ಆಟೋದಲ್ಲೂ ಮನೆ-ಮನೆಗೆ ಬಂತು ಆಲ್ಕೋಹಾಲ್ | ಅಂತಿಂತದ್ದು ಅಲ್ಲ ಕಣ್ರೀ, ಹೆಂಡತಿಯೊಂದಿಗೆ ಮಾತಾಡಲು ಧೈರ್ಯ ತುಂಬಿಸುವ ಮದ್ಯ!!
ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ತರಕಾರಿ, ಹಣ್ಣು-ಹಂಪಲು, ಪಾತ್ರ, ಮೀನು ಹೀಗೆ ಅನೇಕ ದಿನಬಳಕೆಯ ಸಾಮಾಗ್ರಿಗಳನ್ನು ಮನೆ-ಮನೆಗೆ ಬಂದು ಮಾರಾಟ ಮಾಡೋದನ್ನ ನೋಡಿದ್ದೇವೆ. ಆದ್ರೆ, ಇದೆಲ್ಲ ಅಷ್ಟೇನೂ ವಿಶೇಷ ಅಲ್ಲ. ಇಲ್ಲಿ ಇರೋ ಮುಖ್ಯ ಪಾಯಿಂಟ್ ಅಂದ್ರೆ ಈ ಟೆಕ್ನಾಲಜಿ ಕಾಲದಲ್ಲಿ ಆನ್ಲೈನ್ ಆರ್ಡರ್ ಇದ್ದರೂ ಕೂಡ ಮದ್ಯವನ್ನೂ ಗಾಡಿಯಲ್ಲಿ ಮಾರಾಟ ಮಾಡುತ್ತಾರಂತೆ.
ವಿಷ್ಯ ಅಷ್ಟೇ ಇದ್ರೆ ಬಿಟ್ ಬಿಡಬಹುದಿತ್ತು. ಓ ಮದ್ಯ ಪ್ರಿಯರಿಗೆ ಚಾನ್ಸ್ ಅನ್ನಬಹುದಿತ್ತು. ಆದ್ರೆ, ಈ ಮಾರಾಟ ಆಗುತ್ತಿರೋ ಮದ್ಯವೆ ಸ್ಪೆಷಲ್. ಯಾಕಂದ್ರೆ, ಇದು ಅಂತಿಂತ ಮದ್ಯ ಅಲ್ಲ. ಹೆಂಡತಿಯೊಂದಿಗೆ ಯಾವುದೇ ಭಯವಿಲ್ಲದೆ ಮಾತನಾಡುವ ಧೈರ್ಯವನ್ನು ತುಂಬಿಸುವ ಮದ್ಯ.
ಹೌದು. ಉತ್ತರ ಪ್ರದೇಶದ ಮುಜಾಫರ್ಪುರದಲ್ಲಿ ಇ-ರಿಕ್ಷಾವೊಂದು ಗ್ರಾಮ ಪ್ರವೇಶಿಸಿದೆ. ಈ ರಿಕ್ಷಾ ಆಗಮಿಸಿರುವುದೆ ಮದ್ಯ ಮಾರಾಟ ಮಾಡಲು. ಅರೇ ಏನಿದು ಎಂದು ಮನಸ್ಸಲ್ಲಿ ಅಂದುಕೊಂಡರು ಇದು ಸತ್ಯ. ಅಂದಹಾಗೆ, ಈ ರಿಕ್ಷಾ ವಾಲಾ ಧ್ವನಿ ವರ್ಧಕ ಬಳಸಿ, ಮದ್ಯಪಾನ ಮಾರಾಟ ಮಾಡುತ್ತಾ ಬಂದಿದ್ದಾನೆ.
ಈ ವೇಳೆ ಊರಿನ ವ್ಯಕ್ತಿಯೊಬ್ಬ ಗೊಂದಲಗೊಂಡು ಏನಿದು ಎಂದು ಕೇಳಿದಾಗ, ಮದ್ಯಪಾನ ಎಂದಿದ್ದಾನೆ ಆಟೋ ಚಾಲಕ. ಅಷ್ಟೇ ಅಲ್ಲದೆ, ಈ ಆಟೋದಲ್ಲಿ ಬ್ಯಾನರ್ ಬೇರೆ ಅಳವಡಿಸಲಾಗಿದೆ. ಅಷ್ಟಕ್ಕೂ ಅದರಲ್ಲಿ ಬರೆದಿದ್ದನ್ನು ನೋಡಿದ್ರೆ ಓ ಗಾಡ್ ಅನ್ನದೆ ಇರಲ್ಲ. ಯಾಕಂದ್ರೆ, ಅದರಲ್ಲಿ ಆಲ್ಕೋಹಾಲ್ ಸೇವಿಸಿದ ನಂತರ ಯಾವುದೇ ವಾಹನವನ್ನಾದರೂ ಸುಲಭವಾಗಿ ಓಡಿಸಬಹುದು, ಇಂಗ್ಲೀಷ್ನಲ್ಲಿ ನಿರರ್ಗಳವಾಗಿ ಮಾತನಾಡಬಹುದು ಮತ್ತು ಹೆಂಡತಿಯೊಂದಿಗೆ ಯಾವುದೇ ಭಯವಿಲ್ಲದೆ ಮಾತನಾಡುವ ಧೈರ್ಯವನ್ನು ಹೊಂದಬಹುದು ಎಂದು ಬರೆದುಕೊಂಡಿದೆ. ಒಟ್ಟಾರೆ ಇದೀಗ ಹೆಂಡತಿಯರೊಂದಿಗೆ ಮಾತಾಡಲು ಧೈರ್ಯ ತುಂಬಿಸುವ ಮದ್ಯದತ್ತ ಎಲ್ಲರ ಚಿತ್ತ ಹೋಗಿದೆ….