Train: ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಬಹು ಮುಖ್ಯವಾದ ಮಾಹಿತಿ ಇಲ್ಲಿದೆ | ಓದಿ, ಮಿಸ್‌ ಮಾಡ್ಕೋಬೇಡಿ

ರೈಲು ಪ್ರಯಾಣ ಎಂದರೆ ಇಷ್ಟ ಪಡದವರೆ ವಿರಳ ಎಂದರೆ ತಪ್ಪಾಗದು.. ಅದರಲ್ಲೂ ಕೂಡ ದೂರ ಪ್ರಯಾಣವೆಂದರೆ ಹೆಚ್ಚಿನವರಿಗೆ ಅಚ್ಚು ಮೆಚ್ಚು. ಬೇರೆ ಬೇರೆ ಊರುಗಳ, ಜನರ ಭೇಟಿ ಜೊತೆಗೆ ಏಕಾಂತವಾಗಿ ಪ್ರಕೃತಿಯ ಸೊಬಗನ್ನು ಸವಿಯುತ್ತ ಸಾಗುವ ಪಯಣವೇ ಸುಂದರ. ಜನರು ಯಾವುದಾದರೂ ದೂರದ ಊರಿಗೆ ಪ್ರಯಾಣಿಸುವಾಗ ರೈಲಿನಲ್ಲಿ (Train) ತೆರಳಲು (Travel) ಹೆಚ್ಚು ಇಷ್ಟ ಪಡುವುದು ಸಹಜ.. ಆರಾಮದಾಯಕ ಜೊತೆಗೆ. ನೆಮ್ಮದಿಯಿಂದ ನಿದ್ರಿಸಲು ಅವಕಾಶ ದೊರೆಯುವುದರಿಂದ ಪ್ರಯಾಣದಲ್ಲಿ (Night journey) ಯಾವುದೇ ಸಮಸ್ಯೆ ಎದುರಾಗದು. ರೈಲ್ವೆ ಪ್ರಯಾಣಿಕರಿಗೆ ಬಹುತೇಕ ಎಲ್ಲ ಸೌಲಭ್ಯಗಳು ದೊರೆಯುತ್ತದೆ.

 

ಇತ್ತೀಚೆಗೆ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅನೇಕ ಹೊಸ ಸೌಲಭ್ಯ ಕಲ್ಪಿಸಿದ್ದು, ರೈಲು ಪ್ರಯಾಣಿಕರಿಗೆ ಉಚಿತ ಆಹಾರ ನೀಡಲಿದ್ದು ಈ ಸೌಲಭ್ಯವು ಕೆಲವು ವಿಶೇಷ ರೈಲುಗಳ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತದೆ.

ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇದೀಗ, ರೈಲ್ವೆಯ ಮತ್ತೊಂದು ಹೊಸ ಸೇವೆಯಿಂದ, ಪ್ರಯಾಣಿಕರು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗಲಿದೆ.

ರಾತ್ರಿ ಹೊತ್ತಿನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಹೊಸ ಸೇವೆಯನ್ನು ಪ್ರಾರಂಭಿಸಿದ್ದು, ಈ ರೈಲ್ವೆ ಸೇವೆಯ ಹೆಸರು ‘ಡೆಸ್ಟಿನೇಷನ್ ಅಲರ್ಟ್ ವೇಕ್ ಅಪ್ ಅಲಾರಾಂ’ ಅಂತ ಹೇಳಲಾಗುತ್ತಿದೆ. ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಶಾಂತಿಯುತವಾಗಿ ನಿದ್ರೆ ಮಾಡಲು ಅನುವು ಮಾಡಿಕೊಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ..ಈ ಸೌಲಭ್ಯದ ಅಡಿಯಲ್ಲಿ, ನೀವು ಇಳಿಯಬೇಕಾದ ನಿಲ್ದಾಣದ ಆಗಮನಕ್ಕೆ 20 ನಿಮಿಷಗಳ ಮೊದಲು ನಿಮ್ಮನ್ನು ಎಚ್ಚರಗೊಳಿಸಲಾಗುತ್ತದೆ.

ಭಾರತೀಯ ರೈಲ್ವೆಯ ಯೋಜನೆಯನ್ನು ರೂಪಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ 400 ಸೆಂ.ಮೀ ಹೈಸ್ಪೀಡ್ ರೈಲುಗಳನ್ನು ಓಡಿಸುವ ಜೊತೆಗೆ ಆಗಸ್ಟ್ 15, 2023 ರ ವೇಳೆಗೆ, 75 ನಗರಗಳನ್ನು ವಂದೇ ಭಾರತ್ ರೈಲುಗಳೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಭರದ ತಯಾರಿ ನಡೆಯುತ್ತಿವೆ.ಅಷ್ಟೆ ಅಲ್ಲದೆ, ಯಾವುದೇ ಪರಿಸ್ಥಿತಿ ಎದುರಾದರೂ ನೀವು ನಿದ್ರಿಸಿದಾಗ ಇಳಿದುಕೊಳ್ಳುವ ನಿಲ್ದಾಣವನ್ನು ತಪ್ಪಿಸಿಕೊಳ್ಳುವ ಆತಂಕ ಎದುರಾಗದು.

ಆದರೆ ಇದಕ್ಕಾಗಿ ನೀವು ರೈಲ್ವೆಯ ಈ ಹೊಸ ಸೇವೆಗೆ ಚಂದಾದಾರರಾಗಬೇಕಾಗಿದ್ದು ಜೊತೆಗೆ ಅದಕ್ಕಾಗಿ ನಿಗದಿತ ಶುಲ್ಕವನ್ನು ಕೂಡ ನೀವು ಪಾವತಿಸಬೇಕಾಗುತ್ತದೆ ಪ್ರಯಾಣಿಕರು ಇಳಿಯಬೇಕಾದ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ ಎಂದು ಸಹ ರೈಲ್ವೆ ಮಂಡಳಿಗೆ ಅಂತಹ ಅನೇಕ ದೂರುಗಳು ಬಂದಿದ್ದು, ಅಂತಹ ಯಾವುದೇ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಪ್ರಯಾಣಿಕರು ಎದುರಿಸಬಾರದು ಎಂಬ ಸಲುವಾಗಿ ರೈಲ್ವೆ ಈ ಸೌಲಭ್ಯವನ್ನು ಪ್ರಾರಂಭಿಸಿದೆ..

ಈ ಸೇವೆಯ ಪ್ರಯೋಜನವನ್ನು 139 ಸಂಖ್ಯೆಯ ವಿಚಾರಣಾ ಸೇವೆಯ ಮೂಲಕ ತೆಗೆದುಕೊಳ್ಳಬಹುದಾಗಿದೆ.ನೀವು 20 ನಿಮಿಷಗಳ ಮೊದಲೇ ಎಚ್ಚರಗೊಳ್ಳಬಹುದು. ನೀವು ಈ ಸೇವೆಯನ್ನು ಪಡೆಯಲು ಬಯಸಿದರೆ, ನೀವು 139 ಸಂಖ್ಯೆ ವಿಚಾರಣಾ ವ್ಯವಸ್ಥೆಗೆ ಕರೆ ಮಾಡುವ ಮೂಲಕ ಎಚ್ಚರಿಕೆಯ ಸೌಲಭ್ಯವನ್ನು ಕೇಳಬಹುದಾಗಿದೆ. ಇದರ ಲಾಭವನ್ನು ಯಾರು ಬೇಕಾದರೂ ಪಡೆದುಕೊಳ್ಳಬಹುದ್ದಾಗಿದ್ದು. ಇದರಲ್ಲಿ, ನೀವು ಇಳಿದುಕೊಳ್ಳುವ ರೈಲು ನಿಲ್ದಾಣ ತಲುಪುವ 20 ನಿಮಿಷಗಳ ಮೊದಲೇ ನಿಮ್ಮನ್ನು ಎಚ್ಚರಿಸಲಾಗುತ್ತದೆ.

ಈ ಸೌಲಭ್ಯವು ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಲಭ್ಯವಿರುತ್ತದೆ.’ಡೆಸ್ಟಿನೇಷನ್ ಅಲರ್ಟ್ ವೇಕಪ್ ಅಲಾರಂ’ ಸೌಲಭ್ಯವನ್ನು ಪ್ರಾರಂಭಿಸಲು, ಐಆರ್‌ಸಿಟಿಸಿ ಸಹಾಯವಾಣಿ 139 ಗೆ ಕರೆ ಮಾಡಬೇಕಾಗಿದ್ದು, ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿದ ನಂತರ ನೀವು ಗಮ್ಯಸ್ಥಾನದ ಎಚ್ಚರಿಕೆಗಾಗಿ 7 ಮತ್ತು ನಂತರ 2 ಅನ್ನು ಒತ್ತಬೇಕು. ಜೊತೆಗೆ 10 ಅಂಕಿಯ ಪಿಎನ್‌ಆರ್ ಅನ್ನು ನಮೂದಿಸಿಕೊಂಡು ಅದನ್ನು ದೃಢೀಕರಿಸಲು 1 ಅನ್ನು ಡಯಲ್ ಮಾಡಬೇಕು.

Leave A Reply

Your email address will not be published.