ಮಹಿಳೆಯರೇ ಗಮನಿಸಿ | ಇದು ಸ್ತನಗಳ ವಿಷಯ ….ಈ ತಪ್ಪಂತೂ ನಿಮ್ಮಿಂದ ಖಂಡಿತ ಆಗಬಾರದು, ಎಚ್ಚರ!!!
ಸ್ತನ (Breast) ದೇಹದ ಪ್ರಮುಖ ಭಾಗಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ಜನರು ಸ್ತನದ ಬಗ್ಗೆ ಮಾತಾಡೋದಕ್ಕೆ ಅಥವಾ ಎಲ್ಲಾದರೂ ಅದರ ಬಗ್ಗೆ ಮಾಹಿತಿ ಕಂಡಾಗ ಓದಲು ನಾಚಿಕೆಯಿಂದ ಹಿಂಜರಿಯುತ್ತಾರೆ. ಹುಡುಗಿಯರಿಗೆ ಇದು ಬಹಳ ಮುಖ್ಯವಾದ ವಿಷಯ. ತಮ್ಮ ಖಾಸಗಿ ಭಾಗಗಳ ಬಗ್ಗೆ ಮಾತನಾಡಲು ಹೆಚ್ಚಾಗಿ ನಾಚಿಕೆಪಡುತ್ತಾರೆ. ಆದರೆ ಇದು ನಾಚಿಕೆ ಪಡುವಂತಹ ವಿಷಯವಲ್ಲ. ಸ್ತನದ ಬಗ್ಗೆ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಸ್ತನದ ಬಗ್ಗೆ ಇಂತಹ ತಪ್ಪುಗಳನ್ನು ಮಾಡಬಾರದು. ಯಾವ ತಪ್ಪು ಮಾಡಬಾರದು ಮತ್ತು ಸ್ತನದ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
ಮೊದಲಾಗಿ ಸ್ತನ ಗಾತ್ರದ (breast size) ಬಗ್ಗೆ ಹೆಳೋದಾದ್ರೆ, ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ ಸ್ತನಗಳು ವಿಭಿನ್ನ ಆಕಾರ ಮತ್ತು ಗಾತ್ರಗಳನ್ನು ಹೊಂದಿರಬಹುದು. ಒಂದು ಸ್ತನ ದೊಡ್ಡದಾಗಿರಬಹುದು ಮತ್ತು ಇನ್ನೊಂದು ಸ್ತನ ಚಿಕ್ಕದಾಗಿರಬಹುದು. ವೈದ್ಯರ ಪ್ರಕಾರ, ಮಹಿಳೆಯರು ಹೆಚ್ಚಾಗಿ ತಮ್ಮ ಸ್ತನಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಆದರೆ ಇದು ತಪ್ಪು. ಹಾಗೂ ಸ್ತನದ ಆಕಾರ ಮತ್ತು ಗಾತ್ರದ ಬಗ್ಗೆ ಕೀಳು ಭಾವನೆ ಹೊಂದುವುದು ಕೂಡಾ ತಪ್ಪು. ಸ್ತನದ ಬಗ್ಗೆ ವಿಶ್ವಾಸ ಹೊಂದಿರಬೇಕು ಎಂದು ಹೇಳುತ್ತಾರೆ.
ಹಾಗೇ ಪ್ರತೀ ತಿಂಗಳು ಸ್ತನ ಪರೀಕ್ಷೆ ಮಾಡುವುದು ತುಂಬಾ ಮುಖ್ಯ.
ಯಾಕಂದ್ರೆ ಒಂದು ವೇಳೆ ಸ್ತನ ಕ್ಯಾನ್ಸರ್ ಇದ್ದಲ್ಲಿ, ಅದರ ಆರಂಭಿಕ ರೋಗ ಲಕ್ಷಣಗಳನ್ನು ಸ್ವಯಂ-ಸ್ತನ ಪರೀಕ್ಷೆ ಮೂಲಕ ಸುಲಭವಾಗಿ ಕಂಡು ಹಿಡಿಯಬಹುದು. ಈ ವೇಳೆ ಸ್ತನದ ಭಾಗ, ಅಂಡರ್ ಆರ್ಮ್ ಮತ್ತು ಕಾಲರ್ ಬೋನ್ ಪರೀಕ್ಷಿಸುವುದು ತುಂಬಾ ಮುಖ್ಯವಾಗಿದೆ. ಯಾಕಂದ್ರೆ ಗಡ್ಡೆ, ಒಂದು ರೀತಿಯ ನೋವು, ಯಾವುದೇ ಸ್ರಾವಗಳು ಇರಬಹುದು ಹಾಗಾಗಿ ಈ ಭಾಗಗಳಲ್ಲಿ ಪರೀಕ್ಷಿಸಬೇಕು.
ಇನ್ನೂ ಸರಿಯಾದ ಸೈಜ್ ನ ಬ್ರಾ ಧರಿಸುವುದು ಬಹಳ ಮುಖ್ಯವಾದದ್ದು, ಒಂದು ವೇಳೆ ಸರಿಯಾದ ಸೈಜ್ ನ ಬ್ರಾ ಧರಿಸದೇ ಇದ್ದರೆ ಅದು ಸ್ತನಕ್ಕೆ ಸಾಕಷ್ಟು ಹಾನಿ ಉಂಟುಮಾಡಬಹುದು. ಹಾಗಾಗಿ ತುಂಬಾ ಸಡಿಲವಾದ ಬ್ರಾ ಅಥವಾ ತುಂಬಾ ಬಿಗಿಯಾದ ಬ್ರಾ ಎರಡೂ ಕೂಡ ಒಳ್ಳೆಯದಲ್ಲ. ಯಾಕಂದ್ರೆ ಇದು ಸ್ತನದ ಸ್ನಾಯುಗಳಲ್ಲಿ ಸೆಳೆತ ಉಂಟುಮಾಡಬಹುದು. ಹಾಗೇ ಪ್ರತೀಕ್ಷಣ ಬ್ರಾ ಧರಿಸಬಾರದು. ಬ್ರಾವನ್ನು ಆಗಾಗ ತೆಗೆಯುತ್ತಿರಬೇಕು. ಆಗ ಸ್ತನಗಳು ಸಡಿಲವಾಗುವುದಿಲ್ಲ. ಬ್ರಾ ಧರಿಸದೇ ಇದ್ದರೆ ಸ್ತನಗಳು ಸಡಿಲಗೊಳ್ಳುತ್ತವೆ ಎಂಬುದು ಸುಳ್ಳು.
ಸ್ತನ ಲೈಟನಿಂಗ್ ಕ್ರೀಮ್ ಇದನ್ನು ಬಳಸಬಾರದು. ಇದು ಸ್ತನದ ಬಣ್ಣ ಬದಲಾಯಿಸಲು ಬಳಸುತ್ತಾರೆ. ಆದರೆ ಇದರ ಬಳಕೆ ಮಾಡಬಾರದು, ಇದು ಸ್ತನಕ್ಕೆ ಹಾನಿ ಮಾಡಬಹುದು. ಸ್ತನ ಕ್ರೀಮ್ ಗಳು ಚರ್ಮಕ್ಕೆ ಹಾನಿ ಉಂಟುಮಾಡುವ ರಾಸಾಯನಿಕಗಳನ್ನು ಹೊಂದಿರುತ್ತವೆ.
ಡಿಸ್ಚಾರ್ಜ್ ಇತ್ಯಾದಿಗಳು ನಡೆಯುತ್ತಿದ್ದರೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಸಲಹೆ. ನಿಮ್ಮ ಸ್ತನದಲ್ಲಿ ಸ್ರಾವ ಇದ್ದರೆ, ಮೊಲೆ ತೊಟ್ಟುಗಳಲ್ಲಿ ಸಮಸ್ಯೆ , ಸ್ತನದಲ್ಲಿ ಒಂದು ರೀತಿಯ ನೋವು, ಸಾಫ್ಟ್ ನೆಸ್ ಇದ್ದರೆ ಹಾಗೂ ಸ್ತನದ ಬಣ್ಣ ಬದಲಾಗುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಇದನ್ನು ನಿರ್ಲಕ್ಷಿಸಬೇಡಿ, ನಿರ್ಲಕ್ಷ್ಯ ಮಾಡಿದರೆ ತುಂಬಾ ಅಪಾಯಕಾರಿ. ಸ್ತನ ಕ್ಯಾನ್ಸರ್ನಂತಹ ಯಾವುದೇ ಸ್ಥಿತಿ ಕಂಡು ಹಿಡಿಯಲು ವೈದ್ಯಕೀಯ ಪರೀಕ್ಷೆ ಅಗತ್ಯವಾಗಿದೆ. ಸ್ತನದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಮುಚ್ಚಿಡುವ ಕೆಲಸ ಮಾಡಬೇಡಿ. ವೈದ್ಯರನ್ನು ಸಂಪರ್ಕಿಸಿ. ಸಮಸ್ಯೆಯನ್ನು ಸರಿಮಾಡಿಕೊಳ್ಳಿ.