್ಮ ಕಣ್ಣಿನ ಸುತ್ತವು ಬೆಣ್ಣೆ ಹಣ್ಣಿನ ಎಣ್ಣೆಯಿಂದ ಮಸಾಜ್ ಮಾಡಿ. ಇದು ಹೆಚ್ಚಿನ ಮಟ್ಟದಲ್ಲಿ ಆರೋಗ್ಯವನ್ನು ನೀಡುತ್ತದೆ. ಜೊತೆಗೆ ಚರ್ಮವನ್ನು ಕಾಪಾಡುತ್ತೆ.

ತೆಳುವಾಗಿ ನಿಮ್ಮ ಕಣ್ಣಿನ ಸುತ್ತ ಜೇನುತುಪ್ಪವನ್ನು ಹಚ್ಚಿ. ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಇರುವುದರಿಂದ ಡಾರ್ಕ್ ಸರ್ಕಲ್ ಕೂಡ ಹೋಗುತ್ತೆ, ಹಾಗೆಯೇ ಮಂದ ಕಣ್ಣು ಸರಿಯಾಗುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಹತ್ತಿಯ ಉಂಡೆಯಿಂದ ಹಾಲನ್ನು ನೆನೆಸಿ ಕಣ್ಣಿನ ಸುತ್ತ ಮಸಾಜ್ ಮಾಡಿಕೊಳ್ಳಿ. ಮತ್ತು ಎಲ್ಲೇ ಹೊರಗೆ ಹೋಗಿ ಬಂದ ಕೂಡಲೇ ತಣ್ಣೀರಿನಿಂದ ಕಣ್ಣನ್ನು ತೊಳೆಯಿರಿ. ಯಾವಾಗಲೂ ಬೇರೆ ರೀತಿಯ ಲಿಕ್ವಿಡ್ ಗಳನ್ನು ಹಾಕಿ ಕಣ್ಣನ್ನ ತೊಳೆಯುವ ಬದಲು, ತಣ್ಣೀರಿನಿಂದ ಕಣ್ಣನ್ನ ತೊಳೆದರೆ ಬಹಳ ಉಪಯುಕ್ತ.

ಶಿಯಾ ಬಟರ್:- ವಿಟಮಿನ್ ಇ ಮಾತ್ರೆ ಹಾಗೂ ಶಿಯಾ ಬಟರ್ ಮಿಕ್ಸ್ ಮಾಡಿ, ನಿಮ್ಮ ಕಣ್ಣುಗಳ ಸುತ್ತಲೂ ಚೆನ್ನಾಗಿ ಮಸಾಜ್ ಮಾಡಿ. ಹತ್ತು ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಚಳಿಗಾಲದಲ್ಲಿ ಒಡೆದ ಸ್ಕಿನ್ ಗೆ ಕೆನೆ ಸಹಕಾರ ಮಾಡುತ್ತದೆ. ಅದೇ ರೀತಿಯಾಗಿ ಕಣ್ಣುಗಳು ಆರೋಗ್ಯವಾಗಿ ಇರಬೇಕೆಂದರೆ ಕಣ್ಣಿನ ಸುತ್ತ ಕೆನೆಯನ್ನು ಹಚ್ಚಿ ರಾತ್ರಿ ಮಲಗಿ. ತಣ್ಣನೆಯ ಭಾವದ ಜೊತೆಗೆ ಉತ್ತಮ ಚರ್ಮವನ್ನು ಹೊಂದಿಸುತ್ತದೆ.

ಸೌತೆಕಾಯಿ ಪೀಸ್ ಗಳನ್ನು ಇಡುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಾಗಿ ತಾಜಾ ಸೌತೆಕಾಯಿಯನ್ನು ಸ್ಲೈಸ್ ತುಂಡು ಮಾಡಿ ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಕಣ್ಣಿಗೆ ಇಟ್ಟುಕೊಂಡು ಮಲಗಿ. ವಾರಕ್ಕೆ ಎರಡು ಬಾರಿಯಾದರೂ ಈ ರೀತಿ ಮಾಡುವುದರಿಂದ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ತೊಂದರೆ, ನಿಧಾನವಾಗಿ ಕಡಿಮೆಯಾಗುತ್ತದೆ ಜೊತೆಗೆ ಕಣ್ಣಿಗೂ ವಿಶ್ರಾಂತಿ ದೊರೆಯುತ್ತದೆ.

ಇಷ್ಟು ಟಿಪ್ಸ್ ಫಾಲೋ ಮಾಡುವುದರಿಂದ ನಿಮ್ಮ ನಯನದ ಸೌಂದರ್ಯದ ಜೊತೆಗೆ ಆರೋಗ್ಯವೂ ಕೂಡ ವೃದ್ಧಿಸುತ್ತದೆ.

Leave A Reply

Your email address will not be published.