ಮೀನುಗಾರರ ಬಲೆಗೆ ಬಿದ್ದ ಬಲು ಅಪರೂಪದ ಡಾಲ್ಫಿನ್ | ವಾಪಸ್ ಸಮುದ್ರಕ್ಕೆ ಬಿಟ್ಟ ಮೀನುಗಾರರು! ಯಾಕೆ? ಇಲ್ಲಿದೆ ವೀಡಿಯೋ!!!

ಮೀನುಗಳನ್ನು ಬೇಟೆಯಾಡುವುದು ಸಹ ಒಂದು ಸಾಹಸವೇ ಸರಿ. ಯಾಕೆಂದರೆ ಮೀನು ಹಿಡಿಯಲು ಸಹ ಕೆಲವೊಂದು ಚಾಕ ಚಕ್ಯತೆ ಗೊತ್ತಿರಲೇ ಬೇಕು. ನಿಜವಾಗಲೂ ಕೆಲವೊಮ್ಮೆ ಮೀನು ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ.

ಹಾಗೆಯೇ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆಯಲ್ಲಿ ಸಿಲುಕಿದ್ದ ಎರಡು ಅಪರೂಪದ ಮೀನನ್ನು ಜೀವಂತವಾಗಿ ರಕ್ಷಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ಮೀನುಗಾರರು ಬಿಟ್ಟಿದ್ದು ಹೆಮ್ಮೆಯ ಸಂಗತಿ ಆಗಿದೆ.

ರಾಮನಾಥಪುರಂ ಜಿಲ್ಲೆಯ ಮಂಡಪಂ, ಪಂಬನ್, ಉಚ್ಚಿಪುಳ್ಳಿ, ಸೆರಂಗೊಟ್ಟೆ, ಧನುಷೋಡಿ ಮತ್ತಿತರ ಪ್ರದೇಶಗಳಲ್ಲಿ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದರು. ಈ ವೇಳೆ ರಾಮನಾಥಪುರದ ಸಮುದ್ರದಲ್ಲಿ ಮೀನುಗಾರರು ಬಲೆ ಬೀಸಿದಾಗ ಮನ್ನಾರ್ ಕೊಲ್ಲಿಯಲ್ಲಿ ವಾಸಿಸುವ ಅಪರೂಪದ ಡಾಲ್ಫಿನ್ ಬಲೆಗೆ ಸಿಕ್ಕಿಬಿದ್ದಿವೆ. ಇವು ಅಪರೂಪದ ಜಾತಿಗಳು ಎಂದು ತಿಳಿದ ತಕ್ಷಣ ಮೀನುಗಾರರು ಬಲೆಯಲ್ಲಿದ್ದ ಇತರೆ ಮೀನುಗಳನ್ನು ಬೇರ್ಪಡಿಸಿ ಜೀವಂತವಾಗಿ ಸಿಲುಕಿದ್ದ ಡಾಲ್ಫಿನ್ ನ್ನು ರಕ್ಷಿಸಿದ್ದಾರೆ. ತಕ್ಷಣ ಮೀನನ್ನು ಸಮುದ್ರಕ್ಕೆ ಬಿಡಲಾಯಿತು.
ಮೀನುಗಾರರ ಕ್ರಮಕ್ಕೆ ಅರಣ್ಯ ಇಲಾಖೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಎಲ್ಲೆಡೆ ಶ್ಲಾಘನೆಗಳನ್ನು ವ್ಯಕ್ತ ಪಡಿಸಿದ್ದಾರೆ.

ಸದ್ಯ ಮೀನುಗಾರರು ಈ ಘಟನೆಯನ್ನು ವಿಡಿಯೋ ಮಾಡಿದ್ದು ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಕ್ಷಕರು ಸಹ ಮೆಚ್ಚುಗೆಯ ಕಾಮೆಂಟ್ ಗಳ ಮಳೆ ಸುರಿಸಿದ್ದಾರೆ.

Leave A Reply

Your email address will not be published.