ನಿದ್ದೆ ಬಿಟ್ಟು ಹ್ಯಾಂಗ್ ಓವರ್ ನಲ್ಲಿ ಇದ್ದೀರಾ? ಇಲ್ಲಿದೆ ನೋಡಿ ಈಸಿ ಟಿಪ್ಸ್

ಎಸ್, ಪ್ರತಿನಿತ್ಯ ರಾತ್ರಿ ಪೂರ್ತಿ ಕೆಲಸಗಳನ್ನು ಮಾಡಿ ಮತ್ತೆ ಮಾರನೆಯ ದಿನವೂ ಕೆಲಸ ಮಾಡ್ಬೇಕಾದ್ರೆ ಸಖತ್ ನಿದ್ದೆ ಎಳಿತ ಇರುತ್ತೆ. ಮಾಡೋ ಕೆಲಸದ ಮೇಲೆ ಚೂರು ಗಮನ ಕೊಡೋಕೆ ಆಗೋಲ್ಲ. ಈ ರೀತಿಯಾದ ಅನೇಕ ಸಮಸ್ಯೆಗಳನ್ನು ಎದುರಿಸಬಹುದು ನೀವು. ಹಾಗಾದ್ರೆ ಅದ್ರಿಂದ ಈಸಿಯಾಗಿ ಹೀಗೆ ಹೊರಗೆ ಬರಬೋದು ಅಂತ ತಿಳಿಸಿ ಕೊಡ್ತೀವಿ ಬನ್ನಿ.

ಶುಂಠಿ
ವಿಪರೀತ ಆಯಾಸ ಎದುರಾದಾಗ ನಮಗೆ ಯಾವುದೇ ಆಹಾರವನ್ನು ಸೇವನೆ ಮಾಡಲು ಹೋದರೆ ವಾಕರಿಕೆ ಮತ್ತು ವಾಂತಿ ಬರುವುದು ಸಹಜ.
ಹೊಟ್ಟೆ ಹಸಿವಾಗಿದ್ದರೂ ಸಹ ಯಾವುದೇ ಆಹಾರವನ್ನು ಸೇವಿಸಲು ಸಾಧ್ಯವಿರುವುದಿಲ್ಲ. ಹೊಟ್ಟೆಯ ಅಸ್ವಸ್ಥತೆ ಇದಕ್ಕೆ ಒಂದು ಕಾರಣವಾದರೆ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಸುಧಾರಣೆ ಆಗಿಲ್ಲದೆ ಇರುವುದು ಇನ್ನೊಂದು ಕಾರಣವಾಗುತ್ತದೆ.

ಎಳನೀರನ್ನು ಎಲೆಕ್ಟ್ರೋಲೈಟ್ ಗಳ ಮಹಾಪೂರ ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ ವಿಪರೀತ ಆಲಸ್ಯದ ಭಾವನೆ ಎದುರಾದಾಗ ನಮ್ಮ ದೇಹದಲ್ಲಿ ಶಕ್ತಿ ಕುಂದಿರುತ್ತದೆ. ಇದಕ್ಕೆ ಕಾರಣ ನಾವು ನಮ್ಮ ಬೆವರಿನ ಅಥವಾ ಮೂತ್ರ ವಿಸರ್ಜನೆಯ ಮೂಲಕ ನಮ್ಮ ದೇಹದಲ್ಲಿರುವ ಸಾಕಷ್ಟು ಎಲೆಕ್ಟ್ರೋಲೈಟ್ ಅಂಶಗಳನ್ನು ಕಳೆದುಕೊಂಡಿರುತ್ತೇವೆ.
ಹಾಗಾಗಿ ಮತ್ತೊಮ್ಮೆ ಅವುಗಳ ಸಮತೋಲನ ನಮಗೆ ಸಿಗಬೇಕೆಂದರೆ ಎಳನೀರಿನ ರೀತಿಯ ಪಾನೀಯಗಳನ್ನು ಅಥವಾ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಎಳನೀರಿನಲ್ಲಿ ಪೊಟ್ಯಾಷಿಯಂ, ಸೋಡಿಯಂ, ಮೆಗ್ನೀಷಿಯಂ, ಪಾಸ್ಪರಸ್ ಮತ್ತು ಕ್ಯಾಲ್ಸಿಯಂ ಅಂಶಗಳು ಸಾಕಷ್ಟು ಕಂಡು ಬರುತ್ತವೆ.

ರಾಸಾಯನಿಕವಾಗಿ ಇವುಗಳು ಎಲೆಕ್ಟ್ರೋಲೈಟ್ ಎಂಬ ಅಂಶಗಳಾಗಿ ಗುರುತಿಸಿಕೊಂಡಿರುವುದರಿಂದ ವಿಪರೀತ ಆಯಾಸ ಸುಸ್ತು ಎದುರಾದ ಸಂದರ್ಭದಲ್ಲಿ ನಮ್ಮ ದೇಹವನ್ನು ನಿರ್ಜಲೀಕರಣದ ಸಮಸ್ಯೆಯಿಂದ ದೂರ ಮಾಡುವುದರ ಜೊತೆಗೆ ತಕ್ಷಣವೇ ಶಕ್ತಿ ಮತ್ತು ಸದೃಢತೆಯನ್ನು ಕೊಟ್ಟು ನಮ್ಮನ್ನು ಚುರುಕಾಗಿರುವಂತೆ ನೋಡಿಕೊಳ್ಳುತ್ತದೆ.

ಬಾಳೆ ಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಸಾಕಷ್ಟಿದೆ. ಮೊದಲೇ ಹೇಳಿದಂತೆ ‘ ಪೊಟ್ಯಾಷಿಯಂ ‘ ಒಂದು ಎಲೆಕ್ಟ್ರೋಲೈಟ್ ಅಂಶ ಆಗಿರುವುದರಿಂದ ನಿಮ್ಮ ದೇಹದ ಆಯಾಸದ ಸಂದರ್ಭದಲ್ಲಿ ಪೊಟಾಶಿಯಮ್ ಅಂಶದ ಸಮತೋಲನ ಬಹಳ ಮುಖ್ಯವಾಗುತ್ತದೆ.

Leave A Reply

Your email address will not be published.