ಜೂಜಿಗಾಗಿ ಗಂಡ ಮಕ್ಕಳನ್ನು ಬಿಟ್ಟು ಮಾಲೀಕನ ಜೊತೆ ಹೋದ ಹೆಂಡತಿ| ಇತ್ತ ಗಂಡ,ಮಕ್ಕಳ ಪಾಡು ಅಯ್ಯೋ..

Share the Article

ಯಾವುದು ಕೂಡ ಅತಿಯಾದ ಚಟವಾಗಬಾರದು ಇದರಿಂದ ಅಪಾಯವೇ ಹೆಚ್ಚು. ಜೂಜಾಟ, ಸಿಕ್ಕಿ ಸಿಕ್ಕಿದಕ್ಕೆಲ್ಲಾ ಬೆಟ್ಟಿಂಗ್ ಹಾಕುವುದು, ಹೀಗೆ ಸುಲಭವಾಗಿ ಹಣಗಳಿಸಲೆಂದು ಕೆಟ್ಟ ಹಾದಿಯನ್ನು ಹಿಡಿಯುವುದು ನಮ್ಮ ಜೀವನವನ್ನೆ ಸರ್ವನಾಶ ಮಾಡಿದಂತೆ. ಜೂಜಾಡಿ ಜೀವನದಲ್ಲಿ ಎಲ್ಲಾ ಕಳೆದುಕೊಂಡವರೆ, ಪಡೆದದ್ದೂ ಯಾರು ಇಲ್ಲ ಎಂಬುದನ್ನು ನಾವು ಪಾಂಡವರ ಪಗಡೆಯಾಟದ ಕಥೆಯಲ್ಲಿ ಕೇಳಿದ್ದೇವೆ. ಹೀಗೆ ಇಲ್ಲೊಬ್ಬಳು ತನ್ನ ಹುಚ್ಚು ಚಟದಿಂದ ತನ್ನನ್ನೇ ಸರ್ವಸ್ವಯಿಟ್ಟು ಕೊನೆಗೆ ಏನಾಯಿತು?ಅವಳು ಸೋತಳಾ? ಇಲ್ಲ ಗೆದ್ದಳಾ? ಎಂಬ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಉತ್ತರ ಪ್ರದೇಶದ ಕೊತ್ವಾಲಿ ಗ್ರಾಮದ ದೇವಕಲಿ ಪ್ರದೇಶದಲ್ಲಿ ರೇಣು ತನ್ನ ಗಂಡನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಗಂಡ ಜೈಪುರಕ್ಕೆ ಕೆಲಸಕ್ಕೆ ಹೋಗುವುದರಿಂದ ಆಕೆಗೆ ತಿಂಗಳಿಗಿಷ್ಟು ಎಂದು ಹಣ ಕಳುಹಿಸುತ್ತಿದ್ದ. ಗಂಡ ಕಷ್ಟ ಪಟ್ಟು ಸಂಪಾದಿಸಿದ ಹಣದಿಂದ ಸಂಸಾರ ನಿಭಾಯಿಸಬೇಕಾದ ರೇಣು, ಲುಡೋ ಆಟದಲ್ಲಿ ಅದನ್ನು ಬೆಟ್ಟಿಂಗ್‌ ಗೆ ಹಾಕುತ್ತಾಳೆ.

ದಿನ ನಿತ್ಯ ಮನೆ ಮಾಲೀಕರೊಂದಿಗೆ ಲುಡೋ ಆಟವಾಡುವ ರೇಣು, ಸ್ವಲ್ಪ ಸ್ವಲ್ಪ ಹಣವನ್ನು ಬೆಟ್ಟಿಂಗ್‌ ಗಾಗಿ ಸುರಿಯುತ್ತಿದ್ದಳು. ಒಂದು ದಿನ ಲುಡೋವನ್ನು ಆಡುತ್ತಿದ್ದ ರೇಣುವಿನ ಬಳಿ ಹಣವಿರಲಿಲ್ಲ. ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದ ರೇಣು ತನ್ನನು ತಾನೇ ಪಣಕ್ಕಿಟ್ಟು ಆಡುತ್ತಾರೆ. ಮತ್ತು ಆಟದಲ್ಲಿ ರೇಣು ಸೋಲುತ್ತಾರೆ.

ಲುಡೋದಲ್ಲಿ ಸೋತಿದ್ದರಿಂದ ರೇಣು ಮನೆ ಮಾಲೀಕನೊಂದಿಗೆ ವಾಸಿಸಲು ಶುರು ಮಾಡಿದ್ದಾಳೆ. ಅವಳನ್ನು ಅಲ್ಲಿಂದ ವಾಪಾಸ್‌ ಕರೆ ತರಲು ಪ್ರಯತ್ನಿಸಿದರೂ ಅವಳು ಬರಲು ಒಪ್ಪಲಿಲ್ಲ ಎಂದು ರೇಣು ಪತಿ ಹೇಳುತ್ತಾರೆ. ಇದರ ಕುರಿತು ರೇಣು ಪತಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್‌ ವೈರಲ್‌ ಆಗಿದೆ.
ರೇಣುವಿನ ಪತಿಯು ಈ ಬಗ್ಗೆ ಪ್ರತಾಪಗಢ ಠಾಣೆಯಲ್ಲಿ ದೂರು ನೀಡಿದ್ದೂ, ಶೀಘ್ರದಲ್ಲಿ ಮನೆಮಾಲೀಕನನ್ನು ನಾವು ಸಂಪರ್ಕಿಸಿ ಇದರ ಕುರಿತು ತನಿಖೆ ಆರಂಭಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

Leave A Reply