Yawning : ಆಕಳಿಕೆ ಒಂದು ಅನಾರೋಗ್ಯದ ಲಕ್ಷಣವೇ?

ಆಕಳಿಕೆ ಅನ್ನೋದು ಸಾಮಾನ್ಯ ವಿಷಯವಾಗಿದೆ. ಹೆಚ್ಚಾಗಿ ಆಕಳಿಕೆ ಬರುವುದು ನಿದ್ದೆ ಬರುತ್ತದೆ ಎಂದಾಗ ಎಂದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಕೆಲವು ಆರೋಗ್ಯ ಸಮಸ್ಯೆಯಿಂದ ಕೂಡ ಆಕಳಿಕೆ ಬರುತ್ತದೆಯಂತೆ. ಕೆಲವರು ಆಯಾಸ ಆದಾಗ ಆಕಳಿಸುತ್ತಾರೆ. ಹೀಗೇ ಇನ್ನೂ ಹಲವಾರು ಕಾರಣಗಳಿಂದ ಆಕಳಿಕೆ ಬರುತ್ತದೆ. ಇದು ಅನಾರೋಗ್ಯದ ಸೂಚನೆ ಆಗಿರಬಹುದಂತೆ. ಹಾಗಾದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲೇಬೇಕು ಅಲ್ವಾ!!

ಇನ್ನೂ ಆಕಳಿಕೆ ಬರಲು ಕಾರಣವೇನು ಎಂದರೆ, ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾದಾಗ ಆಕಳಿಕೆ ಬರುತ್ತದೆಯಂತೆ. ಹಾಗೂ ಬಿಪಿ ತೊಂದರೆಗೆ ಒಳಗಾದವರು ಅಥವಾ ಹೃದಯದ ಬಡಿತ ನಿಧಾನವಾಗಿದ್ದರೂ ಕೂಡ ಆಕಳಿಕೆ ಉಂಟಾಗುತ್ತದೆ. ಅತಿಯಾದ ಒತ್ತಡದಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ದೇಹದಲ್ಲಿನ ಆಮ್ಲಜನಕ ಮೆದುಳಿಗೆ ತಲುಪುವುದಿಲ್ಲ. ಹಾಗಾಗಿ ಅಸ್ತಮಾ, ಹೃದಯ ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರು ಈ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಅಲ್ಲದೆ, ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಕಡಿಮೆಯಿದ್ದರೆ ಆಕಳಿಕೆ ಉಂಟಾಗುತ್ತದೆ. ಗ್ಲೂಕೋಸ್ ಮಟ್ಟ ಕಡಿಮೆಯಾದರೆ ಆಗ ಹೈಪೊಗ್ಲಿಸಿಮಿಯಾ ಆರಂಭವಾಗಬಹುದು. ಹೈಪೋಥೈರಾಯ್ಡಿಸಮ್ ಒಂದು ಕಾಯಿಲೆಯಾಗಿದೆ. ಇದು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ ಇದರಿಂದ ಆಕಳಿಕೆ ಬರುತ್ತದೆ.

ನಿರಂತರವಾದ ಆಕಳಿಕೆಯು ಯಕೃತ್ತಿನ ಹಾನಿಯನ್ನುಂಟು ಮಾಡಬಹುದು. ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅಸ್ತಮಾದಂತಹ ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು. ಮೆದುಳಿನಲ್ಲಿ ಪಿಟ್ಯುಟರಿ ಗ್ರಂಥಿಯ ನಿಗ್ರಹವು ಮಿದುಳಿಗೆ ಗಾಯವನ್ನುಂಟುಮಾಡುತ್ತದೆ. ಈ ಅತಿದೊಡ್ಡ ಪರಿಣಾಮಕ್ಕೆ ಆಕಳಿಕೆಯಿಂದ ಸೂಚನೆ ಸಿಗುತ್ತದೆ.

ವ್ಯಕ್ತಿಯ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾದರೆ ಆತ ಆಯಾಸವನ್ನು ಅನುಭವಿಸುತ್ತಾನೆ. ಅಂತಹ ಸನ್ನಿವೇಶಗಳಲ್ಲಿ ದೇಹಕ್ಕೆ ಸರಿಯಾದ ಪ್ರಮಾಣದ ಆಮ್ಲಜನಕವನ್ನು ತಲುಪಿಸುವ ಸಲುವಾಗಿ ಆಳವಾದ ಉಸಿರನ್ನು ಮೇಲೆ ತೆಗೆದುಕೊಂಡು ಸ್ವಲ್ಪ ಹೊತ್ತು ಉಸಿರನ್ನು ಹಿಡಿದಿಟ್ಟು ನಂತರ ನಿಧಾನವಾಗಿ ಬಿಡಿ. ಇದರಿಂದ ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗುತ್ತದೆ. ಇನ್ನೊಂದು ಉಪಾಯವೇನೆಂದರೆ ಆಯಾಸವಾದಾಗ ನೀರು ಕುಡಿಯುವುದು. ಇದು ಕೂಡ ಪ್ರಯೋಜನಕಾರಿ. ನೀರು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಹಾಗೂ ನಿಮಗೆ ಉಲ್ಲಾಸವನ್ನು ನೀಡುತ್ತದೆ. ಬೇರೆಯವರು ಆಕಳಿಸುವುದನ್ನು ನೋಡಿದಾಗ ನಾವು ಕೂಡ ಆಕಳಿಸಲು ಪ್ರಾರಂಭಿಸುತ್ತೇವೆ. ಅದಕ್ಕೆ ತಕ್ಷಣವೇ ಬೇರೆಡೆ ನೋಡಬೇಕು. ಇದರಿಂದ ಆಕಳಿಸುವುದನ್ನು ತಪ್ಪಿಸಬಹುದಾಗಿದೆ.

Leave A Reply

Your email address will not be published.