ಬಸ್ಸಿನಲ್ಲೇ ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ!

ಹುಟ್ಟು ಮತ್ತು ಮರಣದ ಬಗ್ಗೆ ನಾವು ಯಾವಾಗ ಹೇಗೆ ಎಲ್ಲಿ ಆಗುತ್ತೆ ಅನ್ನೋದು ಊಹಿಸೋಕೆ ಸಾಧ್ಯವಿಲ್ಲ. ಅದು ದೇವರ ಇಚ್ಛೆಯಂತೆ ನಡೆಯುವುದು ಎಂದು ಸಹ ಹೇಳಬಹುದು. ಹಾಗೆಯೇ ಮಹಿಳೆಯೊಬ್ಬರು ಬಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಛಿಬ್ರಮೌದಲ್ಲಿ ನಡೆದಿದೆ.

 

ಭಾನುವಾರ ದೆಹಲಿಯಿಂದ ಉತ್ತರ ಪ್ರದೇಶದ ಕನೌಜ್ ಜಿಲ್ಲೆ ಗೆ ತೆರಳುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನಲ್ಲೇ ಹೆರಿಗೆಯಾಗಿದೆ. ನಂತರ ಬಸ್ ಚಾಲಕ ಆಸ್ಪತ್ರೆಗೆ ಸಾಗಿಸಿದ್ದಾರೆ, ತಾಯಿ ಮತ್ತು ನವಜಾತ ಶಿಶುವಿಗೆ ಚಿಕಿತ್ಸೆ ನೀಡಲಾಗಿದೆ. ಎಂದು ಬಸ್ಸಿನ ಸಹ-ಚಾಲಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಮಹಿಳೆ ಹೆರಿಗೆ ನೋವು ಎಂದು ಹೇಳಿದಾಗ ಬಸ್ ಚಾಲಕ ವಾಹನ ನಿಲ್ಲಿಸಿದ್ದಾನೆ. ನಂತರ ಅವರು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಸೋಮೇಶ್ ಕುಮಾರ್ ತಿಳಿಸಿದರು. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸದ್ಯ ಪ್ರಕೃತಿ ನಡುವೆ ಸಹಜ ಹೆರಿಗೆ ಆಗಿ ಮಗು ಮತ್ತು ತಾಯಿಯು ಸುರಕ್ಷಿತವಾಗಿರುವುದು ಕೇಳಿ ಸಾರ್ವಜನಿಕರು ಖುಷಿ ಪಟ್ಟಿದ್ದಾರೆ.

Leave A Reply

Your email address will not be published.