ಮುಂದಿನ ತಿಂಗಳಿನಿಂದ ಇಲ್ಲಿ ಬಂದ್ ಆಗುತ್ತೆ ಡೀಸೆಲ್ ಆಟೋ ನೋಂದಣಿ!

ಇನ್ನೇನು ಹೊಸ ವರ್ಷಕ್ಕೆ ನಾವು ಕಾಲಿಡಲಿದ್ದೇವೆ. ಹೊಸ ವರ್ಷದಲ್ಲಿ ಹೊಸ ಹೊಸ ಯೋಜನೆಗಳನ್ನು, ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಹಾಗೆಯೇ
ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ ಸರ್ಕಾರಿ ಸಂಸ್ಥೆಯಾದ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗವು ಹೊಸ ಆದೇಶ ಒಂದನ್ನು ಹೊರಡಿಸಿದೆ.

ಹೌದು ಜನವರಿ 1, 2023. ವರ್ಷದ ಮೊದಲ ದಿನದಿಂದಲೇ ದೆಹಲಿ-ಎನ್‌ಸಿಆರ್‌ನಲ್ಲಿ ಡೀಸೆಲ್ ಆಟೋಗಳು ನೋಂದಣಿ ಬಂದ್ ಆಗಲಿದೆ . ಇನ್ಮುಂದೆ ಏನಿದ್ದರೂ ಸಿಎನ್‌ಜಿ ಅಥವಾ ಎಲೆಕ್ನಿಕ್ ಆಟೋಗಳನ್ನು ಮಾತ್ರ ನೋಂದಾಯಿಸಬಹುದು ಎಂದು ಆದೇಶ ಹೊರಡಿಸಲಾಗಿದೆ.

ವರದಿ ಪ್ರಕಾರ ದೆಹಲಿಯಲ್ಲಿ ಮಾಲಿನ್ಯದಲ್ಲಿ PM2.5 ಅನ್ನು ಹೆಚ್ಚಿಸುವಲ್ಲಿ ವಾಹನಗಳಿಂದ ಹೊರಬರುವ ಹೊಗೆಯ ಪಾಲು ಶೇಕಡಾ 40 ಕ್ಕಿಂತ ಹೆಚ್ಚು. ಇದೇ ಕಾರಣಕ್ಕೆ ಈ ನಿರ್ಧಾರ ಜಾರಿ ಮಾಡುವುದು ಅನಿವಾರ್ಯ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ ಸರ್ಕಾರಿ ಸಂಸ್ಥೆಯಾದ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗ (ಸಿಎಕ್ಯೂಎಂ)
ಆದೇಶದ ಪ್ರಕಾರ, ಜನವರಿ 1, 2023 ರಿಂದ, ದೆಹಲಿ ಸೇರಿದಂತೆ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ NCR ಜಿಲ್ಲೆಗಳಲ್ಲಿ CNG ಅಥವಾ ಎಲೆಕ್ಟ್ರಾನಿಕ್ ಆಟೋಗಳನ್ನ ಮಾತ್ರ ನೋಂದಾವಣೆ ಮಾಡಿಕೊಳ್ಳಲಾಗುವುದು. 2026ರ ವೇಳೆಗೆ ಡೀಸೆಲ್‌ನಲ್ಲಿ ಚಲಿಸುವ ಆಟೋಗಳನ್ನು ದೆಹಲಿ-ಎನ್‌ಸಿಆರ್‌ನ ರಸ್ತೆಗಳಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬುದು ಇದರ ಮುಖ್ಯ ಉದ್ದೇಶ ಆಗಿದೆ ಎಂದು ತಿಳಿಸಲಾಗಿದೆ.

ಅದಲ್ಲದೆ ಡಿಸೆಂಬರ್ 31, 2024 ರ ನಂತರ ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಫರೀದಾಬಾದ್ ಮತ್ತು ಗುರುಗ್ರಾಮ್‌ನಲ್ಲಿ ಡೀಸೆಲ್ ಆಟೋಗಳು ಓಡುವುದಿಲ್ಲ ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.

ಹಾಗೂ ಸೋನೆಪತ್, ರೋಸ್ಟಕ್, ಝಜ್ಜ‌ ಮತ್ತು ಬಾಗ್ರತ್ 31 ಡಿಸೆಂಬರ್ 2025 ರ ಗಡುವನ್ನು ಹೊಂದಿದ್ದು, ಡೀಸೆಲ್ ಆಟೋಗಳು 2026 ರ ನಂತರ ಇಡೀ NCR ನಲ್ಲಿ ಸೇವೆಯಿಂದ ಹೊರಗುಳಿಯಲಿವೆ. ಈ ಆದೇಶ ಹರಿಯಾಣ, ಯುಪಿ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬರುವ NCR ಅನ್ವಯವಾಗಲಿದೆ.

ಹರಿಯಾಣದ ಜಿಲ್ಲೆಗಳಿಗೂ 14 ಜಿಲ್ಲೆಗಳಾದ ಫರೀದಾಬಾದ್, ಗುರುಗ್ರಾಮ್, ನುಹ್, ರೋಕ್ಟಕ್, ಸೋನಿಪತ್, ರೇವಾರಿ, ಜಜ್ಜರ್, ಪಾಣಿಪತ್, ಪಲ್ವಾಲ್, ಭಿವಾನಿ, ಚಾರ್ಖಿ ದಾದ್ರಿ, ಮಹೇಂದ್ರಗಢ, ಜಿಂದ್ ಮತ್ತು ಹಾಗೂ ಇದು ಯುಪಿಯ 8 ಜಿಲ್ಲೆಗಳು, ಬುದ್ಧ ನಗರ, ಗಾಜಿಯಾಬಾದ್, ಗೌತಮ್ ಬುಲಂದ್‌ಶಹರ್, ಬಾಗ್‌ಪತ್, ಹಾಪುರ್, ಶಾಮಿ ಮತ್ತು ಮುಜಾಫರ್‌ನಗರ. ಇನ್ನೂ ರಾಜಸ್ಥಾನದ ಅಲ್ವಾರ್ ಮತ್ತು ಭರತ್‌ಪುರ ಇದರ ವ್ಯಾಪ್ತಿಗೆ ಬರುತ್ತವೆ. ಆದರೆ, CAQM ನ ಈ ಆದೇಶವು ಇಡೀ ದೆಹಲಿಗೆ ಅನ್ವಯಿಸುತ್ತದೆ ಎಂದು ಮಾಹಿತಿ ತಿಳಿಸಿದೆ.

ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿ ವರ್ಷ ವಾಯು ಮಾಲಿನ್ಯದ ಸಮಸ್ಯೆ ಹೆಚ್ಚುತ್ತಿದೆ. ಗಾಳಿಯಲ್ಲಿ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿದೆ ಇದನ್ನು ತಡೆಗಟ್ಟುವ ಉದ್ದೇಶದಿಂದ ಈ ಮೇಲಿನ ಆದೇಶವನ್ನು ಜಾರಿಗೆ ತರಲಾಗಿದೆ.

Leave A Reply

Your email address will not be published.