ಕೋವಿಡ್ ನೀಡಿದ ಆಘಾತ | ಈ 16 ರ ಬಾಲಕ 70 ರಂತೆ ವರ್ತನೆ!!!
ಕೊರೋನಾ ಸೋಂಕು ಹರಡುತ್ತಿದ್ದ ವರ್ಷವನ್ನು ಯಾರು ಕೂಡಾ ಮರೆಯಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತಿದ್ದ ಕಣ್ಣಿಗೆ ಕಾಣದ ಮಹಾಮಾರಿಯಿಂದ ಜನರು ಸೋತು ಹೋಗಿದ್ದರು. ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆ ಇನ್ನೂ ಕಡಿಮೆಯಾಗಿಲ್ಲ. ಕೆಲವರ ಭಯ ಇನ್ನೂ ಹೋಗಿಲ್ಲ. ಮರಣಗಳಿಗೆ ಬೆಲೆ ಇರದ ಆ ಕಾಲ ಮೈ ಜುಮ್ ಎನ್ನಿಸುತ್ತೆ.
ಅದಲ್ಲದೆ ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿತ್ತು. ಸೋಂಕು ಹರಡಿ ಅದೆಷ್ಟೋ ಮಂದಿ ಮೃತಪಟ್ಟರು, ಇನ್ನದೆಷ್ಟೋ ಮಂದಿ ಆಸ್ಪತ್ರೆಗಳಲ್ಲಿ ನರಳಾಡಿದರು. ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಗಿದ್ದರೂ ಜನರಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಹಾಗೆಯೇ ಇದೆ. ಅದೆಷ್ಟೋ ಮಂದಿ ದೀರ್ಘಾವಧಿಯ ಕೋವಿಡ್ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಈಗಲೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಆದರೆ ಇದೆಲ್ಲವನ್ನೂ ಮೀರಿದ ಅಧ್ಯಯನವೊಂದು ಅಮೆರಿಕದಲ್ಲಿ ನಡೆದಿದೆ. ಕೊರೊನಾ ಸೋಕಿದ ಬಳಿಕ 16 ವರ್ಷದ ಬಾಲಕರು 70 ವರ್ಷದ ವೃದ್ಧರಂತೆ ವರ್ತಿಸುತ್ತಿದ್ದಾರೆ. ಏನೇ ಹೇಳಿದರೂ, ಕೇಳಿದರೂ ಕ್ಷಣಮಾತ್ರದಲ್ಲೇ ಮರೆಯುತ್ತಾರಂತೆ. ಇದು ಕೋವಿಡ್ ಪರಿಣಾಮ ಆಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
ಅಧ್ಯಯನ ಪ್ರಕಾರ ಸ್ಟ್ಯಾನ್ಫೋರ್ಡ್ ವಿವಿಯ ನ್ಯೂರೋ ಡೆವಲಪ್ಮೆಂಟ್, ಅಫೆಕ್ಟ್ ಮತ್ತು ಸೈಕೋಪಾಥಾಲಜಿ ಲ್ಯಾಬ್ನ ನಿರ್ದೇಶಕ ಇಯಾನ್ ಗಾಲ್ಲೀಬ್, ಕೋವಿಡ್ ಯುವಕರ ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ ಎಂದು ಕಂಡುಕೊಳ್ಳಲಾಗಿತ್ತು. ಆದರೆ, ದೈಹಿಕ ನ್ಯೂನ್ಯತೆ ಉಂಟು ಮಾಡುವ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಈ ಅಧ್ಯಯನ ಭೀಕರವಾಗಿದೆ.
ಹೌದು ಮೆದುಳಿನ ಹಿಪೊಕ್ಯಾಂಪಸ್, ಅಮಿನ್ಹಾಲಾ ಎಂಬೆರಡು ರಚನೆಗಳು ಭಾವನೆ, ನೆನಪುಗಳನ್ನು ನಿಯಂತ್ರಿಸುತ್ತವೆ. ಕೋವಿಡ್ ತಾಕಿದ ಮತ್ತು ಬಳಿಕ 163 ಮಕ್ಕಳ ಮೇಲೆ ತಂಡ ನಿಗಾ ವಹಿಸಿತ್ತು. ಕೋವಿಡ್ ವಕ್ಕರಿಸುವ ಮೊದಲು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ತುಂಬಾ ವೇಗವಾಗಿತ್ತು. ಕೋವಿಡ್ ಸೋಕಿದ ಬಳಿಕ ಅವರಲ್ಲಿ ಹೆಚ್ಚಿನ ತೀವ್ರ ಬದಲಾವಣೆಗಳಾಗಿ ಅವರ ವಯಸ್ಸಿಗಿಂತ ಹಲವು ಪಟ್ಟು ಅಂದರೆ 16 ವರ್ಷದ ಹುಡುಗ 70-80 ರ ವೃದ್ಧನಂತೆ ನಡೆದುಕೊಳ್ಳುವುದು ಅಧ್ಯಯನದಲ್ಲಿ ಕಂಡುಬಂತು ಎಂದು ಅವರು ವಿವರಿಸಿದ್ದಾರೆ.
ಜೋನಾಸ್ ಮಿಲ್ಲರ್ ಪ್ರಕಾರ ಪ್ರಸ್ತುತ News Hub ಕೊರೊನಾ ಬಳಿಕ ಮಕ್ಕಳಲ್ಲಿ ಮರೆವಿನ ಕಾಯಿಲೆ ಹೆಚ್ಚಾಗಿದೆ. ಮೆದುಳಿನ ರಚನೆಯ ಮೇಲೆ ಅದು ಪರಿಣಾಮ ಉಂಟು ಮಾಡಿದೆ. ಕೊರೊನಾ ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳ ಮೇಲೆ ಅಗಾಧ ಪ್ರಭಾವ ಬೀರಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಕೊರೋನ ಲಸಿಕೆ ಹಾಕಿದ್ದೇನೆ ಎಂದು ಸುಮ್ಮನಾಗಬೇಡಿ ಯಾಕೆಂದರೆ ಕೊರೋನ ಲಸಿಕೆ ಹಾಕಿದವರಿಗೆ ಕೊರೋನ ಬರಲ್ಲ ಎಂಬ ಭರವಸೆ ಹೊರತಾಗಿ ಅದು ನಿಮ್ಮನ್ನು ರೋಗದ ವಿರುದ್ಧ ರಕ್ಷಣೆ ನೀಡುತ್ತದೆ ಎಂಬುದಾಗಿದೆ. ಹಾಗೂ ರೋಗದ ಪರಿಣಾಮ ಯಾವ ರೀತಿ ಪರಿಣಮಿಸಲಿವೆ ಎಂದು ಹೇಳಲು ಸಾಧ್ಯ ಇಲ್ಲ.