ಆಟೋದಲ್ಲೂ ಮನೆ-ಮನೆಗೆ ಬಂತು ಆಲ್ಕೋಹಾಲ್ | ಅಂತಿಂತದ್ದು ಅಲ್ಲ ಕಣ್ರೀ, ಹೆಂಡತಿಯೊಂದಿಗೆ ಮಾತಾಡಲು ಧೈರ್ಯ ತುಂಬಿಸುವ ಮದ್ಯ!!

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ತರಕಾರಿ, ಹಣ್ಣು-ಹಂಪಲು, ಪಾತ್ರ, ಮೀನು ಹೀಗೆ ಅನೇಕ ದಿನಬಳಕೆಯ ಸಾಮಾಗ್ರಿಗಳನ್ನು ಮನೆ-ಮನೆಗೆ ಬಂದು ಮಾರಾಟ ಮಾಡೋದನ್ನ ನೋಡಿದ್ದೇವೆ. ಆದ್ರೆ, ಇದೆಲ್ಲ ಅಷ್ಟೇನೂ ವಿಶೇಷ ಅಲ್ಲ. ಇಲ್ಲಿ ಇರೋ ಮುಖ್ಯ ಪಾಯಿಂಟ್ ಅಂದ್ರೆ ಈ ಟೆಕ್ನಾಲಜಿ ಕಾಲದಲ್ಲಿ ಆನ್ಲೈನ್ ಆರ್ಡರ್ ಇದ್ದರೂ ಕೂಡ ಮದ್ಯವನ್ನೂ ಗಾಡಿಯಲ್ಲಿ ಮಾರಾಟ ಮಾಡುತ್ತಾರಂತೆ.

ವಿಷ್ಯ ಅಷ್ಟೇ ಇದ್ರೆ ಬಿಟ್ ಬಿಡಬಹುದಿತ್ತು. ಓ ಮದ್ಯ ಪ್ರಿಯರಿಗೆ ಚಾನ್ಸ್ ಅನ್ನಬಹುದಿತ್ತು. ಆದ್ರೆ, ಈ ಮಾರಾಟ ಆಗುತ್ತಿರೋ ಮದ್ಯವೆ ಸ್ಪೆಷಲ್. ಯಾಕಂದ್ರೆ, ಇದು ಅಂತಿಂತ ಮದ್ಯ ಅಲ್ಲ. ಹೆಂಡತಿಯೊಂದಿಗೆ ಯಾವುದೇ ಭಯವಿಲ್ಲದೆ ಮಾತನಾಡುವ ಧೈರ್ಯವನ್ನು ತುಂಬಿಸುವ ಮದ್ಯ.

ಹೌದು. ಉತ್ತರ ಪ್ರದೇಶದ ಮುಜಾಫರ್​ಪುರದಲ್ಲಿ ಇ-ರಿಕ್ಷಾವೊಂದು ಗ್ರಾಮ ಪ್ರವೇಶಿಸಿದೆ. ಈ ರಿಕ್ಷಾ ಆಗಮಿಸಿರುವುದೆ ಮದ್ಯ ಮಾರಾಟ ಮಾಡಲು. ಅರೇ ಏನಿದು ಎಂದು ಮನಸ್ಸಲ್ಲಿ ಅಂದುಕೊಂಡರು ಇದು ಸತ್ಯ. ಅಂದಹಾಗೆ, ಈ ರಿಕ್ಷಾ ವಾಲಾ ಧ್ವನಿ ವರ್ಧಕ ಬಳಸಿ, ಮದ್ಯಪಾನ ಮಾರಾಟ ಮಾಡುತ್ತಾ ಬಂದಿದ್ದಾನೆ.

ಈ ವೇಳೆ ಊರಿನ ವ್ಯಕ್ತಿಯೊಬ್ಬ ಗೊಂದಲಗೊಂಡು ಏನಿದು ಎಂದು ಕೇಳಿದಾಗ, ಮದ್ಯಪಾನ ಎಂದಿದ್ದಾನೆ ಆಟೋ ಚಾಲಕ. ಅಷ್ಟೇ ಅಲ್ಲದೆ, ಈ ಆಟೋದಲ್ಲಿ ಬ್ಯಾನರ್ ಬೇರೆ ಅಳವಡಿಸಲಾಗಿದೆ. ಅಷ್ಟಕ್ಕೂ ಅದರಲ್ಲಿ ಬರೆದಿದ್ದನ್ನು ನೋಡಿದ್ರೆ ಓ ಗಾಡ್ ಅನ್ನದೆ ಇರಲ್ಲ. ಯಾಕಂದ್ರೆ, ಅದರಲ್ಲಿ ಆಲ್ಕೋಹಾಲ್ ಸೇವಿಸಿದ ನಂತರ ಯಾವುದೇ ವಾಹನವನ್ನಾದರೂ ಸುಲಭವಾಗಿ ಓಡಿಸಬಹುದು, ಇಂಗ್ಲೀಷ್​ನಲ್ಲಿ ನಿರರ್ಗಳವಾಗಿ ಮಾತನಾಡಬಹುದು ಮತ್ತು ಹೆಂಡತಿಯೊಂದಿಗೆ ಯಾವುದೇ ಭಯವಿಲ್ಲದೆ ಮಾತನಾಡುವ ಧೈರ್ಯವನ್ನು ಹೊಂದಬಹುದು ಎಂದು ಬರೆದುಕೊಂಡಿದೆ. ಒಟ್ಟಾರೆ ಇದೀಗ ಹೆಂಡತಿಯರೊಂದಿಗೆ ಮಾತಾಡಲು ಧೈರ್ಯ ತುಂಬಿಸುವ ಮದ್ಯದತ್ತ ಎಲ್ಲರ ಚಿತ್ತ ಹೋಗಿದೆ….

Leave A Reply

Your email address will not be published.